ಅಂಚೆ ಇಲಾಖೆಯಿಂದ ನಿಮ್ಮ ಕೈಗೆ ಗಂಗಾಜಲ ವಿತರಣೆ

Posted By:
Subscribe to Oneindia Kannada

ನವದೆಹಲಿ, ಜುಲೈ 11: ಹಿಂದೂಗಳ ಪಾಲಿನ ಪವಿತ್ರ ಗಂಗಾಜಲವನ್ನು ದೇಶದ ಎಲ್ಲಾ ಭಾಗದ ಜನತೆಗೂ ಸುಲಭವಾಗಿ ದೊರಕುವಂತೆ ಮಾಡಲು ಕೇಂದ್ರ ಸರ್ಕಾರ, ಗಂಗಾಜಲ ಯೋಜನೆ ಆರಂಭಿಸಿದೆ.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು 'ಗಂಗಾಜಲ ಯೋಜನೆ'ಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸಚಿವ ಮನೋಜ್ ಸಿನ್ಹಾ ಉಪಸ್ಥಿತರಿದ್ದರು.[20 ಸಾವಿರ ಕೋಟಿ ರು. ಮೌಲ್ಯದ ನಮಾಮಿ ಗಂಗಾ ಯೋಜನೆಗೆ ಚಾಲನೆ]

Now, Indian Post To Deliver 'Gangajal'

ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡೀ ಮಾತನಾಡಿದ ರವಿಶಂಕರ್ ಪ್ರಸಾದ್, 'ಪವಿತ್ರ ಸ್ಥಳಗಳಾದ ಗಂಗೋತ್ರಿ ಹಾಗೂ ಋಷಿಕೇಷದಲ್ಲಿ ದೊರೆಯುವ ಜಲವನ್ನು ಸೂಕ್ತ ರೀತಿಯಲ್ಲಿ ಪ್ಯಾಕ್ ಮಾಡಿ ವಿತರಿಸಲಾಗುವುದು, ಅತ್ಯಲ್ಪ ಬೆಲೆಗೆ ಗಂಗಾಜಲ ದೊರೆಯಲಿದೆ' ಎಂದರು.[ಮಾತಾ 'ಅಮ್ಮ' ಕಡೆಯಿಂದ ನೂರು ಕೋಟಿ!]

ಖಾಸಗಿ ಕಂಪನಿಗಳು ಇ ಮಾರುಕಟ್ಟೆಯಲ್ಲಿ ಗಂಗಾಜಲವನ್ನು ಮಾರಾಟ ಮಾಡುತ್ತಿರುವುದನ್ನು ಗಮನಿಸಿದ ಸರ್ಕಾರ ಈ ರೀತಿ ಮಾರುಕಟ್ಟೆ ತಂತ್ರ ಅನುಸರಿಸುತ್ತಿದೆ. ಅಂಚೆ ಇಲಾಖೆ ಸಹಯೋಗದೊಂದಿಗೆ ಗಂಗಾಜಲ ನೀಡಲಾಗುತ್ತಿದೆ.[ವಿಡಿಯೋ: ಗಂಗಾ ಶುದ್ಧೀಕರಣ ಯೋಜನೆಯ ಆಶಯ ಗೀತೆ]

ಗೋಮುಖದಲ್ಲಿ ಸಂಗ್ರಹಿಸಿರುವ ಗಂಗಾಜಲಕ್ಕೆ ಪ್ರತಿ ಲೀಟರ್​ಗೆ 299 ರೂ. ನಿಗದಿ ಮಾಡಿ ಮಾರಾಟಮಾಡಲಾಗುತ್ತಿದೆ. ಅಂಚೆ ಇಲಾಖೆಯಿಂದ ರವಾನೆಯಾಗುವ ಗಂಗಾಜಲದ ಬೆಲೆ ನಿಗದಿ ಮಾಡಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Now people can get 'Gangajal' -- holy water from the Ganga -- at all post offices across the country and if they want, they can even get it delivered to their doorsteps said Union Minister Ravi Shankar Prasad.
Please Wait while comments are loading...