ತಾಜ್ ಮಹಲ್ ಮೇಲೆ 1 ಕೋಟಿ ರೂಪಾಯಿ ನೀರಿನ ಬಿಲ್
ಆಗ್ರಾ, ಡಿಸೆಂಬರ್ 20: ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ತಾಜ್ ಮಹಲ್‌ಗೆ ಆಸ್ತಿ ತೆರಿಗೆ ಮತ್ತು ನೀರಿನ ಬಿಲ್‌ಗಳನ್ನು ಪಾವತಿಸುವಂತೆ ನೋಟಿಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಎಸ್‌ಐ ಅಧಿಕಾರಿಗಳ ಪ್ರಕಾರ, ನೀರಿನ ತೆರಿಗೆ ಮತ್ತು ಆಸ್ತಿ ತೆರಿಗೆಗೆ ಒಂದು ನೋಟೀಸ್ ನೀಡಲಾಗಿದೆ. ಸುಮಾರು 1.40 ಲಕ್ಷ ಮತ್ತು 1 ಕೋಟಿ ರೂ.ಗಳನ್ನು ನೀರಿನ ತೆರಿಗೆಯಾಗಿ ಪಾವತಿಸುವಂತೆ ಎಎಸ್‌ಐಗೆ ತಿಳಿಸಲಾಗಿದೆ.
ಭಾರತೀಯ ಪುರಾತತ್ವ ಇಲಾಖೆಯ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ (ಆಗ್ರಾ ವೃತ್ತ) ರಾಜ್ ಪಟೇಲ್, "ನೀರಿನ ತೆರಿಗೆ ಮತ್ತು ಆಸ್ತಿ ತೆರಿಗೆಗೆ ಒಂದು ನೋಟೀಸ್ ನೀಡಲಾಗಿದೆ. ಆಸ್ತಿ ತೆರಿಗೆ ಸುಮಾರು 1.40 ಲಕ್ಷ ಮತ್ತು ನೀರಿನ ತೆರಿಗೆ ಸುಮಾರು 1 ಕೋಟಿ ಆಗಿದೆ. ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಆಗ್ರಾದ ನಾಗರಿಕ ಸಂಸ್ಥೆಯು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೋಟಿಸ್ ನೀಡಿ ಜಗತ್ಪ್ರಸಿದ್ಧ ಸ್ಮಾರಕ ತಾಜ್ ಮಹಲ್ ಮೇಲಿನ ಮನೆ ತೆರಿಗೆಯಾಗಿ 1.47 ಲಕ್ಷ ರೂಪಾಯಿ ಪಾವತಿಸುವಂತೆ ಸೂಚನೆ ನೀಡಿದೆ ಎಂದರು.

ಬಾಕಿ ಪಾವತಿಸಲು ಎಎಸ್‌ಐಗೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ನಿಗದಿತ ಸಮಯದೊಳಗೆ ತೆರಿಗೆಯನ್ನು ಪಾವತಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಮನೆ ತೆರಿಗೆ ಮೊತ್ತವು 47,000 ರೂ.ಗಿಂತ ಹೆಚ್ಚಿನ ಬಾಕಿಯ ಮೇಲಿನ ಬಡ್ಡಿಯನ್ನು ಸಹ ಒಳಗೊಂಡಿದೆ. ತಾಜ್ ಮಹಲ್ ಸ್ಮಾರಕದ ಮೇಲಿನ ವಾರ್ಷಿಕ ಮನೆ ತೆರಿಗೆ 11,098 ರೂ. ಆಗಿದೆ. 1920ರಲ್ಲಿ ತಾಜ್ ಮಹಲ್ ಅನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಲಾಗಿದ್ದು, ಬ್ರಿಟಿಷರ ಆಡಳಿತಾವಧಿಯಲ್ಲಿಯೂ ಈ ಸ್ಮಾರಕಕ್ಕೆ ಮನೆ ತೆರಿಗೆ ವಿಧಿಸಿರಲಿಲ್ಲ ಎಂದು ಎಎಸ್ ಐ ಅಧಿಕಾರಿಗಳು ತಿಳಿಸಿದ್ದಾರೆ.
ಸಂರಕ್ಷಿತ ಸ್ಮಾರಕವಾಗಿರುವ ಆಗ್ರಾದ ಮೊಘಲ್ ಸಮಾಧಿಯಾದ ಇತ್ಮಾದ್-ಉದ್-ದೌಲಾ ಸಮಾಧಿಗೆ ಬಾಕಿ ಇರುವ ಮನೆ ತೆರಿಗೆ ಪಾವತಿಗೆ ಇದೇ ರೀತಿಯ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೇಬಿ ತಾಜ್ ಎಂದೂ ಕರೆಯಲ್ಪಡುವ ಈ ಸಮಾಧಿಯನ್ನು ಮೊಘಲ್ ಚಕ್ರವರ್ತಿ ಜಹಾಂಗೀರನ ಪತ್ನಿ ನೂರ್ ಜಹಾನ್ ತನ್ನ ತಂದೆಗಾಗಿ ನಿಯೋಜಿಸಿದಳು ಎಂಬ ಐತಿಹ್ಯವಿದೆ.












Click it and Unblock the Notifications