• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರಿಗೆ ನೋಟಿಸ್: ವಾಟರ್ ಬಿಲ್ ಕಟ್ಟಲು 'ಹನುಮಂತ'ನಿಗೆ ಸೂಚಿಸಿದ ರಾಯಗಡ ಮುನ್ಸಿಪಲ್

|
Google Oneindia Kannada News

ರಾಯಗಢ ಅಕ್ಟೋಬರ್ 20: ಸಾಮಾನ್ಯವಾಗಿ ಭಕ್ತರು ನಾನಾ ಬೇಡಿಕೆಗಳನ್ನಿಟ್ಟುಕೊಂಡು ದೇವರ ಮುಂದೆ ಪ್ರಾರ್ಥನೆ ಮಾಡುವುದು ಸರ್ವೇ ಸಾಮಾನ್ಯ. ಸಂಪತ್ತು ಪ್ರಾಪ್ತಿಗೆ, ಕಷ್ಟಗಳ ನಿವಾರಣೆ ದೇವರ ಮುಂದೆ ಬೇಡಿಕೊಳ್ಳುವುದಿದೆ. ಅಷ್ಟೇ ಯಾಕೆ ದೇವರ ಹುಂಡಿಯಲ್ಲಿ ಹಲವಾರು ಬೇಡಿಕೆಗಳಿರುವ ಚೀಟಿಯನ್ನು ಬರೆದು ಹಾಕಿರುವ ವಿಚಿತ್ರ ಘಟನೆಗಳನ್ನ ನಾವು ನೋಡಿದ್ದೇವೆ. ಆದರೆ ರಾಯಗಢ್ ಮುನ್ಸಿಪಲ್ ಕಾರ್ಪೋರೇಷನ್ ವಾಟರ್ ಬಿಲ್ ಕಟ್ಟಲು ದೇವರಿಗೆ ನೋಟಿಸ್ ನೀಡಿದೆ. ಇದನ್ನು ಕಂಡು ಇಡೀ ರಾಯಗಢ ಜನತೆ ಬೆಚ್ಚಿಬಿದ್ದಿದೆ.

ಛತ್ತೀಸ್‌ಗಢದ ರಾಯಗಢ ನಗರದಿಂದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ನೀರಿನ ಬಿಲ್ ಪಾವತಿಸುವಂತೆ ಮಹಾನಗರ ಪಾಲಿಕೆ ಕಚೇರಿ 'ಬಜರಂಗಬಲಿ'ಗೆ ನೋಟಿಸ್ ಕಳುಹಿಸಿದೆ. ಛತ್ತೀಸ್‌ಗಢದ ರಾಯಗಢ ನಗರದ ಪುರಸಭೆ ಆಡಳಿತವು ವಾರ್ಡ್ ನಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ನೋಟಿಸ್ ನೀಡಿದೆ. ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದ ಕೆಲವರ ಹೆಸರಲ್ಲಿ ಈ ನೋಟಿಸ್ ಜಾರಿಯಾಗಬೇಕಿತ್ತು. ಆದರೆ ಅಧಿಕಾರಿಗಳು, ನೌಕರರು ಆತುರ ತೋರಿ ಹನುಮಂತ ದೇವರ ಹೆಸರಲ್ಲಿ ನೋಟಿಸ್ ಮಾಡಿದ್ದಾರೆ.

ಹಿಂದುತ್ವ ಸಂಘಟನೆಗಳು ವಿರೋಧ

ಹಿಂದುತ್ವ ಸಂಘಟನೆಗಳು ವಿರೋಧ

ಭಗವಾನ್ ಹನುಮಾನ್ ಜಿ ಹೆಸರಿನಲ್ಲಿ ನೋಟಿಸ್ ಜಾರಿಯಾಗಿರುವ ಮಾಹಿತಿಯು ಇಡೀ ರಾಯಗಡ ನಗರದಲ್ಲಿ ವೇಗವಾಗಿ ಹರಡಿದೆ. ಇದಕ್ಕೆ ಸ್ಥಳೀಯರು ಮತ್ತು ಹಿಂದುತ್ವ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಬಜರಂಗಬಲಿ ದೇವಸ್ಥಾನದಲ್ಲಿ ಒಂದೇ ಒಂದು ಟ್ಯಾಪ್ ಸಂಪರ್ಕವಿಲ್ಲ ಎಂದು ಹೇಳಲಾಗುತ್ತಿದ್ದು, ಈ ನೋಟಿಸ್ ಕಳುಹಿಸಲಾಗಿದೆ. ಪಾಲಿಕೆ ನಿರ್ಲಕ್ಷ್ಯದ ವಿರುದ್ಧ ವಾರ್ಡ್ ನ ಸ್ಥಳೀಯ ಜನರೂ ಧ್ವನಿ ಎತ್ತುತ್ತಿದ್ದಾರೆ.

ಶ್ರೀಮತಿ ಹೆಸರಿನ ಮುಂದೆ ದೇವರ ಹೆಸರು!

ಶ್ರೀಮತಿ ಹೆಸರಿನ ಮುಂದೆ ದೇವರ ಹೆಸರು!

ರಾಯಗಡ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಹನುಮಾನ್ ದೇವಸ್ಥಾನಕ್ಕೆ 400 ರೂಪಾಯಿ ನೀರಿನ ತೆರಿಗೆ ಪಾವತಿಸುವಂತೆ ನೋಟಿಸ್ ಕಳುಹಿಸಲಾಗಿದೆ. 15ರೊಳಗೆ ತೆರಿಗೆ ಪಾವತಿಸಬೇಕು, ಇಲ್ಲದಿದ್ದರೆ ಪಾಲಿಕೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ದೇವಸ್ಥಾನದ ಆಡಳಿತದ ಹೆಸರಿನಲ್ಲಿ ನೋಟಿಸ್ ಕಳುಹಿಸುವ ಬದಲು ಬಜರಂಗ ಬಲಿಯನ್ನು ಫಲಾನುಭವಿಯನ್ನಾಗಿ ಮಾಡಿ ಅವರ ಹೆಸರಿನ ಮುಂದೆ ಶ್ರೀಮತಿ ಎಂದು ಬರೆದು ನೋಟೀಸ್ ಕಳುಹಿಸಲಾಗಿದೆ.

ದೇವಸ್ಥಾನಕ್ಕಿಲ್ಲ ನಲ್ಲಿ ಸಂಪರ್ಕ- ಆದರೂ ಬಂತು ನೋಟೀಸ್

ದೇವಸ್ಥಾನಕ್ಕಿಲ್ಲ ನಲ್ಲಿ ಸಂಪರ್ಕ- ಆದರೂ ಬಂತು ನೋಟೀಸ್

ಈ ವಿಚಾರವಾಗಿ ರಾಯಗಡ ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿ ನಿತ್ಯಾನಂದ ಉಪಾಧ್ಯಾಯ ಮಾತನಾಡಿ, ಅಮೃತ್ ಮಿಷನ್ ಯೋಜನೆಯಡಿಯಲ್ಲಿ ಕೂಲಿಕಾರ್ಮಿಕರ ಪರವಾಗಿ ವಾರ್ಡ್ ಗಳಲ್ಲಿ ಮನೆಗಳಲ್ಲಿ ನಲ್ಲಿ ಸಂಪರ್ಕ ಕಲ್ಪಿಸುವ ಕೆಲಸ ನಡೆದಿದೆ. ಈ ಕಾಮಗಾರಿಯ ವಿವರ ಇಟ್ಟುಕೊಂಡು ಕಂಪ್ಯೂಟರಿನಲ್ಲಿ ಅವರ ನಮೂದು ಮಾಡಿಕೊಳ್ಳಲಾಗಿದೆ. ಈ ಸಂಚಿಕೆಯಲ್ಲಿ ಹನುಮಾನ ದೇವಸ್ಥಾನಕ್ಕೂ ನೋಟಿಸ್ ಜಾರಿ ಮಾಡಲಾಗಿದೆ. ದೇವಸ್ಥಾನಕ್ಕೆ ಯಾವುದೇ ನಲ್ಲಿ ಸಂಪರ್ಕವಿಲ್ಲ ಎಂದು ಆರೋಪಿಸಲಾಗಿದೆ. ಇದರ ಬಗ್ಗೆ ವಾರ್ಡ್‌ನಲ್ಲಿ ಸರ್ವೆ ಕಾರ್ಯ ನಡೆಯುತ್ತಿರುವುದರಿಂದ ನಲ್ಲಿ ಯಾರ ಬಳಿ ಇದೆ ಎಂದು ತಿಳಿಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ.

ನ್ಯಾಯಾಲಯಕ್ಕೆ ರಿಕ್ಷದಲ್ಲಿ ವಿಗ್ರಹ ತಂದಿದ್ದ ಸ್ಥಳೀಯರು

ನ್ಯಾಯಾಲಯಕ್ಕೆ ರಿಕ್ಷದಲ್ಲಿ ವಿಗ್ರಹ ತಂದಿದ್ದ ಸ್ಥಳೀಯರು

ಆದರೆ, ರಾಯಗಡ ನಗರದ ಅಧಿಕಾರಿಗಳು ದೇವರ ಹೆಸರಿನಲ್ಲಿ ನೋಟಿಸ್ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಸಾಧನೆ ಮಾಡಿದ್ದಾರೆ. ಈ ವರ್ಷದ ಮಾರ್ಚ್ 21 ರಂದು, ರಾಯಗಢ ಅಧಿಕಾರಿಗಳು ಭೋಲೆನಾಥ್ ದೇವಸ್ಥಾನದ ತಹಸಿಲ್ ಕಚೇರಿಯಿಂದ ತೆರವು ನೋಟಿಸ್ ಕಳುಹಿಸಿದ್ದರು. ಕೌಹಕುಂದ ಪ್ರದೇಶದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿತ್ತು. ಕಾಲೋನಿ ಮಾಡಿದವರ ಜಮೀನು ಎಲ್ಲಿ ಒತ್ತುವರಿಯಾಗಿರುವ ಪ್ರಕರಣದಲ್ಲಿ ಭೋಲೆನಾಥ್ ಹಾಗೂ 10 ಮಂದಿಗೆ ನೋಟಿಸ್ ಕಳುಹಿಸಲಾಗಿತ್ತು. ಇದರಿಂದಾಗಿ ಸ್ಥಳೀಯ ಜನರು ರಿಕ್ಷಾದಲ್ಲಿ ದೇವರನ್ನು ಸಂಕೇತವಾಗಿ ನ್ಯಾಯಾಲಯಕ್ಕೆ ತಂದಿದ್ದರು.

English summary
Raigarh Municipal Corporation has issued a notice to God to pay the water bill. Know more. .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X