ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೂರದ ಅಮೆರಿಕಾದಲ್ಲೂ ರಾಹುಲ್ ಗಾಂಧಿ ಎಡವಟ್ಟು ತಪ್ಪಲಿಲ್ಲ!

ಭಾರತದ ಒಟ್ಟು ಲೋಕಸಭಾ ಕ್ಷೇತ್ರ 545, ಆದರೆ ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ, ರಾಹುಲ್ ಒಟ್ಟು ಸಂಖ್ಯೆಗೆ ಇನ್ನೊಂದು ಸೇರಿಸಿ 546 ಕ್ಷೇತ್ರಗಳು ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

|
Google Oneindia Kannada News

Recommended Video

Rahul Gandhi goof up on stage : he says there are 546 seats in loksabha | Oneindia Kannada

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ದೇಶ, ವಿದೇಶವನ್ನೆಲ್ಲಾ ಸುತ್ತಿ ಪಕ್ಷದ ಪರವಾಗಿ ಪ್ರಚಾರ ಮಾಡುವುದರಿಂದ ಕಾಂಗ್ರೆಸ್ಸಿಗಾಗುವ ಲಾಭವೇನು ಎನ್ನುವುದಕ್ಕಿಂತ, ರಾಹುಲ್ ಭಾಷಣದಿಂದ ಕುಂತಲ್ಲೇ ಬಿಜೆಪಿಗೆ ಸಿಗುವ ಮೈಲೇಜ್ ಏನು ಎನ್ನುವುದು ಜನಸಾಮಾನ್ಯರಲ್ಲಿನ ಚರ್ಚೆಯ ವಿಷಯ.

'ಏನೋ ಮಾಡಲು ಹೋಗಿ, ಏನೋ ಎಡವಟ್ಟು ಮಾಡಿಕೊಳ್ಳುವುದು' ರಾಹುಲ್ ಗಾಂಧಿಗೆ ಹೊಸದಲ್ಲದಿದ್ದರೂ, ಅಮೆರಿಕಾದಲ್ಲಿ ರಾಹುಲ್ ಗಾಂಧಿ ನೀಡಿರುವ ತಪ್ಪು ಹೇಳಿಕೆಯಿಂದ ಅವರು ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ.

ರಾಹುಲ್ ಗಾಂಧಿ ಮಾತಿನ ಚಾತುರ್ಯ, ಮೊನಚು ವ್ಯಂಗ್ಯರಾಹುಲ್ ಗಾಂಧಿ ಮಾತಿನ ಚಾತುರ್ಯ, ಮೊನಚು ವ್ಯಂಗ್ಯ

ನೆಹರೂ, ಗಾಂಧಿ ವಂಶಪಾರಂಪರ್ಯ ಕುಡಿಯ ಮತ್ತು ಸ್ವಾತಂತ್ರ್ಯ ಬಂದ ಏಳು ದಶಕಗಳಲ್ಲಿ ಬಹುತೇಕ ಅವರದೇ ಕುಟುಂಬ ಅಧಿಕಾರದಲ್ಲಿದ್ದರೂ, ಕನಿಷ್ಠ ದೇಶದಲ್ಲಿ ಎಷ್ಟು ಲೋಕಸಭಾ ಕ್ಷೇತ್ರವಿದೆ ಎನ್ನುವುದನ್ನು ಮರೆತು, ಇರೋ ಸಂಖ್ಯೆಗಿಂತ, ಒಂದು ಎಕ್ಸ್ ಟ್ರಾ ಸೇರಿಸಿ ರಾಹುಲ್ ನಗೇಪಟಾಲಿಗೆ ಗುರಿಯಾಗಿದ್ದಾರೆ.

ಭಾರತದ ಒಟ್ಟು ಲೋಕಸಭಾ ಕ್ಷೇತ್ರ 545, ಆದರೆ ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ, ರಾಹುಲ್ ಒಟ್ಟು ಸಂಖ್ಯೆಗೆ ಇನ್ನೊಂದು ಸೇರಿಸಿ 546 ಕ್ಷೇತ್ರಗಳು ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

ಅಮೆರಿಕದಲ್ಲಿ ರಾಹುಲ್: ಸ್ಮೃತಿ ಇರಾನಿ ಹೇಳಿಕೆಗೆ ರಮ್ಯಾ ವ್ಯಂಗ್ಯಅಮೆರಿಕದಲ್ಲಿ ರಾಹುಲ್: ಸ್ಮೃತಿ ಇರಾನಿ ಹೇಳಿಕೆಗೆ ರಮ್ಯಾ ವ್ಯಂಗ್ಯ

ಒಂದು ಎಕ್ಸ್ ಟ್ರಾ ಸೀಟ್ ರಾಹುಲ್ ಸೇರಿಸಿದ್ದು ಯಾಕೆ, ಚೋಟಾ ಭೀಮ್ ಗಾಗಿಯಾ ಎನ್ನುವಂತಹ ಅತ್ಯಂತ ಹೀಗಳೆಯುವ ಟ್ವೀಟುಗಳು ಹರಿದಾಡುತ್ತಿರುವುದು ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಗಮನಿಸಬೇಕಾದ ಅಂಶ. ಮುಂದೆ ಓದಿ..

ಒಟ್ಟು ಲೋಕಸಭಾ ಕ್ಷೇತ್ರ ತಪ್ಪು ಹೇಳಿದ ಯುವರಾಜರು

ಒಟ್ಟು ಲೋಕಸಭಾ ಕ್ಷೇತ್ರ ತಪ್ಪು ಹೇಳಿದ ಯುವರಾಜರು

ಅಮೆರಿಕಾದ ಬರ್ಕಲೇಯಲ್ಲಿರುವ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ 'ಇಂಡಿಯಾ ಎಟ್ 70' ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಭಾರತ ವಿಶ್ವದ ಅತ್ಯಂತ ದೊಡ್ದ ಪ್ರಜಾಪ್ರಭುತ್ವ ದೇಶ. ಲೋಕಸಭೆಯಲ್ಲಿ ನಮ್ಮ ದೇಶ 546 ಕ್ಷೇತ್ರಗಳನ್ನು ಹೊಂದಿದೆ ಎನ್ನುವ ತಪ್ಪು ಲೆಕ್ಕವನ್ನು ಹೇಳಿದ್ದರು. ದೇಶದ ಒಟ್ಟು ಲೋಕಸಭಾ ಕ್ಷೇತ್ರ 545.

ಹೀಗೊಂದು ಹಾಸ್ಯಾಸ್ಪದ ಟ್ವೀಟ್

ಹೀಗೊಂದು ಹಾಸ್ಯಾಸ್ಪದ ಟ್ವೀಟ್

ಒಂದು ತಪ್ಪುಯಿಲ್ಲದೇ ಎಲ್ಲಾ ಸರಿಯಾಗಿ ರಾಹುಲ್ ಗಾಂಧಿ ಹೇಳಬೇಕು ಎನ್ನುವುದು ಎಷ್ಟು ಸರಿ ಎನ್ನುವ ಹಾಸ್ಯಾಸ್ಪದ ಟ್ವೀಟ್

ಚೋಟಾ ಭೀಮ್ ಗಾಗಿ ಒಂದು ಕ್ಷೇತ್ರ ಸೇರಿಸಿದ ರಾಹುಲ್

ಭಾರತದಲ್ಲಿ ಒಟ್ಟು 546 ಲೋಕಸಭಾ ಕ್ಷೇತ್ರವಿದೆ ಎಂದು ರಾಹುಲ್ ಭಾಷಣದಲ್ಲಿ ಹೇಳುತ್ತಾರೆ. ಒಟ್ಟು ಇರುವ 545ಕ್ಕೆ ಒಂದು ಎಕ್ಸ್ ಟ್ರಾ ರಾಹುಲ್ ಸೇರಿಸಿದ್ದು ಚೋಟಾ ಭೀಮ್ ಗಾಗಿ ಎನ್ನುವ ಟ್ವೀಟ್.

ರಾಹುಲ್ ಗಾಂಧಿ ಭಾಷಣಕ್ಕಿಂತ ಟ್ರಂಪ್ ಉತ್ತಮ

ರಾಹುಲ್ ಗಾಂಧಿ ಭಾಷಣಕ್ಕಿಂತ ಟ್ರಂಪ್ ಉತ್ತಮ

ಡೊನಾಲ್ಡ್ ಟ್ರಂಪ್ ಭಾಷಣದ ಬಗ್ಗೆ ಹೀಗಳೆಯುತ್ತಿರುವವರಿಗೆ ರಾಹುಲ್ ಗಾಂಧಿ ಭಾಷಣ ಕೇಳಿದ ನಂತರ ಟ್ರಂಪ್ ಉತ್ತಮ ಅನಿಸದೇ ಇರದು. ಬಿಜೆಪಿ ಫುಲ್ ಪ್ರಚಾರದ ಮೂಡ್ ನಲ್ಲಿದೆ. ಅಮಿತ್ ಶಾ ಭಾರತದಲ್ಲಿ ಮತ್ತು ರಾಹುಲ್ ಗಾಂಧಿ ವಿದೇಶದಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎನ್ನುವ ಟ್ವೀಟ್.

ರಾಹುಲ್ ಭಾಷಣ ಕೇಳಿದವರಿಗಾಗಿ ಎರಡು ನಿಮಿಷದ ಮೌನ

ರಾಹುಲ್ ಗಾಂಧಿ ಭಾಷಣ ಕೇಳಿದವರಿಗಾಗಿ ಎರಡು ನಿಮಿಷದ ಮೌನಾಚರಣೆ.

Array

ರಾಹುಲ್ ಭಾಷಣ ಕಾಂಗ್ರೆಸ್ಸನ್ನೇ ಮುಗಿಸುತ್ತದೆ

ಕಂಪ್ಲೀಟ್ ಮತ್ತು ಫಿನಿಷ್ ನಡುವಿನ ವ್ಯತ್ಯಾಸ. ಮೋದಿ ಭಾಷಣ ಮಾಡಿದರೆ ಕಾಂಗ್ರೆಸ್ ಮುಕ್ತ್ ಅಭಿಯಾನ, ಆದರೆ, ರಾಹುಲ್ ಭಾಷಣ ಮಾಡಿದರೆ ಅದು ಕಾಂಗ್ರೆಸ್ಸನ್ನೇ ಮುಗಿಸುತ್ತದೆ.

English summary
Congress Vice President Rahul Gandhi is currently in US and he is in headlines again. Speaking on 'India at 70' Rahul said, number of seats in the Lower House is 546 instead of 545.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X