ಜಾಹೀರಾತು ಮೂಲಕ ಭಾರತದಲ್ಲಿ ಹೂಡಿಕೆ ಮಾಡಲು ಅನುಮತಿ ಕೇಳಿದ ಲ್ಯಾಂಡೊಮಸ್

ಕೇವಲ 19 ಉದ್ಯೋಗಿಗಳನ್ನು ಹೊಂದಿರುವ ಅಮೆರಿಕ ಮೂಲದ ಲ್ಯಾಂಡೊಮಸ್ ಭಾರತದ ಮೂಲಸೌಕರ್ಯ ಅಭಿವೃದ್ಧಿಗಾಗಿ 500 ಬಿಲಿಯನ್ ಯುಎಸ್ ಡಾಲರ್ ಷೇರು ಹೂಡಿಕೆ ಮಾಡಲು ಮುಂದಾಗಿದೆ.

Recommended Video

      ಭಾರತದಲ್ಲಿ ಹೂಡಿಕೆ ಮಾಡಲು ಅನುಮತಿ ಕೇಳಿದ ಲ್ಯಾಂಡೊಮಸ್ | Oneindia Kannada

      ಆದರೆ ಈ ಹೂಡಿಕೆ ಕುರಿತು ಹಲವು ಅನುಮಾನಗಳು ಎದ್ದಿವೆ, ಲ್ಯಾಂಡೊಮಸ್ ರಿಯಾಲ್ಟಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಎಂಬುದು ಅನ್‌ಲಿಸ್ಟೆಡ್ ಸರ್ಕಾರೇತರ ಕಂಪನಿಯಾಗಿದ್ದು, ಇದುವರೆಗೆ ಷೇರು ಮಾರುಕಟ್ಟೆಯಲ್ಲಿ ವಹಿವಾಟನ್ನು ಕೂಡ ನಡೆಸಿಲ್ಲ ಎಂಬುದು ತಿಳಿದುಬಂದಿದೆ.

      ಕರ್ನಾಟಕದ ಬೆಂಗಳೂರಿನಲ್ಲಿ ಕಂಪನಿ ರಿಜಿಸ್ಟರ್ ಆಗಿದೆ. ಮಣಿಪಾಲ್ ಸೆಂಟರ್‌ನಲ್ಲಿ ಇಂಥದ್ದೊಂದು ಕಂಪನಿ ಇದೆಯಾ ಎಂದು ನೋಡಿದರೆ ಅಲ್ಲಿ ಈ ಹೆಸರಿನ ಯಾವುದೇ ಕಂಪನಿ ಇಲ್ಲ ಎಂಬುದು ತಿಳಿದುಬಂದಿದೆ.

      ಹೂಡಿಕೆ ಬಗ್ಗೆ ಘೋಷಣೆ ಮಾಡಿದ ಮೇಲೆ ಅಥವಾ ಅದಕ್ಕೂ ಮೊದಲು ಸರ್ಕಾರದ ಜತೆಗೆ ಯಾವುದೇ ಸಭೆಯನ್ನೂ ಮಾಡಿಲ್ಲ, ಜಾಹೀರಾತು ಪ್ರಕಟವಾದ ಬಳಿಕ ಕೂಡ ಸರ್ಕಾರವು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂಬುದೇ ವಿಪರ್ಯಾಸ.

      19 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಯು ಜಾಹೀರಾತು ನೀಡುವ ಮೂಲಕ ಭಾರತದಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಡಿ ಎಂದು ಪ್ರಧಾನಿ ಮೋದಿಯವರಲ್ಲಿ ಕೇಳಿಕೊಂಡಿದೆ.

      ಲ್ಯಾಂಡೊಮಸ್ ರಿಯಾಲಿಟಿ ವೆಂಚರ್ಸ್ ಜಾಹೀರಾತುಗಳ ಮೂಲಕ ಮತ್ತು ವೆಬ್‌ಸೈಟ್‌ಗಳಲ್ಲಿ ಮಾಹಿತಿಯನ್ನು ಅಪ್ಲೋಡ್ ಮಾಡುವ ಮೂಲಕ ಬಿಲ್ಡ್ ಇಂಡಿಯಾ ಅಡಿಯಲ್ಲಿ ಮೊದಲ ಹಂತವಾಗಿ 500 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದೆ.

      Obscure, One-Page Website Firm Landomus Realty Writes To PM Modi, Offers To Invest 500 Bilion Dollar

      ಈ ಕಂಪೆನಿಯು ಒಂದು ಪುಟದ ವೆಬ್​ಸೈಟ್ ಹೊಂದಿದ್ದು, ಇದರಲ್ಲಿ ಸಮೂಹದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. Zoominfo ಮಾಹಿತಿಯಂತೆ, ಈ ಕಂಪೆನಿಗೆ 19 ಉದ್ಯೋಗಿಗಳಿದ್ದಾರೆ. ಆದಾಯ 5 ಮಿಲಿಯನ್ ಯುಎಸ್​ಡಿ ಇದೆ. ಭಾರತದ ರೂಪಾಯಿ ಲೆಕ್ಕದಲ್ಲಿ 36 ಕೋಟಿ ಅಂದುಕೊಳ್ಳಿ. ಇನ್ನೊಂದು ಆಸಕ್ತಿಕರ ಸಂಗತಿ ಏನೆಂದರೆ ಈ ಕಂಪೆನಿಯ ವೆಬ್​ಸೈಟ್ 2015ರಲ್ಲಿ ಕರ್ನಾಟಕದ ಶಿವನ್ ಚೆಟ್ಟಿ ಗಾರ್ಡನ್​ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಯುನೈಟೆಡ್ ಲ್ಯಾಂಡ್​ ಬ್ಯಾಂಕ್​ನಿಂದ ನೋಂದಣಿ ಆಗಿದೆ.

      ನೀವು ನೋಡಲು ಹೊರಟಿರುವ ಹೊಸ ಭಾರತಕ್ಕೆ ಕೊಡುಗೆ ನೀಡಲು ನಮಗೆ ಅವಕಾಶ ನೀಡುವಂತೆ ಲ್ಯಾಂಡೊಮಸ್ ಗ್ರೂಪ್ ವಿನಂತಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಮನವಿ ಮಾಡಿದ್ದಾರೆ.

      NIP ಮತ್ತು NIP ಹೊರತಾದ ಪ್ರಾಜೆಕ್ಟ್​ಗಳನ್ನು ಪೂರ್ಣಗೊಳಿಸುವ ಜತೆಗೆ ಹೂಡಿಕೆದಾರರು ಮತ್ತು ಡೆವಲಪರ್​​ಗಳಿಗೆ ಬೆಂಬಲ ನೀಡುವ ಉದ್ದೇಶ ಇದೆ ಎಂದು ಸತ್ಯಪ್ರಕಾಶ್ ಹೇಳಿದ್ದಾರೆ. ಎನರ್ಜಿ, ಸಾಮಾಜಿಕ ಮೂಲಸೌಕರ್ಯ, ಉತ್ಪಾದನೆ, ಸಾರಿಗೆ, ಆಹಾರ ಪರಿಷ್ಕರಣೆ, ಕೃಷಿ, ನೀರು ಮತ್ತು ಚರಂಡಿ ಮುಂತಾದ ವಲಯಗಳ ಪ್ರಾಜೆಕ್ಟ್ ಬೆಂಬಲಿಸುವ ಉದ್ದೇಶ ಇದೆ. ಲ್ಯಾಂಡ್​ಮಸ್ ತನ್ನ ವೆಬ್​ಸೈಟ್​ನಲ್ಲೂ ಈ ಘೋಷಣೆ ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+