ಪುಣೆ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತಂದ ಕಾಲೇಜು ಪ್ರವಾಸ

Posted By:
Subscribe to Oneindia Kannada

ಪುಣೆ, ಫೆಬ್ರವರಿ,02: ಕಾಲೇಜು ವಿದ್ಯಾರ್ಥಿಗಳು ತೆರಳಿದ್ದು, ಪ್ರವಾಸಕ್ಕೆಂದು. ಆದರೆ ಆ ಪ್ರವಾಸ ಕೆಲವು ವಿದ್ಯಾರ್ಥಿಗಳ ಬಾಳಿಗೆ ಯಮಪಾಶವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಹೌದು ಈ ನರಕ ಸದೃಶ ಸಮಯಕ್ಕೆ ಸಿಲುಕಿದ್ದು ಪುಣೆಯ ಇನಾಂದಾರ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು.

ಫೆಬ್ರವರಿ ಒಂದರಂದು ಮಹಾರಾಷ್ಟ್ರದ ರಾಯ್ ಗಡ ಸಮೀಪವಿರುವ ಮರೂಡ್ ಸಮುದ್ರ ನೋಡಲು ತೆರಳಿದ್ದಾರೆ. ಅದರಲ್ಲಿ ಕೆಲವು ವಿದ್ಯಾರ್ಥಿಗಳು ಈಜಲು ಹೋಗಿದ್ದು ಸಮುದ್ರ ಪಾಲಾಗಿದ್ದಾರೆ. ಅದರಲ್ಲಿ 13 ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದು. ಸತ್ತವರ ಸಂಖ್ಯೆ 13ಕ್ಕೂ ಏರಿದೆ. ಇನ್ನೂ ಕೆಲವು ವಿದ್ಯಾರ್ಥಿಗಳು ಕಾಣೆಯಾಗಿದ್ದಾರೆ.

ಸಮುದ್ರದ ಅಲೆಗಳ ಹೊಡೆತಕ್ಕೆ ಕೊಚ್ಚಿಹೋದ ವಿದ್ಯಾರ್ಥಿಗಳನ್ನು ಹುಡುಕಲು ಕೋಸ್ಟ್ ಗಾರ್ಡ್ ಏರ್ ಕ್ರಾಫ್ಟ್ ಐಸಿ117 ಹಾಗೂ ಎರಡು ಮೀನುಗಾರರ ದೋಣಿಗಳನ್ನು ಕರೆಸಿಕೊಂಡಿದ್ದು, ಶೋಧಕಾರ್ಯ ಮುಂದುವರೆದಿದೆ. ಈ ಅವಘಡದ ಬಗ್ಗೆ ಮಾತನಾಡಿದ ಇನಾಂದಾರ್ ಕಾಲೇಜಿನ ಟ್ರಸ್ಟಿ, 'ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿ ಸಹಾಯದಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ. ಪೋಷಕರು ಹೆದರುವುದು ಬೇಡ' ಎಂದು ಹೇಳಿದ್ದಾರೆ.[ಇಂಜಿನಿಯರಿಂಗ್ ಪದವಿಧರರ ವ್ಯಥೆ ಬಿಚ್ಚಿಟ್ಟ ಸಮೀಕ್ಷೆ]

ವಿಷಯ ತಿಳಿದ ವಿದ್ಯಾರ್ಥಿಗಳ ಪೋಷಕರು ಕಾಲೇಜಿನ ಮುಂದೆ ಜಮಾಯಿಸಿದ್ದು, ಕಾಲೇಜು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ಸುದ್ದಿಯ ಮಾಹಿತಿಯ ಜೊತೆಗೆ ಇನ್ನಷ್ಟು ಸುದ್ದಿಗಳು ಇಲ್ಲಿವೆ. [ಪಿಟಿಐ]

ಮರುಜೀವ ಪಡೆದ ಪುಣೆ ಕಾಲೇಜಿನ ವಿದ್ಯಾರ್ಥಿನಿ

ಮರುಜೀವ ಪಡೆದ ಪುಣೆ ಕಾಲೇಜಿನ ವಿದ್ಯಾರ್ಥಿನಿ

ಮಹಾರಾಷ್ಟ್ರದ ಮುರೂಡ್ ಜನ್ಜೀರ ಸಮುದ್ರದ ಪಾಲಾಗಿದ್ದ ವಿದ್ಯಾರ್ಥಿಗಳಲ್ಲಿ ಬದುಕುಳಿದ ಒಬ್ಬ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನಮೋಹಕ ಬೊಬಲ್ಸ್

ಮನಮೋಹಕ ಬೊಬಲ್ಸ್

ಇಸ್ಲಾಮಾಬಾದ್ ಬಳಿಯ ಲೇಕ್ ಪಾರ್ಕಿಗೆ ನೋಡುಗರನ್ನು ಸೆಳೆಯಲು ಮಾರಾಟಗಾರ ನೀರಿನ ಬೊಬಲ್ಸ್ ಊದಿದರು. ಇದು ಸಂಜೆಯ ಸಮಯದಲ್ಲಿ ಮನಮೋಹಕವಾಗಿ ಕಾಣಿಸಿತು.

ರೋಹಿತ್ ವೇಮುಲ ಪರ ಘೋಷಣೆ ಕೂಗಿದ ಬೆಂಗಳೂರು ವಿದ್ಯಾರ್ಥಿಗಳು

ರೋಹಿತ್ ವೇಮುಲ ಪರ ಘೋಷಣೆ ಕೂಗಿದ ಬೆಂಗಳೂರು ವಿದ್ಯಾರ್ಥಿಗಳು

ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜಿನ ಆರ್ಟ್ಸ್ ಮತ್ತು ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಗಳು ಸಾವನ್ನಪ್ಪಿದ ಹೈದರಾಬಾದ್ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ರೋಹಿತ್ ವೇಮುಲ ಪರ ಘೋಷಣೆ ಕೂಗಿದರು.[ಹೈದರಾಬಾದ್ : ನೊಂದ ದಲಿತ ವಿದ್ಯಾರ್ಥಿ ಆತ್ಮಹತ್ಯೆ, ವಿವಿ ಪ್ರಕ್ಷುಬ್ಧ]

ವಿವಾಹದ ಹೊಸ್ತಿಲಲ್ಲಿ ಭಾರತ ಕ್ರಿಕೆಟ್ ಆಟಗಾರ ವರುಣ್ ಆರೋನ್

ವಿವಾಹದ ಹೊಸ್ತಿಲಲ್ಲಿ ಭಾರತ ಕ್ರಿಕೆಟ್ ಆಟಗಾರ ವರುಣ್ ಆರೋನ್

ಭಾರತ ಕ್ರಿಕೆಟ್ ತಂಡದ ಆಟಗಾರ ವರುಣ್ ಆರೋನ್ ಮತ್ತು ಬಾಲ್ಯದ ಗೆಳತಿ ರಾಗಿಣಿ ಅವರನ್ನು ರೆಜಿಸ್ಟಾರ್ ಮದುವೆಯಾಗಿದ್ದು, ಫೆಬ್ರವರಿ 04ರಂದು ಕ್ರೈಸ್ತ ಧರ್ಮದ ಪ್ರಕಾರ ವಿವಾಹವಾಗಲಿದ್ದಾರೆ. ಸೋಮವಾರ ಜಮ್ಶೇಡ್ ಪುರದಲ್ಲಿ ಮದುವೆ ನೋಂದಣಿ ಮಾಡಿಸಿದರು.

ಗ್ರೀನ್ ಮಂಕಿ ಯೋಗ

ಗ್ರೀನ್ ಮಂಕಿ ಯೋಗ

ಯುನೈಟೆಡ್ ಸ್ಟೇಟ್ ನ ಮಯಾಮಿ ಬೀಚ್ ಬಳಿಯ ಹೋಟೆಲ್ ವೊಂದರಲ್ಲಿ ಗ್ರೀನ್ ಮಂಕಿಯೋಗದ ರೂವಾರಿ ಪೌಲಾವಾಕರ್ ತನ್ನ ಮಿತ್ರರ ಜೊತೆ ಯೋಗದಲ್ಲಿ ಪಾಲ್ಗೊಂಡಿದ್ದು ಹೀಗೆ.

ವಿದ್ಯಾರ್ಥಿಗಳನ್ನು ವಿಚಾರಣೆಗೆ ಕೊಂಡೊಯ್ಯುವಾಗ

ವಿದ್ಯಾರ್ಥಿಗಳನ್ನು ವಿಚಾರಣೆಗೆ ಕೊಂಡೊಯ್ಯುವಾಗ

ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಕೈಗೊಂಡ ಕೆಲವು ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಲು ಕೊಂಡೊಯ್ಯುತ್ತಿದ್ದಾಗ ಜನರು ವಿರೋಧ ವ್ಯಕ್ತಪಡಿಸಿ ಪೊಲೀಸರ ಮೇಲೆ ಹರಿಹಾಯ್ದರು.

ಹಿಲ್ಲರಿ ಕ್ಲಿಂಟನ್ ಹಾಗೂ ಬಿಲ್ ಕ್ಲಿಂಟನ್ ಭೇಟಿ ಮಾಡಿದಾಗ

ಹಿಲ್ಲರಿ ಕ್ಲಿಂಟನ್ ಹಾಗೂ ಬಿಲ್ ಕ್ಲಿಂಟನ್ ಭೇಟಿ ಮಾಡಿದಾಗ

ಅಮೆರಿಕ ಸರ್ಕಾರದ ಕಾರ್ಯದರ್ಶಿ ಹಿಲ್ಲರಿ ಕ್ಲಿಂಟನ್, ಮಾಜಿ ಅಧ್ಯಕ್ಷೆ ಬಿಲ್ ಕ್ಲಿಂಟನ್ ಅವರನ್ನು ಡ್ರೇಕ್ ವಿಶ್ವವಿದ್ಯಾಲಯದಲ್ಲಿ ನಡೆದ ಜಾಥಾ ಸಂದರ್ಭದಲ್ಲಿ ಭೇಟಿ ಮಾಡಿದಾಗ ಅಪ್ಪಿ ಸಂತೋಷ ಪಟ್ಟರು. ಪಕ್ಕದಲ್ಲಿ ಬಿಲ್ ಕ್ಲಿಂಟನ್ ಮಗಳು ಚೆಲ್ಸಿ ಇಬ್ಬರನ್ನು ಕಂಡು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
One of the college students rescued from drowning off the Murud-Janjira beach, pune. Indian cricketer Varun Aaron with wife Ragini after getting married at the registrar's office in Jamshedpur. Students of St Joseph's College of Arts and Commerce shout slogans during a protest against the death of dalit student Rohit Vemula, in Bengaluru
Please Wait while comments are loading...