ಜ್ಯೋತಿಷಿಗಳು ರೋಗ ಪತ್ತೆ ಹಚ್ಚುವ ವ್ಯವಸ್ಥೆ ಜಾರಿಯಿಲ್ಲǃ

Posted By:
Subscribe to Oneindia Kannada

ಭೋಪಾಲ್, ಜುಲೈ 18: ರಾಶಿ, ಕುಂಡಲಿ, ಗ್ರಹಗತಿ ಭವಿಷ್ಯ ಲೋಕದಲ್ಲಿ ಸದಾ ಮುಳುಗಿರುವ ಜ್ಯೋತಿಷಿಗಳು ಈ ಆಸ್ಪತ್ರೆಯಲ್ಲಿ ರೋಗಿಗಳ ಪತ್ತೆ ಹಚ್ಚಲಿದ್ದಾರೆ. ಮಧ್ಯ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಜ್ಯೋತಿಷಿಗಳು ರೋಗಿಯ ಗ್ರಹಗತಿ ನೋಡಿ ಆರೋಗ್ಯ ಸುಧಾರಣೆ ಸಲಹೆ ನೀಡಲಿದ್ದಾರೆ ಎಂಬ ಸುದ್ದಿಯನ್ನು ಅಲ್ಲಿನ ಸರ್ಕಾರ ಅಲ್ಲಗೆಳೆದಿದ್ದು, ಈ ರೀತಿ ಯಾವುದೇ ವ್ಯವಸ್ಥೆ ಜಾರಿಗೊಳಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.

ದೇಶದಲ್ಲೇ ಖ್ಯಾತರಾದ ಜ್ಯೋತಿಷಿಗಳಿಂದ ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ

ಸರ್ಕಾರಿ ಸ್ವಾಮ್ಯದ ಮಹರ್ಷಿ ಪತಂಜಲಿ ಸಂಸ್ಕೃತ ಸಂಸ್ಥಾನದ ವತಿಯಿಂದ ಈ ವರ್ಷದ ಸೆಪ್ಟಂಬರ್ ಅಂತ್ಯದ ವೇಳೆಗೆ ಈ ವ್ಯವಸ್ಥೆ ಜಾರಿಗೆ ಬರಲಿದೆ. ವಾರಕ್ಕೆರಡು ಬಾರಿ ಹೊರರೋಗಿ ವಿಭಾಗದಲ್ಲಿ ಜ್ಯೋತಿಷಿಗಳ ಸಲಹೆ-ಸೂಚನೆ ಎಲ್ಲಾ ರೋಗಿಗಳಿಗೆ ಲಭ್ಯವಾಗಲಿದೆ ಎಂಬ ಸುದ್ದಿ ಬಂದಿತ್ತು.

Now astrologers will diagnose patients in Madhya Pradesh hospitals

ಜ್ಯೂನಿಯರ್ ಡಾಕ್ಟರ್ ಹಾಗೂ ತಜ್ಞ ವೈದ್ಯರಿದ್ದಂತೆ, ಈ ತಂಡದಲ್ಲಿ ಹಿರಿಯ ಹಾಗೂ ಕಿರಿಯ ಜ್ಯೋತಿಷಿಗಳಿರುತ್ತಾರೆ. ಕೇವಲ 5 ರು ಶುಲ್ಕ ನೀಡಿ ನಿಮ್ಮ ಆರೋಗ್ಯದ ಬಗ್ಗೆ ಭವಿಷ್ಯ ತಿಳಿಯಬಹುದು. ರೋಗಿಯ ಜಾತಕ ನೋಡಿ ರೋಗ ಪತ್ತೆ, ರೋಗಕ್ಕೆ ಚಿಕಿತ್ಸೆ ಬಗ್ಗೆ ಜ್ಯೋತಿಷಿಗಳು ತಿಳಿಸುತ್ತಾರೆ ಎಂದು ಈ ಸಂಸ್ಥಾನದ ನಿರ್ದೇಶಕ ತಿವಾರಿ ಹೇಳಿದ್ದಾರೆ.

Daily Astrology 07/07/2017 : Future Predictions For 12 Zodiac Signs | Oneindia Kannada

ಮಧ್ಯಪ್ರದೇಶ ವೈದ್ಯರ ಸಂಘದ ಡಾ. ಲಲಿತ್ ಶ್ರೀವಾಸ್ತವ್ ಅವರು ಸರ್ಕಾರದ ಈ ಯೋಜನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜ್ಯೋತಿಷ್ಯ ಹಾಗೂ ವೈದ್ಯಕೀಯ ವಿಜ್ಞಾನವನ್ನು ಬೆರೆಸಲು ಸಾಧ್ಯವಿಲ್ಲ ಎಂದಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Astrologers will now diagnose patients in state run hospitals in Madhya Pradesh. The government-run Maharshi Patanjali Sanskrit Sansthan (MPSS) will ensure the availability of these astrologers for twice a week.
Please Wait while comments are loading...