ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಪ್ರಯಾಣಿಕರು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಶುಲ್ಕವಿಲ್ಲ!

By Nayana
|
Google Oneindia Kannada News

ನವದೆಹಲಿ, ಮೇ 24: ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ 24 ತಾಸಿನೊಳಗೆ ಟಿಕೆಟ್‌ ಗಳನ್ನು ರದ್ದುಪಡಿಸಿದರೆ ಯಾವುದೇ ಶುಲ್ಕ ತನೀಡುವ ಅಗತ್ಯವಿಲ್ಲ ಎನ್ನುವ ಹೊಸ ನಿಯಮವನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಆದರೆ ಪ್ರಯಾಣದ ದಿನಕ್ಕಿಂತ 4 ದಿನ ಮೊದಲಿಗೆ ಮಾತ್ರವೇ ಈ ನಿಯಮ ಅನ್ವಯಿಸುತ್ತದೆ. ಇದಲ್ಲದೆ ಪ್ರಯಾಣಿಕ ಸ್ನೇಹಿ ಎನ್ನಬಹುದಾದ ಇತರೆ ಹಲವು ಕರಡು ನಿಯಮಾವಳಿಗಳನ್ನು ವಿಮಾನಯಾನ ಸಚಿವಾಲಯ ಸಿದ್ಧಪಡಿಸಿದೆ. 30 ದಿವಸ ಇದನ್ನು ಸಾರ್ವಜನಿಕ ಚರ್ಚೆಗೆ ಇರಿಸಲಾಗುತ್ತದೆ. ಜನರ ಸಲಹೆ ಸೂಚನೆಗಳನ್ನು ಆಧರಿಸಿ ನಿಯಮಾವಳಿಗಳನ್ನು ಸರ್ಕಾರ ಅನುಮೋದಿಸುವ ನಿರೀಕ್ಷೆಯಿದ್ದ ಜುಲೈ ಮಧ್ಯಭಾಗದಿಂದ ಜಾರಿಯಾಗುವ ಸಾಧ್ಯತೆ ಇದೆ.

ಹುಬ್ಬಳ್ಳಿ ಮೂಲಕ 4 ನಗರಕ್ಕೆ ವಿಮಾನ ಸೇವೆ ಆರಂಭಿಸಿದ ಸ್ಪೈಸ್ ಜೆಟ್ಹುಬ್ಬಳ್ಳಿ ಮೂಲಕ 4 ನಗರಕ್ಕೆ ವಿಮಾನ ಸೇವೆ ಆರಂಭಿಸಿದ ಸ್ಪೈಸ್ ಜೆಟ್

ಹೊಸ ನಿಯಮಗಳು: ಟಿಕೆಟ್ ಬುಕ್ ಮಾಡಿದ 24 ತಾಸುಗಳೊಳಗೆ ಶುಲ್ಕ ತೆರದೇ ಟಿಕೆಟ್ ರದ್ದುಗೊಳಿಸಬಹುದು, ಪ್ರಯಾಣ ದಿನಾಂಕ ಕನಿಷ್ಠ 4 ದಿನ ದೂರ ಇದ್ದಾಗ ಈ ನಿಯಮ ಅನ್ವಯವಾಗುತ್ತದೆ. ವಿಮಾನ 4 ತಾಸಿಗಿಂತ ಹೆಚ್ಚು ತಡವಾಗುವಂತಿದ್ದರೆ ಟಿಕೆಟ್ ದರ ಮರಳಿಸಲಾಗುತ್ತದೆ, ವಿಮಾನ ವಿಳಂವಾಗುತ್ತದೆ ಎಂದು 1 ದಿನ ಮೊದಲೇ ಪ್ರಯಾಣಿಕರಿಗೆ ಮಾಹಿತಿ ನೀಡಿದಾಗ ಹಣ ವಾಪಾಸ್ ನೀಡಲಾಗುತ್ತದೆ.

Now onwards no charges on air ticket cancelation

1 ಗಂಟೆಗಿಂತ ಹೆಚ್ಚು ಹೊತ್ತು ವಿಮಾನ ನಿಂತರೆ ತಿಂಡಿ ಹಾಗೂ ಪೇಯ ಉಚಿತ, ಬ್ಯಾಗ್ ಕಳೆದರೆ 3 ಸಾವಿ ರೂ ಪರಿಹಾರ, ಹಾಳಾದರೆ ಕನಿಷ್ಠ 1 ಸಾವಿರ ರೂ. ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದೆ.

English summary
Civil aviation ministry has declared that no charges for cancelation of air ticket within 24 hours of ticket booking done. But the cancelation should be before four days of the journey, the ministry said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X