ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಾಯಣದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಟ್ವಿಟ್ಟರ್‌ನಲ್ಲಿ ಯುಪಿಎಸ್‌ಪಿ ತರಬೇತುದಾರನ ವಿರುದ್ಧ ಆಕ್ರೋಶ

|
Google Oneindia Kannada News

ನವದೆಹಲಿ, ನವೆಂಬರ್‌ 11: ರಾಮಾಯಣದ ಬಗ್ಗೆ ತರಗತಿಯಲ್ಲಿ ಆಕ್ಷೇಪಾರ್ಹ ವಿವರ ನೀಡುತ್ತಿರುವ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್‌ ಆಗಿದೆ. ದೆಹಲಿಯ ಜನಪ್ರಿಯ ಯುಪಿಎಸ್‌ಸಿ ಕೋಚಿಂಗ್ ಸೆಂಟರ್ 'ದೃಷ್ಟಿ ಐಎಎಸ್‌' ವಿರುದ್ಧ ಶುಕ್ರವಾರ ಬೆಳಗ್ಗೆಯಿಂದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುಪಿಎಸ್‌ಸಿ ತರಬೇತುದಾರ ವಿಕಾಸ್ ದಿವ್ಯಕೀರ್ತಿ ಎಂಬುವವರ ಉಪನ್ಯಾಸದ ವಿಡಿಯೋ ವೈರಲ್ ಆದ ನಂತರ #BanDrishtiIAS ಎಂದು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಈ ವಿಡಿಯೋದಲ್ಲಿ ವಿಕಾಸ್ ದಿವ್ಯಕೀರ್ತಿ ಅವರು ತಮ್ಮ ಯುಪಿಎಸ್‌ಸಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಮಹಾಕಾವ್ಯ ರಾಮಾಯಣವನ್ನು ಬೋಧಿಸುವಾಗ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಕುಲಪತಿ ಹುದ್ದೆಯಿಂದ ಗವರ್ನರ್‌ ಕೆಳಗಿಳಿಸಿದ ಕೇರಳ ಸರ್ಕಾರಕುಲಪತಿ ಹುದ್ದೆಯಿಂದ ಗವರ್ನರ್‌ ಕೆಳಗಿಳಿಸಿದ ಕೇರಳ ಸರ್ಕಾರ

ಇದರಿಂದ ಆಕ್ರೋಶಗೊಂಡ ಟ್ವಿಟ್ಟರ್ ಬಳಕೆದಾರರು ಕೋಚಿಂಗ್ ಸಂಸ್ಥೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಅನೇಕ ಟ್ವಿಟ್ಟರ್‌ ಬಳಕೆದಾರರು ವಿಕಾಸ್ ಹೇಳಿಕೆಯಿಂದ ಮನನೊಂದು ಯುಪಿಎಸ್‌ಸಿ ತರಬೇತುದಾರ ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಟ್ವಿಟ್ಟರ್‌ನಲ್ಲಿ #BanDrishtiIAS ಎಂಬ ಹ್ಯಾಶ್‌ಟ್ಯಾಗ್ ಪ್ರಸ್ತುತ ಟ್ರೆಂಡಿಂಗ್ ಆಗಿದೆ. ಕೆಲವೇ ಗಂಟೆಗಳಲ್ಲಿ ಸಾವಿರಕ್ಕೂ ಹೆಚ್ಚು #BanDrishtiIAS ಟ್ವೀಟ್‌ಗಳು ಕಾಣಿಸಿಕೊಂಡಿವೆ.

Offensive remark on Ramayana: Outrage against UPSP coach on Twitter, #BanDrishtiIAS trending

ಟ್ವಿಟ್ಟರ್‌ನಲ್ಲಿ ಇತರರು ವಿಕಾಸ್‌ ಅವರು ತಮ್ಮ ಉಪನ್ಯಾಸದ ಸಮಯದಲ್ಲಿ ಇನ್ನೊಬ್ಬ ಲೇಖಕರ ಕೃತಿಗಳನ್ನು ಉಲ್ಲೇಖಿಸುವಾಗ ಪ್ರಾಧ್ಯಾಪಕರು ಪ್ರಶ್ನೆಯ ಮೂಲಕ ಟೀಕೆಗಳನ್ನು ಮಾಡಿದ್ದಾರೆ. ವಿಕಾಸ್ ದಿವ್ಯಕೀರ್ತಿ ಅವರು ಹಿಂದೂ ದೇವತೆಗಳಾದ ರಾಮ ಮತ್ತು ಸೀತೆಯನ್ನು ಅಪಹಾಸ್ಯ ಮಾಡುವ ಮೂಲಕ ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದಾರೆ ಎನ್ನಲಾಗಿದೆ.

4 ವರ್ಷಗಳ ಬಳಿಕ ಚಿಕ್ಕಮಗಳೂರು ನಗರಕ್ಕೆ ದತ್ತಾತ್ರೇಯ ವಿಗ್ರಹ4 ವರ್ಷಗಳ ಬಳಿಕ ಚಿಕ್ಕಮಗಳೂರು ನಗರಕ್ಕೆ ದತ್ತಾತ್ರೇಯ ವಿಗ್ರಹ

ಈ ವಿಡಿಯೋ ವೈರಲ್ ಆದ ನಂತರ ನೆಟ್ಟಿಗರು ವಿಕಾಸ್ ದಿವ್ಯಕೀರ್ತಿ ಅವರ ಇತರ ಉಪನ್ಯಾಸಗಳ ವಿಡಿಯೋ ತುಣುಕುಗಳನ್ನು ಹುಡುಕಿ ತಗೆದಿದ್ದಾರೆ. ದೃಷ್ಟಿ ಐಎಎಸ್ ತರಬೇತುದಾರರು ಕಾಲಾನಂತರದಲ್ಲಿ ಹೇಗೆ ಸೂಕ್ಷ್ಮವಾಗಿ ಐಎಎಸ್‌ ಆಕಾಂಕ್ಷಿಗಳಿಗೆ ಬ್ರೈನ್‌ವಾಶ್ ಮಾಡುತ್ತಿದ್ದಾರೆ ಮತ್ತು ಅವರ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧವಾಗಲು ಸಹಾಯ ಮಾಡುವ ನೆಪದಲ್ಲಿ ಅವರ ಮನಸ್ಸಿನಲ್ಲಿ ಹಿಂದೂಫೋಬಿಯಾವನ್ನು ತುಂಬುತ್ತಿದ್ದಾರೆ ಎಂದು ಹೇಳಿದ್ದಾರೆ.

English summary
Delhi's popular UPSC coaching center Drishti IAS has been facing outrage from netizens since Friday morning after a video of a class giving an objectionable lecture on Ramayana went viral on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X