ಮುಖ್ಯ ಚುನಾವಣಾ ಆಯುಕ್ತರಾಗಿ ಓಂ ಪ್ರಕಾಶ್ ರಾವತ್
Recommended Video

ನವದೆಹಲಿ, ಜನವರಿ 22 : ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಓಂ ಪ್ರಕಾಶ್ ರಾವತ್ ಅವರನ್ನು ನೇಮಕ ಮಾಡಲಾಗಿದೆ. ಜನವರಿ 23ರಂದು ಅಧಿಕಾರ ಸ್ವೀಕರಿಸಲಿದ್ದಾರೆ, ರಾವತ್ ಅವರ ಅವಧಿ ಈ ವರ್ಷದ ಡಿಸೆಂಬರ್‌ನಲ್ಲಿ ಅಂತ್ಯಗೊಳ್ಳಲಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ.
ಹಾಲಿ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಅಚಲ್ ಕುಮಾರ್ ಜೋತಿ ಅವರ ಅಧಿಕಾರ ಅವಧಿ ಜನವರಿ 22ಕ್ಕೆ ಕೊನೆಗೊಳ್ಳಲಿದೆ. ವಿತ್ತ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಲಾವಾಸ ಅವರನ್ನು ಚುನಾವಣಾ ಆಯುಕ್ತರಾಗಿ ಕೂಡಾ ನೇಮಿಸಲಾಗಿದೆ.
ರಾವತ್ ಪರಿಚಯ : ಮಧ್ಯಪ್ರದೇಶ ಕೇಡರ್‌ನ 1977ರ ಬ್ಯಾಚಿನ ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ರಾವತ್, ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಕಾರ್ಯದರ್ಶಿ ಮತ್ತು ರಕ್ಷಣಾ ಸಚಿವಾಲಯದಲ್ಲಿ ನಿರ್ದೇಶಕ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಮಧ್ಯಪ್ರದೇಶದ ಅಂದಿನ ಮುಖ್ಯಮಂತ್ರಿ ಬಾಬು ಲಾಲ್ ಗೌರ್ ಅವರ ಮುಖ್ಯ ಕಾರ್ಯದರ್ಶಿಯಾಗಿ 2004ರ ಹಾಗೂ 2006ರಲ್ಲಿ ಕಾರ್ಯನಿರ್ವಹಿಸಿದ್ದರು. 2010ರಲ್ಲಿ ಉತ್ತಮ ಆಡಳಿತಗಾರ ಎಂಬ ಶ್ಲಾಘನೆಯನ್ನು ನೀಡಿ ಪ್ರಧಾನಿ ಸಚಿವಾಲಯದಿಂದ ಗೌರವ ಸ್ವೀಕರಿಸಿದ್ದರು.
ರಾವತ್ ಅವರ ಅಧಿಕಾರ ಅವಧಿ ಮುಕ್ತಾಯವಾದ ಬಳಿಕ ಹಿರಿಯ ಆಯುಕ್ತ ಸುನೀಲ್ ಅರೋರಾ ಚುನಾವಣಾ ಆಯೋಗದ ಮುಖ್ಯಸ್ಥರಾಗಲಿದ್ದಾರೆ. ಅರೋರಾ ಅವರು 2021ರಲ್ಲಿ ನಿವೃತ್ತರಾಗಲಿದ್ದಾರೆ. 2019ರ ಲೋಕಸಭೆ ಚುನಾವಣೆ ಉಸ್ತುವಾರಿಯನ್ನು ಅರೋರಾ ಅವರು ನಿರ್ವಹಿಸಲಿದ್ದಾರೆ.












Click it and Unblock the Notifications