ಪಾಸ್ ಪೋರ್ಟ್ ನಿಯಮ ಸಡಿಲು: ಮಹತ್ವದ ಬದಲಾವಣೆಗಳು

Written By:
Subscribe to Oneindia Kannada

ನವದೆಹಲಿ, ಡಿ 24: ಪಾಸ್ ಪೋರ್ಟ್ ಪಡೆಯಲು ಇದ್ದ ಕೆಲವೊಂದು ಕಠಿಣ ನಿಯಮಗಳಲ್ಲಿ ಬದಲಾವಣೆಗಳನ್ನು ತಂದು ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

ಕೆಲವೊಂದು ದಾಖಲೆಗಳನ್ನು ಪಡೆಯುವುದು ತೀರಾ ಕಷ್ಟವಾಗುತ್ತಿದೆ ಎನ್ನುವ ದೂರಿನ ಹಿನ್ನಲೆಯಲ್ಲಿ ಸಚಿವಾಲಯ ಈ ಮಹತ್ವದ ಬದಲಾವಣೆಯನ್ನು ತಂದಿದೆ.

ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ ಕೆ ಸಿಂಗ್ ಅವರು ಪ್ರಕಟಿಸಿರುವ ಹೊಸ ನಿಯಮಗಳು ಇಂತಿದೆ: (10 ದಿನದಲ್ಲಿ ಪಾಸ್ ಪೋರ್ಟ್ ಪಡೆಯುವುದು ಹೇಗೆ)

> ಅನಾಥಾಶ್ರಮದಲ್ಲಿರುವ ಮಕ್ಕಳ ವಯಸ್ಸನ್ನು ಆಯಾಯ ಸಂಸ್ಥೆಯ ಮುಖ್ಯಸ್ಥರು ತಮ್ಮ ಸಂಸ್ಥೆಯ ಲೆಟರ್ ಹೆಡ್ ಮೂಲಕ ದೃಢೀಕರಿಸಬಹುದು.

Number of steps taken to ease the process of issue passport

> ವಿಚ್ಛೇದಿತೆಯರು ಅಥವಾ ಗಂಡನಿಂದ ಪ್ರತ್ಯೇಕವಾಗಿ ಜೀವಿಸುತ್ತಿರುವವರು ಪಾಸ್ಪೋರ್ಟ್ ಅರ್ಜಿಯಲ್ಲಿ ಗಂಡನ ಹೆಸರು ಹಾಕುವ ಅವಶ್ಯಕತೆಯಿಲ್ಲ.

> ಸಾಧು ಸನ್ಯಾಸಿಯರು ಅರ್ಜಿಯಲ್ಲಿ ತಂದೆ ತಾಯಿ ಹೆಸರಿನ ಬದಲಿಗೆ ತಮ್ಮ ಆಧ್ಯಾತ್ಮಕ ಗುರುಗಳ ಹೆಸರನ್ನು ನಮೂದಿಸಬಹುದು.

> ದತ್ತು ಪಡೆದಿರುವಂತವರು 'ದತ್ತು ಪಡೆದಿರುವ ದೃಢೀಕರಣ ಪತ್ರ' ನೀಡಿ ಪಾಸ್ ಪೋರ್ಟಿಗೆ ಅರ್ಜಿ ಸಲ್ಲಿಸಬಹುದಾಗಿದೆ.

> ಪಾಸ್ ಪೋರ್ಟ್ ವಿತರಿಸಿದ ಐದು ವರ್ಷಗಳವರೆಗೆ ಜನ್ಮದಿನಾಂಕದಲ್ಲಿ ಬದಲಾವಣೆಯಿಲ್ಲ ಎನ್ನುವ ನಿಯಮವನ್ನು ಸಡಿಲಿಸಿ, ಈ ಬಗ್ಗೆ ಸಲ್ಲಿಕೆಯಾಗುವ ಅರ್ಜಿಯ ವಿಲೇವಾರಿ ಮಾಡುವುದನ್ನು ಪಾಸ್ಪೋರ್ಟ್ ಅಧಿಕಾರಿಗಳ ವಿವೇಚನೆಗೆ ಬಿಡಲು ನಿರ್ಧರಿಸಲಾಗಿದೆ.

> ಸರಕಾರೀ ನೌಕರರು ಎನ್ಓಸಿ ಸೂಕ್ತ ಸಮಯಕ್ಕೆ ನೀಡಲಾಗದಿದ್ದ ಪಕ್ಷದಲ್ಲಿ, ನೌಕರರು ಪಾಸ್ಪೋರ್ಟ್ ಪಡೆಯುವ ಬಗ್ಗೆ ತಮ್ಮತಮ್ಮ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಡಿಕ್ಲರೇಶನ್ ನೀಡಿದರೆ ಸಾಕು.

> ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು ತಂದೆ, ತಾಯಿ ಅಥವಾ ಪೋಷಕರಲ್ಲಿ ಯಾರದರೊಬ್ಬರ ಹೆಸರು ನಮೂದಿಸಿದರೆ ಸಾಕು.

> ಅರ್ಜಿದಾರರು ಬಯಸಿದ್ದಲ್ಲಿ ಅರ್ಜಿಯಲ್ಲಿ ತಂದೆ ಅಥವಾ ತಾಯಿಯ ಹೆಸರು ನಮೂದಿಸದೇ ಇರುವ ಅವಕಾಶವನ್ನೂ ನೀಡಲಾಗಿದೆ.

> ಜನನ ಪ್ರಮಾಣಪತ್ರವನ್ನು ಕಡ್ಡಾಯವಾಗಿ ನೀಡಬೇಕೆನ್ನುವ ನಿಯಮವನ್ನು ಸಡಿಲಿಸಿ, ಎಸ್ಎಸ್ಎಲ್ಸಿ ಸರ್ಟಿಫಿಕೇಟ್, ಪ್ಯಾನ್ ಕಾರ್ಡ್, ಜನ್ಮದಿನಾಂಕ ನಮೂದಿಸಿರುವ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಕಾರ್ಡ್ ಅಥವಾ ಎಲ್ಐಸಿ ಬಾಂಡ್ ನೀಡಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In order to streamline, liberalise and ease the process of issue of passport, the ministry has taken a number of steps in the realm of passport policy which is expected to benefit the citizens of India applying for a passport.
Please Wait while comments are loading...