ಜಸ್ಟಿನ್ ಬೀಬರ್ ಕಾರ್ಯಕ್ರಮಕ್ಕೆ ಫೆ. 22ರಿಂದ ಆನ್ ಲೈನ್ ಬುಕಿಂಗ್

Posted By:
Subscribe to Oneindia Kannada

ಮುಂಬೈ, ಫೆಬ್ರವರಿ 15: ವಿಶ್ವವಿಖ್ಯಾತ ಪಾಪ್ ಸಂಗೀತಗಾರ, ಹಾಡುಗಾರ, ಕೆನಡಾ ಪಾಪ್ ಲೋಕದ ಸೂಪರ್ ಸ್ಟಾರ್, ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ವಿಜೇತ ಜಸ್ಟಿನ್ ಬೀಬರ್ ಅವರು, ಭಾರತದಲ್ಲಿ ಮೇ 10ರಂದು ನಡೆಸಿಕೊಡುವ ಸಂಗೀತ ಕಾರ್ಯಕ್ರಮದ ಟಿಕೆಟ್ ಗಳು ಆನ್ ಲೈನ್ ನಲ್ಲಿ ಫೆಬ್ರವರಿ 22ರಿಂದ ಆರಂಭವಾಗಲಿವೆ.

ಖ್ಯಾತ ಜಾಲತಾಣ 'ಬುಕ್ ಮೈ ಷೋ' ಮೂಲಕ ಟಿಕೆಟ್ ಗಳನ್ನು ಬುಕ್ ಮಾಡಬಹುದಾಗಿದೆ ಎಂದು ಕಾರ್ಯಕ್ರಮವನ್ನು ಆಯೋಜಿಸಿರುವ ವೈಟ್ ಫಾಕ್ಸ್ ಇಂಡಿಯಾ ಸಂಸ್ಥೆ ಹೇಳಿದೆ.

ಹಲವಾರು ತಿಂಗಳುಗಳಿಂದ ಅವರು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿತ್ತು. ಭಾರತದಲ್ಲೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಅವರು, ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿಕೊಡಬೇಕೆಂಬ ಬೇಡಿಕೆಯಂತೂ ದೀರ್ಘಕಾಲದಿಂದಲೂ ಕೇಳಲ್ಪಡುತ್ತಿತ್ತು. ಅದೆಲ್ಲದಕ್ಕೂ ಈಗ ಕಾಲ ಕೂಡಿಬಂದಿದೆ.

ಅಂದಹಾಗೆ, ಕಾರ್ಯಕ್ರಮದ ಬಜೆಟ್ ಏನು, ಕಾರ್ಯಕ್ರಮ ಯಾಕೆ ಪ್ರಾಮುಖ್ಯತೆ ಪಡೆದಿದೆ, ಟಿಕೆಟ್ ಬೆಲೆ ಎಷ್ಟು ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ....

ದಾಖಲೆ ಬರೆಯಲಿರುವ ಕಾರ್ಯಕ್ರಮ

ದಾಖಲೆ ಬರೆಯಲಿರುವ ಕಾರ್ಯಕ್ರಮ

ಏಷ್ಯಾ ಪ್ರವಾಸದ ವೇಳೆ ಅವರು, ಇಸ್ರೇಲ್ ಹಾಗೂ ದುಬೈಗೂ ಭೇಟಿ ನೀಡಿ ಅಲ್ಲಿಯೂ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆಂದು ಸಂಸ್ಥೆ ತಿಳಿಸಿದೆ. ಭಾರತದಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮಕ್ಕೆ ಸುಮಾರು 26 ಕೋಟಿ ರು. ವೆಚ್ಛವಾಗಲಿದ್ದು ಈವರೆಗೆ ಭಾರತದಲ್ಲಿ ನಡೆದಿರುವ ಸಂಗೀತ ಕಾರ್ಯಕ್ರಮಗಳ ಬಜೆಟ್ ವಿಚಾರದಲ್ಲಿ ಹೊಸ ದಾಖಲೆ ಬರೆಯಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಅಪರೂಪದ ಸಂಗೀತ ಕಾರ್ಯಕ್ರಮ?

ಅಪರೂಪದ ಸಂಗೀತ ಕಾರ್ಯಕ್ರಮ?

ಭಾರತ ಪ್ರವಾಸದ ವೇಳೆ ಅವರು ತಮ್ಮ ಇತ್ತೀಚಿನ ಜನಪ್ರಿಯ ಹಾಗೂ ತಮ್ಮ ಈವರೆಗಿನ ವೃತ್ತಿಜೀವನದ ಬಹು ಯಶಸ್ವೀ ಆಲ್ಬಂ ಆದ ಪರ್ಪಸ್ ಎಂಬ ಆಲ್ಬಂನ ಗೀತೆಗಳನ್ನು ಪ್ರಧಾನವಾಗಿ ಹಾಡಲಿದ್ದಾರೆಂದು ಸಂಸ್ಥೆ ತಿಳಿಸಿದೆ. ಮುಂಬೈನಲ್ಲಿ ಈತನ ಸಂಗೀತ ಕಾರ್ಯಕ್ರಮವು, ಭಾರತದಲ್ಲಿನ ಆತನ ಅಭಿಮಾನಿಗಳಿಗೆ ಈ ಶತಮಾನದಲ್ಲೇ ಕೇವಲ ಒಂದು ಬಾರಿ ಮಾತ್ರ ಸಿಗುವಂಥ ಅವಕಾಶ ಎಂದು ಹೇಳಲಾಗಿದೆ.

ಫೆ. 22ರಿಂದ ಟಿಕೆಟ್ ಬುಕ್ ಮಾಡಬಹುದು

ಫೆ. 22ರಿಂದ ಟಿಕೆಟ್ ಬುಕ್ ಮಾಡಬಹುದು

ಈ ಕಾರ್ಯಕ್ರಮಕ್ಕೆ ಟಿಕೆಟ್ ಗಳನ್ನು 'ಬುಕ್ ಮೈ ಷೋ' ವೆಬ್ ಸೈಟ್ ನಿಂದ ಬುಕ್ ಮಾಡಬಹುದಾಗಿದ್ದು, ಟಿಕೆಟ್ ನ ಕನಿಷ್ಠ ಬೆಲೆ 4,000 ರು. ಆಗಿದೆ ಎಂದು ಸಂಸ್ಥೆ ತಿಳಿಸಿದೆ. ಫೆಬ್ರವರಿ 22ರ ನಂತರ ಟಿಕೆಟ್ ಬುಕಿಂಗ್ ಆರಂಭವಾಗಲಿದೆ.

ಕೆನಡಾದ ಸಂಗೀತ ಮಾಂತ್ರಿಕ

ಕೆನಡಾದ ಸಂಗೀತ ಮಾಂತ್ರಿಕ

1994ರ ಮಾರ್ಚ್ 1ರಂದು ಕೆನಡಾದಲ್ಲಿ ಜನಿಸಿದ ಈತ ಬಾಲ್ಯದಿಂದಲೂ ಸಂಗೀತವೆಂದರೆ ಪಂಚಪ್ರಾಣ. ಚಿಕ್ಕ ವಯಸ್ಸಿನಲ್ಲೇ ಪಾಪ್ ಸಂಗೀತದಲ್ಲಿ ಸಾಧನೆಗಿಳಿದ ಈತ ಈಗ ತನ್ನ ಇಪ್ಪತ್ತೆರಡನೇ ವಯಸ್ಸಿಗೆ ವಿಶ್ವದೆಲ್ಲೆಡೆ ಜನಪ್ರಿಯನಾಗಿದ್ದಾನೆ.

ಸಂಗೀತದ ರಸದೌತಣ

ಸಂಗೀತದ ರಸದೌತಣ

ಈವರೆಗೆ, ಮೈ ವರ್ಲ್ಡ್, ನೆವರ್ ಸೇ ನೆವರ್, ಬಿಲಿವ್, ಜರ್ನಲ್ಸ್, ಆ್ಯಂಡ್ ಅದರ್ ಅಪಿಯರೆನ್ಸಸ್, ಪರ್ಪಸ್ ಎಂಬ ಆಲ್ಬಂ ಗಳನ್ನು ಬಿಡುಗಡೆಗೊಳಿಸಿದ್ದಾರೆ. ಈವರೆಗೆ ಈತ ಸೃಷ್ಟಿಸಿದ ಆಲ್ಬಂಗಳೆಲ್ಲವೂ ಯುವಜನರ ಹುಚ್ಚೆಬ್ಬಿಸಿದೆ. ಅದರಲ್ಲೂ ಅವರ ಇತ್ತೀಚೆಗಿನ ಆಲ್ಬಂ ಪರ್ಪಸ್ ಅಂತೂ ಹೊಸ ಯುಗದ ನಾಂದಿ ಎನ್ನುವಷ್ಟರ ಮಟ್ಟಿಗೆ ಸಂಚಲನ ಸೃಷ್ಟಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The fans of Canada pop super star and Grammy winner Justin Bieber can book the tickets via book my show website for Mumbai Musical night organised on May 10th of this year.
Please Wait while comments are loading...