ಪದ್ಮ ಗೌರವದ ಶಿಫಾರಸು ಸಚಿವರ ಕೈಯಿಂದ ಜನಸಾಮಾನ್ಯರಿಗೆ ನೀಡಿದ ಮೋದಿ

ನವದೆಹಲಿ, ಆಗಸ್ಟ್ 18: ಭಾರತ ಸರಕಾರದ 'ಪದ್ಮ' ಗೌರವಕ್ಕೆ ನಿಮ್ಮ ಆಯ್ಕೆಯ ವ್ಯಕ್ತಿಯನ್ನು ಶಿಫಾರಸು ಮಾಡಬಹುದು. ಇದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಮಾತು. ನೀತಿ ಆಯೋಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪದ್ಮ ಗೌರವಕ್ಕೆ ಸಚಿವರು ಶಿಫಾರಸು ಮಾಡಬೇಕು ಎಂಬ ಪದ್ಧತಿಯನ್ನು ಕೊನೆಗೊಳಿಸಲು ಸರಕಾರ ನಿರ್ಧಾರ ಮಾಡಿದೆ. ಇನ್ನು ಮುಂದೆ ಪದ್ಮ ಗೌರವಕ್ಕಾಗಿ ಯಾರು ಬೇಕಾದರೂ ಆನ್ ಲೈನ್ ಮೂಲಕ ವ್ಯಕ್ತಿಗಳನ್ನು ಶಿಫಾರಸು ಮಾಡಬಹುದು ಎಂದು ಪ್ರಧಾನ ಮಂತ್ರಿ ಹೇಳಿದರು.

Now recommend person of your choice for Padma awards: Modi

ಈ ಹಿಂದೆ ಪದ್ಮ ಗೌರವವನ್ನು ಸಚಿವರ ಶಿಫಾರಸಿನ ಮೇಲೆ ನೀಡಲಾಗುತ್ತಿತ್ತು. ಈ ನಿಯಮವನ್ನು ನಾವು ತೆಗೆದುಹಾಕಿದ್ದೇವೆ. ಹೆಸರು ಸೂಚಿಸುವುದಕ್ಕೆ ಅವಕಾಶವನ್ನು ಮುಕ್ತಗೊಳಿಸಿದ್ದೇವೆ. ನಾವು ಸಣ್ಣ ಮಟ್ಟದ ಸುಧಾರಣೆ ತಂದಿದ್ದೇವೆ. ಯಾರೂ ಬೇಕಾದರೂ ಆನ್ ಲೈನ್ ಮೂಲಕ ಈ ಗೌರವಗಳಿಗೆ ವ್ಯಕ್ತಿಯ ಹೆಸರನ್ನು ಸೂಚಿಸಬಹುದು. ಇದೀಗ ದೇಶದ ಜನರಿಗೆ ಅಪರಿಚಿತವಾಗಿ ಉಳಿದ ಹೀರೋಗಳನ್ನು ಗುರುತಿಸಬಹುದು ಎಂದು ಪ್ರಧಾನಿ ಹೇಳಿದ್ದಾರೆ.

ದೇಶದ ಪ್ರತಿ ನಾಗರಿಕರಿಗೂ ಕೊಡುಗೆ ನೀಡುವುದಕ್ಕೆ ಇರುತ್ತದೆ. ಈ ಬಲವನ್ನು ನಮ್ಮ ಬೆಳವಣಿಗೆ ಜತೆಗೆ ಸಮೀಕರಿಸಲು ಇಚ್ಛಿಸುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+