ಚುನಾವಣೆ ಆಯೋಗವು ಹಲ್ಲಿಲ್ಲದ ಹುಲಿ, ವರುಣ್ ಗಾಂಧಿ ವ್ಯಂಗ್ಯ

"ಚುನಾವಣೆ ಆಯೋಗ ಹಲ್ಲಿಲ್ಲದ ಹುಲಿ. ಆಯೋಗದಿಂದ ಏನು ಉಪಯೋಗ?" ಎಂದು ವ್ಯಂಗ್ಯವಾಡಲಾಗಿದೆ. ಇದು ವಿಪಕ್ಷಗಳ ಟೀಕೆಯಲ್ಲ್. ಬಿಜೆಪಿ ನಾಯಕ ವರಣ್ ಗಾಂಧಿ ಅವರ ಮಾತು. ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಮಾಡದ ಚುನಾವಣೆ ಆಯೋಗದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ ಒಂದು ದಿನದ ನಂತರ ವರುಣ್ ಮಾತನಾಡಿದ್ದಾರೆ.

ವರುಣ್ ಗಾಂಧಿ ಶುಕ್ರವಾರ ಚುನಾವಣೆ ಆಯೋಗವನ್ನು ಹಲ್ಲಿಲ್ಲದ ಹುಲಿ ಎಂದು ವ್ಯಂಗ್ಯವಾಡಿದ್ದಷ್ಟೇ ಅಲ್ಲದೆ, ಚುನಾವಣೆ ಖರ್ಚಿನ ಲೆಕ್ಕಾಚಾರವನ್ನು ನಿಗದಿತ ಅವಧಿಯೊಳಗೆ ಸಲ್ಲಿಸದ ಯಾವ ರಾಜಕೀಯ ಪಕ್ಷದ ಮಾನ್ಯತೆ ರದ್ದು ಮಾಡಲಾಗಿದೆ? ಚುನಾವಣೆ ಪ್ರಚಾರಕ್ಕಾಗಿ ರಾಜಕೀಯ ಪಕ್ಷಗಳು ಸಿಕ್ಕಾಪಟ್ಟೆ ಖರ್ಚು ಮಾಡುತ್ತವೆ. ಆ ಮೂಲಕ ಸಜ್ಜನರು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಸಾಧ್ಯವಿಲ್ಲದಂತಾಗಿದೆ ಎಂದಿದ್ದಾರೆ.

Now Varun Gandhi calls Election Commission a ‘toothless tiger’

ಚುನಾವಣೆ ಆಯೋಗಕ್ಕೆ ಸಂವಿಧಾನದಲ್ಲಿ ನೀಡಿದ ಹಕ್ಕು-ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿದೆಯಾ? ಚುನಾವಣೆ ಮುಗಿದ ನಂತರ ಪ್ರಕರಣ ದಾಖಲಿಸುವ ಶಕ್ತಿ ಕೂಡ ಕಳೆದುಕೊಂಡು ಬಿಡುತ್ತದೆ. ಆ ರೀತಿ ಪ್ರಕರಣ ದಾಖಲಿಸಲೇಬೇಕು ಅಂದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು ಎಂದು ಕಾನೂನು ಕಾಲೇಜಿನಲ್ಲಿ ರಾಜಕೀಯ ಸುಧಾರಣೆ ಬಗ್ಗೆ ಉಪನ್ಯಾಸ ನೀಡುವ ಸಂದರ್ಭದಲ್ಲಿ ಹೇಳಿದ್ದಾರೆ.

ದಾಖಲೆಗಳನ್ನು ಸಲ್ಲಿಸುವುದು ತಡವಾಯಿತು ಅನ್ನೋ ಕಾರಣಕ್ಕೆ ದಿವಂಗತ ಪಿ.ಎ.ಸಂಗ್ಮಾ (ಎನ್ ಪಿಪಿ) ಅವರ ಪಕ್ಷದ ಮಾನ್ಯತೆ ರದ್ದುಪಡಿಸಿ, ಖರ್ಚು-ವೆಚ್ಚದ ದಾಖಲೆ ಸಲ್ಲಿಸಿದ ಮರು ದಿನವೇ ಆದೇಶವನ್ನು ಹಿಂಪಡೆದಿತ್ತು ಎಂದು ವರುಣ್ ಗಾಂಧಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+