Odisha Train Accident: ಅಪಘಾತ ಸ್ಥಳದಲ್ಲಿ ರೈಲು ಸಂಚಾರ ಆರಂಭ
ಭೀಕರ ರೈಲು ಅಪಘಾತದ ಬಳಿಕ ಒಡಿಶಾದ ಬಾಲಸೋರ್ ನಲ್ಲಿ ರೈಲು ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಮಾಹಿತಿ ನೀಡಿ ಟ್ವೀಟ್ ಮಾಡಿದ್ದಾರೆ. ರೈಲು ಅಪಘಾತದ ಬಳಿಕ ಇದೇ ಹಳಿಯನ್ನು ಸರಿಪಡಿಸುವ ಕಾರ್ಯ ಭರದಿಂದ ಸಾಗಿತ್ತು, ಈಗ ಒಂದು ಮಾರ್ಗದಲ್ಲಿ ರಿಪೇರಿ ಕೆಲಸ ಮುಗಿದಿದ್ದು ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಮೂರು ರೈಲುಗಳು ಅಪಘಾತವಾದ ಬಳಿಕೆ ರೈಲ್ವೇ ಮಾರ್ಗಗಳಿಗೆ ಸಾಕಷ್ಟು ಹಾನಿಯಾಗಿತ್ತು, ಈ ಮಾರ್ಗದಲ್ಲಿ ಚಲಿಸುವ ಎಲ್ಲಾ ರೈಲುಗಳನ್ನು ರದ್ದು ಮಾಡಲಾಗಿತ್ತು. ಹಳಿಗಳಿಗೆ ಮೇಲೆ ಬಿದ್ದಿದ್ದ ಬೋಗಿಗಳನ್ನು ತೆರವು ಮಾಡಿದ ಬಳಿಕ, ಹಳಿಯನ್ನು ಸರಿಪಡಿಸುವ ಕೆಲಸ ಶುರುವಾಗಿತ್ತು.

ಒಂದು ಮಾರ್ಗದ ಹಳಿ ಜೋಡಣಾ ಕೆಲಸ ಮುಕ್ತಾಯವಾಗಿದ್ದು ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಉಳಿದ ರೈಲ್ವೆ ಹಳಿಯನ್ನು ಸರಿಪಡಿಸುವ ಕೆಲಸ ಕೂಡ ಭರದಿಂದ ಸಾಗುತ್ತಿದ್ದು, ವಿದ್ಯುತ್ ಮಾರ್ಗವನ್ನು ಸರಿ ಮಾಡಿದ ನಂತರ ರೈಲುಗಳ ಓಡಾಟಕ್ಕೆ ಅನುಮತಿ ನೀಡುವುದಾಗಿ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
Down-line restoration complete. First train movement in section. pic.twitter.com/cXy3jUOJQ2
— Ashwini Vaishnaw (@AshwiniVaishnaw) June 4, 2023
ಮೂರು ದಿನದಿಂದ ಅಲ್ಲೆ ವಾಸ್ತವ್ಯ
ಇನ್ನು ಕೇಂದ್ರ ರೈಲ್ವೆ ಸಚಿವ ಕಳೆದ ಮೂರು ದಿನಗಳಿಂದ ಘಟನಾ ಸ್ಥಳದಲ್ಲಿ ಬೀಡುಬಿಟ್ಟಿದ್ದು ಎಲ್ಲಾ ಕೆಲಸಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ರೈಲು ಬೋಗಿಗಳನ್ನು ಯಶಸ್ವಿಯಾಗಿ ಹಳಿಯಿಂದ ದೂರ ಸರಿಸಲುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದರು. ಹಿಂದೆಯೇ ಹಳಿಗಳನ್ನು ಸರಿಪಡಿಸುವ ಕೆಲಸ ಆರಂಭಿಸಲಾಗಿತ್ತು. ಸದ್ಯ ಇಂದು ಮಾರ್ಗದ ರಿಪೇರಿ ಕೆಲಸ ಮುಗಿದಿದ್ದು ರೈಲು ಸಂಚಾರ ಶುರುವಾಗಿದೆ.












Click it and Unblock the Notifications