ಭಾರತದಲ್ಲಿ ಒಂದೇ ದಿನ ಎರಡು ಗಿನ್ನೆಸ್ ದಾಖಲೆ ಸೃಷ್ಟಿ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ನವದೆಹಲಿ, ಡಿಸೆಂಬರ್, 11: ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸ್ ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ (ಕೆಐಎಸ್ ಎಸ್) ಹಾಗೂ ಖಾಸಗಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಎರಡು ಗಿನ್ನೆಸ್ ದಾಖಲೆ ಮಾಡಿ ಇಡೀ ಜಗತ್ತಿನ ಜನರ ನೋಟವನ್ನು ತನ್ನತ್ತ ತಿರುಗಿಸಿದೆ.

ವಿಶ್ವದ ಅತಿದೊಡ್ಡ ಆದಿವಾಸಿ ಶಿಕ್ಷಣ ಸಂಸ್ಥೆಯಾಗಿರುವ ಕೆಐಎಸ್ಎಸ್ ತಂಡ ಡಿಸೆಂಬರ್ 11ರ ಗುರುವಾರದಂದು 'ಅತಿದೊಡ್ಡ ಮಾನವ ವಾಕ್ಯ' ಮತ್ತು 'ಅತ್ಯಂತ ಏಕಕಾಲಿಕ ಹೈ-ಫೈವ್ಸ್' ಎಂಬ ಎರಡು ವಿಶ್ವದಾಖಲೆಗಳನ್ನು ಸೃಷ್ಟಿಸಿದೆ.

ಆರು ಗಂಟೆಗಳ ಸುದೀರ್ಘ ಅವಧಿಯ ಈ ಕಾರ್ಯಕ್ರಮ ಗಿನ್ನೆಸ್ ವಿಶ್ವ ದಾಖಲೆಯ ಅಧಿಕಾರಿ ಫಾಚರ್ ನಾ ಲಿಸಾ ಬಕರ್, ಲೆಕ್ಕ ಪರಿಶೋಧಕರ ಅಧಿಕಾರಿಗಳ ಸಮ್ಮುಖದಲ್ಲಿ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಒಡಿಶಾ ರಾಜ್ಯಪಾಲ ಎಸ್.ಸಿ.ಜಮೀರ್ ಉದ್ಘಾಟಿಸಿದರು. ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಭಾಗವಹಿಸಿದ್ದರು.['ಸುಡೊಕು'ದಲ್ಲಿ ಬೆಳ್ಳಿಪದಕ ಗೆದ್ದು, ಮಿಂಚಿದ ಬೆಂಗಳೂರು ಬಾಲಕಿ]

ಕೆಐಎಸ್ ಎಸ್ ಹಾಗೂ ಖಾಸಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮಾಡಿದ ಗಿನ್ನೆಸ್ ದಾಖಲೆ ಏನು? ಯಾರ ದಾಖಲೆಗಳನ್ನು ಇವರು ಮುರಿದಿದ್ದಾರೆ? ಈ ಹಿಂದೆ ದುಬೈ ವಿದ್ಯಾರ್ಥಿಗಳು ಯಾವ ಗಿನ್ನೆಸ್ ದಾಖಲೆ ಮಾಡಿದ್ದರು? ಇನ್ನಿತರ ಮಾಹಿತಿ ತಿಳಿಯೋಣ.

ಕೆಐಎಸ್ಎಸ್ ಸಂಸ್ಥೆಯ ವಿಶ್ವದಾಖಲೆ:

ಕೆಐಎಸ್ಎಸ್ ಸಂಸ್ಥೆಯ ವಿಶ್ವದಾಖಲೆ:

ಕೆಐಎಸ್ಎಸ್ ಸಂಸ್ಥೆಯ 15,225 ವಿದ್ಯಾರ್ಥಿಗಳು ಗಿನ್ನೆಸ್ ವಿಶ್ವದಾಖಲೆ ಅಧಿಕಾರಿಗಳ ಸಮ್ಮುಖದಲ್ಲಿ `ವಿ ಅಜರ್ ಫಾರ್ ದಿ ವಲ್ಡರ್ ಪೀಸ್' (ವಿಶ್ವಶಾಂತಿಗೆ ನಮ್ಮ ಆಗ್ರಹ) ಎಂಬ ಅತಿದೊಡ್ಡ ಮಾನವ ವಾಕ್ಯವನ್ನು ರಚಿಸಿದರು. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನದ ಅಂಗವಾಗಿ ವಿದ್ಯಾರ್ಥಿಗಳು ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿರುವುದರ ಜೊತೆಗೆ, ಭಯೋತ್ಪಾದಕತೆ ವಿರುದ್ಧ ಕೈ ಜೋಡಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.

ಕೆಐಎಸ್ಎಸ್ ವಿದ್ಯಾರ್ಥಿಗಳ ಎರಡನೇ ವಿಶ್ವದಾಖಲೆ

ಕೆಐಎಸ್ಎಸ್ ವಿದ್ಯಾರ್ಥಿಗಳ ಎರಡನೇ ವಿಶ್ವದಾಖಲೆ

ಕೆಐಎಸ್ಎಸ್ ವಿದ್ಯಾರ್ಥಿಗಳು `ಅತ್ಯಂತ ಏಕಕಾಲಿಕ ಮಾನವ ಸರಪಳಿಯಲ್ಲಿನ ಕೈಗಳ ಜೋಡಣೆ' ಎಂಬ ದಾಖಲೆ ಸೃಷ್ಟಿಸಿದರು. ಇದರಲ್ಲಿ 25,151
ವಿದ್ಯಾರ್ಥಿಗಳು ಭಾಗವಹಿಸಿದ್ದು, ಮಾನವ ಸರಪಳಿ 30 ಕಿಮೀ ಉದ್ದವಿತ್ತು

ದುಬೈ ವಿದ್ಯಾರ್ಥಿಗಳು ಹಿಂದೆ ಯಾವ ಗಿನ್ನೆಸ್ ದಾಖಲೆ ಮಾಡಿದ್ದರು?

ದುಬೈ ವಿದ್ಯಾರ್ಥಿಗಳು ಹಿಂದೆ ಯಾವ ಗಿನ್ನೆಸ್ ದಾಖಲೆ ಮಾಡಿದ್ದರು?

ನವೆಂಬರ್ 2015ರಲ್ಲಿ ದುಬೈನಲ್ಲಿ ಸೃಷ್ಟಿಯಾದ ಅತಿದೊಡ್ಡ ಮಾನವ ಸರಪಳಿ ದಾಖಲೆಯನ್ನು ಮುರಿದು ಹಾಕಿದೆ. ದುಬೈ ದಾಖಲೆಯಲ್ಲಿ 35 ವಿವಿಧ ಶಾಲೆಗಳ 6,958 ಮಂದಿ ವಿದ್ಯಾರ್ಥಿಗಳು `ಹ್ಯಾಪಿ ನ್ಯಾಷನಲ್ ಡೇ' ಎಂಬ ಇಂಗ್ಲಿಷ್ ವಾಕ್ಯ ರಚಿಸಿದ್ದರು.

ಕೆಐಎಸ್ ಎಸ್ ಸಂಸ್ಥೆಯ ವಿದ್ಯಾರ್ಥಿಗಳು ಮುರಿದ ದಾಖಲೆಗಳಾವುವು?

ಕೆಐಎಸ್ ಎಸ್ ಸಂಸ್ಥೆಯ ವಿದ್ಯಾರ್ಥಿಗಳು ಮುರಿದ ದಾಖಲೆಗಳಾವುವು?

ದುಬೈ ವಿದ್ಯಾರ್ಥಿಗಳು ಮೇ 2015ರಲ್ಲಿ ಫ್ರಾನ್ಸ್ ದೇಶದಲ್ಲಿ 6,282 ಅಭ್ಯರ್ಥಿಗಳು ಭಾಗವಹಿಸಿದ್ದ ಮಾನವ ವಾಕ್ಯ `ಟೈಯೆನ್ಸ್ ಡ್ರೀಮ್ ಈಸ್ ನೈಸ್ ಇನ್ ದಿ ಕೋಟ್ ಡಿ'ಅಝ್ಯೂರ್' ದಾಖಲೆಯನ್ನು ಮುರಿದಿದ್ದರು.

ಕೆನಡಾ ವಿದ್ಯಾರ್ಥಿಗಳ ದಾಖಲೆ ಮುರಿದ ಕೆಐಎಸ್ ಎಸ್

ಕೆನಡಾ ವಿದ್ಯಾರ್ಥಿಗಳ ದಾಖಲೆ ಮುರಿದ ಕೆಐಎಸ್ ಎಸ್

ಕೆನಡಾದಲ್ಲಿ 7,238 ಮಂದಿ ಭಾಗವಹಿಸಿದ್ದ 'ಮೋಸ್ಟ್ ಸೈಮಲ್ಟೇನಿಯಸ್ ಹೈ-ಫೈವ್ಸ್' ಮತ್ತು ಹ್ಯೂಮನ್ ಚೈನ್' ದಾಖಲೆಯನ್ನು ಕೆಐಎಸ್ಎಸ್ ವಿದ್ಯಾರ್ಥಿಗಳು ಮುರಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Odisha Kalinga Institute of Social Science university and private university students create 2 guinness records in a day at odisha, India. This event conducted on the Human rights day. on Thursday, December 10th
Please Wait while comments are loading...