Odisha Train Accident: ಬೆಂಗಳೂರಿನ ಪ್ರಯಾಣಿಕರು ಸೇಫ್
ಬೆಂಗಳೂರು, ಜೂನ್ 3: ಒಡಿಶಾದ ಬಾಲಶೋರ್‌ನಲ್ಲಿ ನಡೆದ ಕೋರೊಮಂಡಲ್ ರೈಲು ಅಪಘಾತದಲ್ಲಿ ಬೆಂಗಳೂರಿನಿಂದ ಬಂದ ಪ್ರಯಾಣಿಕರಿಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಬಹನಾಗಾ ಬಜಾರ್ ನಿಲ್ದಾಣದಲ್ಲಿ ಹಳಿತಪ್ಪಿದ ಕೋಚ್‌ಗಳನ್ನು ಬೇರ್ಪಡಿಸಲು ಮತ್ತು ಸಂತ್ರಸ್ತರನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.
ಎಂಜಿನ್ ಮತ್ತು 20 ಕೋಚ್‌ಗಳನ್ನು ಒಳಗೊಂಡಿರುವ ರೈಲು ಸಂಖ್ಯೆ 12864 SMVB - HWH ಎಕ್ಸ್‌ಪ್ರೆಸ್ ರೈಲಿನ ಹಾನಿಗೊಳಗಾಗದ ಭಾಗಗಳನ್ನು ಪರಿಶೀಲಿಸಲಾಗಿದೆ. ಗಂಟೆಗೆ 10 ಕಿಲೋಮೀಟರ್‌ಗಳ ನಿರ್ಬಂಧಿತ ವೇಗದಲ್ಲಿ ಪ್ರಯಾಣವನ್ನು ಮುಂದುವರಿಸಲು 12.58ಕ್ಕೆ ತೀರ್ಮಾನಿಸಲಾಯಿತು. ಇದು ಬೆಳಿಗ್ಗೆ 03.42 ಕ್ಕೆ ಬಾಲಸೋರ್‌ಗೆ ಆಗಮಿಸಿತು.

ಕೋಚ್ ಸಂಖ್ಯೆ 216754/C ಅನ್ನು ಬಾಲಸೋರ್‌ನಲ್ಲಿ ರೇಕ್‌ನಿಂದ ಬೇರ್ಪಡಿಸಲಾಯಿತು. ಉಳಿದ 19 ಬೋಗಿಗಳು ಪ್ರಯಾಣಿಕರೊಂದಿಗೆ ಬೆಳಿಗ್ಗೆ 05.08 ಕ್ಕೆ ಬಾಲಸೋರ್ ನಿಲ್ದಾಣದಿಂದ ಹೌರಾ ಕಡೆಗೆ ಪ್ರಯಾಣವನ್ನು ಮುಂದುವರಿಸಲು ಗಂಟೆಗೆ 40 ಕಿಲೋಮೀಟರ್ ವೇಗದ ನಿರ್ಬಂಧದೊಂದಿಗೆ ಹೊರಟಿತು ಎಂದು ವರದಿ ತಿಳಿಸಿದೆ.
ಮೂಲಗಳ ಪ್ರಕಾರ, ಘರ್ಷಣೆಯಲ್ಲಿ ಮೀಸಲು ವರ್ಗದ ಯಾರೂ ಗಾಯಗೊಂಡಿಲ್ಲ ಎನ್ನಲಾಗಿದೆ. ಸಾಮಾನ್ಯ ಆಸನ ಬೋಗಿಯಲ್ಲಿದ್ದ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಇನ್ನೊಂದು ಸಾಮಾನ್ಯ ಆಸನ ಕೋಚ್ ಮತ್ತು ಎಸ್‌ಎಲ್‌ಆರ್ ಗಾರ್ಡ್ ಕೋಚ್ ಮಗುಚಿ ಬಿದ್ದಿದೆ. ಆದ್ದರಿಂದ ನಮಗೆ ಇನ್ನೂ ನಿಖರವಾದ ಸಂಖ್ಯೆಗಳು ತಿಳಿದಿಲ್ಲ. ನಾವು ಇನ್ನೂ ಕಂಡುಹಿಡಿಯುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ನೈಋತ್ಯ ರೈಲ್ವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂರ್ನಾಲ್ಕು ಬೋಗಿಗಳು ಇನ್ನೂ ಸಿಕ್ಕಿಹಾಕಿಕೊಂಡಿರುವುದರಿಂದ ಅಪಘಾತದ ಸ್ಥಳವನ್ನು ತೆರವುಗೊಳಿಸಲಾಗುತ್ತಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಹಳಿತಪ್ಪಿದ ಕೋಚ್‌ಗಳಿಂದ ಮೃತ ದೇಹಗಳನ್ನು ಹೊರತೆಗೆಯಲಾಗುತ್ತಿದ್ದು, ಗಾಯಗೊಂಡ ಸಂತ್ರಸ್ತರನ್ನು ಹತ್ತಿರದ ಮೂರ್ನಾಲ್ಕು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. ವೈದ್ಯರು ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದು, ಅಧಿಕಾರಿಗಳು ಸತ್ತ ಪ್ರಯಾಣಿಕರನ್ನು ಗುರುತಿಸುವ ಕೆಲಸ ಮುಮದುವರೆಸಿದ್ದಾರೆ.












Click it and Unblock the Notifications