ಒಬಿಸಿ ಕೆನೆ ಪದರ ಆದಾಯ ಮಿತಿ 8 ಲಕ್ಷಕ್ಕೆ ಏರಿಕೆ
ನವದೆಹಲಿ, ಆಗಸ್ಟ್. 23 : ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಇತರ ಹಿಂದುಳಿದ ವರ್ಗ (ಒಬಿಸಿ) ಗಳಿಗೆ ಕೆನೆ ಪದರ ಆದಾಯ ಮಿತಿಯನ್ನು 6 ಲಕ್ಷ ದಿಂದ ಎಂಟು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಕೇಂದ್ರ ಸಚಿವ ಸಂಪುಟ ಸಭೆ ಈ ಕುರಿತು ತೀರ್ಮಾನ ಕೈಗೊಂಡಿದೆ.
ಬುಧವಾರ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಅರುಣ್ ಜೇಟ್ಲಿ, 'ಎಂಟು ಲಕ್ಷದ ತನಕ ಆದಾಯವಿರುವ ಒಬಿಸಿ ಅಭ್ಯರ್ಥಿಗಳು ಈಗ ಮೀಸಲಾತಿ ಸೌಲಭ್ಯಗಳನ್ನು ಪಡೆಯಬಹುದು' ಎಂದು ಹೇಳಿದರು.

ಒಬಿಸಿಗಳ ಉಪ ವರ್ಗೀಕರಣದ ಕುರಿತು ಪರಿಶೀಲಿಸಲು ಸರ್ಕಾರ ಆಯೋಗವೊಂದನ್ನು ರಚನೆ ಮಾಡಲಿದೆ. ಅಧ್ಯಕ್ಷರ ನೇಮಕವಾದ ಬಳಿಕ ಹನ್ನೆರಡು ವಾರದಲ್ಲಿ ಆಯೋಗ ವರದಿ ನೀಡಲಿದೆ ಎಂದರು.
ಒಬಿಸಿ ವರ್ಗಗಳನ್ನು ಅತ್ಯಂತ ಹಿಂದುಳಿದ ವರ್ಗ (ಗ್ರೂಪ್ ಎ), ಹೆಚ್ಚು ಹಿಂದುಳಿದ ವರ್ಗ (ಗ್ರೂಪ್ ಬಿ) ಮತ್ತು ಹಿಂದುಳಿದ ವರ್ಗ (ಗ್ರೂಪ್ ಸಿ) ಎಂದು ಉಪ ವರ್ಗೀಕರಿಸುವಂತೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಮಾಡಿದೆ ಎಂದ ತಿಳಿಸಿದರು.












Click it and Unblock the Notifications