ಕಪ್ಪು ಹಣ ಬದಲಿಸುವ ದಂಧೆಯ ಕೈಗಳು, ಸರಕಾರ ಏನ್ ಮಾಡ್ಬೇಕು?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 24: ಕಪ್ಪು ಹಣವನ್ನು ಕಾನೂನಿನ ಪ್ರಕಾರ ಹೇಗೆ ಸರಿಪಡಿಸಿಕೊಳ್ತಾರೆ ಎಂಬುದು ಜನಸಾಮಾನ್ಯರ ಕುತೂಹಲ. ಅದನ್ನು ವಿವರಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಇಡೀ ಪ್ರಕ್ರಿಯೆಯನ್ನು ಮೂರು ಭಾಗಗಳಾಗಿ ವಿಂಗಡಿಸಿ ನೋಡಬಹುದು. ಈ ಪ್ರಕ್ರಿಯೆಯಲ್ಲಿ ಮೊದಲು ಆ ಹಣದ ಮಾಲೀಕನ ಬಗ್ಗೆ ತೆರಿಗೆ ಅಧಿಕಾರಿಗಳಿಗೆ ಅನುಮಾನ ಬರದಂತೆ ಮಾಡಲಾಗುತ್ತದೆ.

ಆ ನಂತರ ಕಪ್ಪು ಹಣವನ್ನು ಬ್ಯಾಂಕ್ ಗೆ ಜಮೆ ಅಥವಾ ಡ್ರಾ ಮಾಡುವ ಮೂಲಕ ನಿರ್ವಹಿಸುವ ಹಲವು ಘಟಕಗಳು ಕೆಲಸ ಆರಂಭಿಸುತ್ತವೆ, ಇಲ್ಲಿ ಘಟಕ ಅಂದರೆ ವ್ಯಕ್ತಿ, ಸಂಸ್ಥೆ, ಕಂಪನಿ ಯಾವುದಾದರೂ ಆಗಿರಬಹುದು. ಅಂಥವು ಮೊದಲಿಗೆ ಕಪ್ಪು ಹಣವನ್ನು ಬ್ಯಾಂಕ್ ಗೆ ಹಾಕುತ್ತವೆ.[ಕಪ್ಪು ಹಣ ಬದಲಿಸುವವರ ಜಾಲದಲ್ಲಿ ಸಿಲುಕೀರಿ ಜೋಕೆ!]

ಇದಾದ ಮೇಲೆ ಕಪ್ಪುಹಣ ಹೊಂದಿರುವ ಮಾಲೀಕನಿಗೆ ವ್ಯವಹಾರಗಳ ಮೂಲಕ ಅಧಿಕೃತವಾಗಿ ಈ ಹಣ ಸಂಪಾದನೆಯಾದಂತೆ ತೋರಿಸಲಾಗುತ್ತದೆ. ಮೇಲ್ನೋಟಕ್ಕೆ ನ್ಯಾಯಯುತವಾದ ಆದಾಯದಿಂದಲೇ ಬಂದ ಹಣದ ರೀತಿ ಕಾಣಿಸುವಂತೆ ಮಾಡಲಾಗುತ್ತದೆ. ಇದು ಇಲ್ಲಿ ವಿವರಿಸಿರುವಂತೆ ಸರಳವಾದ ಪ್ರಕ್ರಿಯೆ ಅಲ್ಲ ಎಂಬುದು ಬೇರೆ ಮಾತು.

ಲೆಕ್ಕವನ್ನು ತೋರಿಸ್ತಾರೆ

ಲೆಕ್ಕವನ್ನು ತೋರಿಸ್ತಾರೆ

ಇಂಥ ಘಟಕದವರು ವಿದೇಶಗಳಲ್ಲಿ ಬೇನಾಮಿ ಕಂಪನಿಗಳನ್ನು ಸೃಷ್ಟಿಸಿಕೊಂಡಿರುತ್ತಾರೆ. ಆ ಕಂಪನಿಯು ಬೇರೇನೂ ವ್ಯವಹಾರ ಮಾಡದೆ, ಈ ರೀತಿ ಕಪ್ಪು ಹಣವನ್ನು ಸಕ್ರಮ ಮಾಡುವುದನ್ನೇ ಕೆಲಸ ಮಾಡಿಕೊಂಡಿರುತ್ತದೆ. ಅಂಥ ಕಂಪನಿ ಅಥವಾ ವ್ಯಕ್ತಿ ಜೊತೆಗೆ ವ್ಯವಹಾರ ಮಾಡಿದಂತೆ, ಅದರ ಭಾಗವಾಗಿ ಹಣ ಚುಕ್ತಾ ಮಾಡಿರುವಂತೆ ಕಪ್ಪು ಹಣ ಇರುವ ವ್ಯಕ್ತಿ ಲೆಕ್ಕ ತೋರಿಸುತ್ತಾನೆ.

ಕಡಿಮೆ ತೆರಿಗೆ ಅಥವಾ ತೆರಿಗೆಯಿಲ್ಲ

ಕಡಿಮೆ ತೆರಿಗೆ ಅಥವಾ ತೆರಿಗೆಯಿಲ್ಲ

ಕೆಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆದಾಯಕ್ಕೆ ತೆರಿಗೆ ಕಟ್ಟುವ ಅಗತ್ಯ ಇಲ್ಲ. ಅಥವಾ ತೀರಾ ಕಡಿಮೆ ತೆರಿಗೆ ಕಟ್ಟಬೇಕಿರುತ್ತದೆ. ಅಂಥ ದೇಶಗಳನ್ನೇ ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕೊಂಕಣ ಸುತ್ತಿ ಮೈಲಾರಕ್ಕೆ ಎಂಬ ಗಾದೆ ಇದೆಯಲ್ಲಾ, ಅದೇ ರೀತಿ ಈ ವ್ಯವಹಾರ ನಡೆಯುತ್ತದೆ. ಭಾರತ ದೇಶದ ದುಡ್ಡೇ ಬೇರೆ ಯಾವುದೋ ದೇಶಕ್ಕೆ ಹೋಗಿ ಮತ್ತೆ ಹಿಂತಿರುಗುತ್ತದೆ.

ಚಿನ್ನ, ವಜ್ರ ಫೇವರಿಟ್

ಚಿನ್ನ, ವಜ್ರ ಫೇವರಿಟ್

ಅಂದಹಾಗೆ, ಕಪ್ಪು ಹಣದ ವಿಚಾರವಾಗಿ ಸರಕಾರದ ಮುಂದಿನ ಗುರಿ ಏನು ಎಂಬುದು ಗೊತ್ತಾ? ಚಿನ್ನ ಹಾಗೂ ವಜ್ರ. ಕಡಿಮೆ ಸ್ಥಳದಲ್ಲಿ ಇಡಬಹುದಾದ ಬೆಲೆ ಬಾಳುವ ವಜ್ರಗಳು ಇಂಥವರ ಫೇವರಿಟ್. ಆದ್ದರಿಂದ ಚಿನ್ನ ಹಾಗೂ ವಜ್ರದ ವ್ಯವಹಾರಗಳನ್ನು ಬಿಗಿಗೊಳಿಸುವ ಸಾಧ್ಯತೆಗಳಿವೆ.

ಹವಾಲಾ ದಂಧೆ

ಹವಾಲಾ ದಂಧೆ

ಇನ್ನೊಂದು ಜಾಲವೆಂದರೆ ಹವಾಲಾ. ಈ ವ್ಯವಹಾರ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಾ? ಈ ಹಿಂದೆ ವಿವರಿಸಿದ ಹಾಗೆ ಭಾರತ ದೇಶದ ದುಡ್ಡೇ ಬೇರೆ ಯಾವುದೋ ದೇಶಕ್ಕೆ ಹೋಗಿ ಮತ್ತೆ ಹಿಂತಿರುಗುತ್ತದೆ. ಇಂಥ ದಂಧೆಗೆ ತಡೆ ಹಾಕಲು ಸರಕಾರ ಚಿಂತಿಸಿದೆ.

ಬೇನಾಮಿ ಆಸ್ತಿ

ಬೇನಾಮಿ ಆಸ್ತಿ

ಬೇನಾಮಿ ಆಸ್ತಿಗಳು ಒಂದು ಕಾಲಕ್ಕೆ ಕಪ್ಪು ಹಣ ಇರುವವರ ಪಾಲಿಗೆ ಬಹಳ ಇಷ್ಟದ್ದಾಗಿತ್ತು. ತಮ್ಮದೇ ಹಣದಲ್ಲಿ ತಮ್ಮ ಆಪ್ತರು, ಸಂಬಂಧಿಕರು ಅಥವಾ ಹೇಳಿದಂತೆ ಕೇಳುವವರ ಹೆಸರಿನಲ್ಲಿ ಆಸ್ತಿ ಮಾಡಿ, ತಮಗೆ ಅಗತ್ಯ ಇರುವಾಗ ಮಾರಿ, ಹಣವಾಗಿ ಪರಿವರ್ತಿಸುತ್ತಾರೆ. ಇತ್ತೀಚೆಗೆ ನಿಯಮಾವಳಿಗಳು ಕಠಿಣವಾಗಿರುವುದರಿಂದ ಈ ವಿಧಾನದ ಬಗ್ಗೆ ಅಂಥ ಒಲವಿಲ್ಲ.

ಭಾರತದ ನಗದು ಆರ್ಥಿಕತೆ

ಭಾರತದ ನಗದು ಆರ್ಥಿಕತೆ

17,54,000 ಕೋಟಿ ಭಾರತದ ನಗದು ಆರ್ಥಿಕತೆಯ ಗಾತ್ರ. ಅದರಲ್ಲಿ ಶೇ 45ರಷ್ಟು 500ರ ನೋಟು, ಶೇ 39ರಷ್ಟು 1000ದ ನೋಟು, ಉಳಿದ ನೋಟುಗಳು ಶೇ 16ರಷ್ಟು (ಆದರೆ ಶೇ 53ರಷ್ಟು ಪ್ರಮಾಣ) ಇದ್ದವು. ಈಗಿನ ಅಂದಾಜಿನ ಪ್ರಕಾರ ರದ್ದಾದ ನೋಟುಗಳು ಶೇ 80ರಷ್ಟು ಚಲಾವಣೆಯಲ್ಲಿದ್ದವು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೂಲಗಳು ತಿಳಿಸಿವೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
How to convert black money? It's a curiosity of common people. Here Oneindia explains how agents of black money people work on it.
Please Wait while comments are loading...