Operation Mahadev: ಆಪರೇಷನ್ ಮಹಾದೇವ್‌: ಭಾರತೀಯ ಸೇನೆಯ ಕಾರ್ಯಾಚರಣೆ ಹೇಗಿತ್ತು ?

Operation Mahadev: ಮಹತ್ವದ ಬೆಳವಣಿಗೆಯಲ್ಲಿ ಶ್ರೀನಗರದ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಎನ್ನುವ ಉಗ್ರ ಸೇರಿ ಮೂರು ಜನ ಉಗ್ರರನ್ನು ಭಾರತೀಯ ಸೇನೆಯು ಎನ್ಕೌಂಟರ್ ಮಾಡಿದೆ. ಪಹಲ್ಗಾಮ್ ದಾಳಿಯಲ್ಲಿ ಕನ್ನಡಿಗರು ಸೇರಿದಂತೆ ಒಟ್ಟು 26 ಜನ ಮೃತಪಟ್ಟಿದ್ದರು. ಈ ಭೀಕರ ಉಗ್ರರ ದಾಳಿಗೆ ಇಡೀ ಭಾರತವೇ ಬೆಚ್ಚಿ ಬಿದ್ದಿತ್ತು. ಅಲ್ಲದೇ ಈ ದಾಳಿಗೆ ಪ್ರತೀಕವಾಗಿ ಭಾರತವು - ಶತ್ರು ರಾಷ್ಟ್ರ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ ಕಾರ್ಯಚರಣೆಯನ್ನು ನಡೆಸಿತ್ತು. ಇದೀಗ ಸೋಮವಾರ (ಜುಲೈ 28)ದಂದು ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ.

ಭಾರತೀಯ ಸೇನೆಯ ಪ್ರಕಾರ, ಇಂದು ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಮಟಾಷ್ ಮಾಡಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಹತ್ಯೆಗೀಡಾದ ಉಗ್ರರು ಪಾಕಿಸ್ತಾನಿಗಳು ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ಗೆ ಸೇರಿದವರು ಎಂದು ಗುರುತಿಸಲಾಗಿದೆ ಎಂದು ಶ್ರೀನಗರದ ಎಸ್‌ಎಸ್‌ಪಿ ಜಿವಿ ಸುಂದೀಪ್ ಚಕ್ರವರ್ತಿ ಅವರು ಖಚಿತಪಡಿಸಿದ್ದಾರೆ. ಈ ಕಾರ್ಯಾಚರಣೆಗೆ ಭಾರತೀಯ ಸೇನೆಯು ಆಪರೇಷನ್ ಮಹಾದೇವ್ ಎನ್ನುವ ಹೆಸರನ್ನು ಇರಿಸಲಾಗಿದೆ.

Operation Mahadev 3 terrorists who attacked Pahalgam killed

ಈ ಕಾರ್ಯಾಚರಣೆಯ ಭಾಗವಾಗಿ ಉಗ್ರರ ಚಲನವಲನದ ಮೇಲೆ ಕಣ್ಣಿರಿಸಲಾಗಿದೆ. ಉಗ್ರರನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ಆಸಿಫ್ ಫೌಜಿ, ಸುಲೇಮಾನ್ ಶಾ ಹಾಗೂ ಅಬು ತಲ್ಹಾ ಎನ್ನುವ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ಇನ್ನೂ ಮುಂದುವರಿದಿದೆ. ಗುಪ್ತಚರ ಮಾಹಿತಿಯ ಮೇರೆಗೆ ಇಲ್ಲಿನ ಹರ್ವಾನ್‌ನ ಮುಲ್ನಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು ಎಂದು ಹೇಳಲಾಗಿದೆ.

ಭಾರತೀಯ ಸೇನೆಯೊಂದಿಗೆ CRPF ಮತ್ತು J&K ಪೊಲೀಸರ ತಂಡಗಳು ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು. ತೀವ್ರ ಗುಂಡಿನ ದಾಳಿಯ ನಂತರದಲ್ಲಿ ಮೂವರು ಉಗ್ರರು ಮೃತಪಟ್ಟಿದ್ದಾರೆ. ಇದೇ ವರ್ಷ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಈ ದಾಳಿಯನ್ನು ನಡೆಸಿದ ಉಗ್ರರ ಮೇಲೆ ಇನ್ನೂ ಯಾವುದೇ ಕ್ರಮ ಜರುಗಿಸಿಲ್ಲ. ಎಲ್ಲಿದ್ದಾರೆ ಆ ಉಗ್ರರು ಇಷ್ಟೊಂದು ಸಮಯವೇಕೆ ಎಂದು ಈಚೆಗೆ ವಿರೋಧ ಪಕ್ಷಗಳು ಆಡಳಿತ ಪಕ್ಷದ ಮೇಲೆ ಮುಗಿಬಿದ್ದಿದ್ದವು. ಇದರ ಬೆನ್ನಲ್ಲೇ ಆಪರೇಷನ್ ಮಹಾದೇವ್ ಕಾರ್ಯಾಚರಣೆ ಎಲ್ಲರ ಬಾಯಿ ಮುಚ್ಚುವಂತೆ ಮಾಡಿದೆ.

ಎಲ್ಲಿ, ಹೇಗಿತ್ತು ಕಾರ್ಯಾಚರಣೆ: ಇನ್ನು ಆಪರೇಷನ್ ಮಹಾದೇವ ಕಾರ್ಯಾಚರಣೆಯು ಜೋರಾಗಿತ್ತು. ಕಳೆದ ತಿಂಗಳಿನಿಂದಲೂ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು. ಪಹಲ್ಗಾಮ್ ದಾಳಿ ಮಾಡಿದ್ದ ಉಗ್ರರು ಶ್ರೀನಗರ ನಗರದಿಂದ ಅಂದಾಜು 20 ಕಿ.ಮೀ ದೂರದಲ್ಲಿರುವ ಡಚಿಗಮ್ ಎನ್ನುವ ಪ್ರದೇಶದ ಕಡೆಗೆ ಹೋಗುವಾಗ ಈ ದಾಳಿ ನಡೆದಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+