ಬೀಫ್ ಪಾರ್ಟಿ ಕೊಟ್ಟಿದ್ದ ಕಾಶ್ಮೀರ ಪಕ್ಷೇತರ ಶಾಸಕನ ಮುಖಕ್ಕೆ ಮಸಿ

ನವದೆಹಲಿ, ಅಕ್ಟೋಬರ್. 19 : ಗೋ ಮಾಂಸದ ಔತಣಕೂಟ ಏರ್ಪಡಿಸಿದ್ದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಪಕ್ಷೇತರ ಶಾಸಕ ಇಂಜಿನಿಯರ್ ರಷೀದ್ ಮೇಲೆ ಸೋಮವಾರ ಮಸಿ ದಾಳಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನವದೆಹಲಿಗೆ ಆಗಮಿಸಿದ್ದ ಇಂಜಿನಿಯರ್ ರಷೀದ್ ಪ್ರೆಸ್ ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ದಿಢೀರನೆ ಪ್ರತ್ಯಕ್ಷರಾದ ವಿಷ್ಣು ಗುಪ್ತ ನೇತೃತ್ವದ ಹಿಂದು ಸೇನಾ ಕಾರ್ಯಕರ್ತರು ರಷೀದ್ ಮೇಲೆ ಮಸಿ ಹಾಗೂ ವಾಹನದ ಆಯಿಲ್​ನಿಂದ ಎರಚಿದರು.[ಶಿವಸೇನೆಯಿಂದ ಸುಧೀಂದ್ರ ಕುಲಕರ್ಣಿ ಮುಖಕ್ಕೆ ಮಸಿ]

jammu

ಕಳೆದ 15 ದಿನಗಳ ಅವಧಿಯಲ್ಲಿ ಶಾರ್ ರಷೀದ್ ಮೇಲೆ ಎರಡನೇ ಬಾರಿ ಮಸಿ ದಾಳಿ ಮಾಡಲಾಗಿದೆ. ಪಾಕಿಸ್ತಾನ ವಿದೇಶಾಂಗ ಇಲಾಖೆ ಮಾಜಿ ಸಚಿವ ಮಹಮ್ಮದ್ ಕಸೂರಿಯವರ ಪುಸ್ತಕ ಬಿಡುಗಡೆ ಸಮಾರಂಭವನ್ನು ಮುಂಬೈ ನಲ್ಲಿ ಹಮ್ಮಿಕೊಂಡಿದ್ದ ವೇಳೆ ಶಿವಶೇನೆ ಕಾರ್ಯಕರ್ತರು ಸುಧೀಂದ್ರ ಕುಲಕರ್ಣಿ ಅವರ ಮುಖಕ್ಕೆ ಮಸಿ ಬಳಿದಿದ್ದರು.

ಸಾಮಾಜಿಕ ತಾಣಗಳಲ್ಲೂ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಗೋಮಾಂಸ ಸೇವನೆ ಶಂಕೆಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಹತ್ಯೆಯ ನಂತರ ಈಗ ಮಸಿ ಪ್ರಕರಣ ನಡೆದಿದೆ. "Engineer Rashid" ಹೆಸರಿನಲ್ಲಿ ಮಸಿ ಬಳಿದ ಪ್ರಕರಣ ಟ್ರೆಂಡ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+