ದೇಶದ ಶೇ. 89 ಭಾಗಕ್ಕೆ ವರುಣನ ಕೃಪೆ, ಕರ್ನಾಟಕದ ಕತೆ?

Subscribe to Oneindia Kannada

ನವದೆಹಲಿ, ಜುಲೈ, 11: ದೇಶದ ಶೇಕಡಾ 89 ಭಾಗ ಈ ಬಾರಿ ಸಾಮಾನ್ಯ ಅಥವಾ ಅದಕ್ಕಿಂತಲೂ ಹೆಚ್ಚಿನ ಮಳೆ ಪಡೆದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉಳಿದ ಶೇ. 11 ರಷ್ಟು ಪ್ರದೇಶಗಳು ಮಳೆ ಕೊರತೆ ಅನುಭವಿಸಿವೆ. ಗುಜರಾತ್, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ, ತ್ರಿಪುರಾದಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಆಗಿಲ್ಲ. ದೇಶದ ಪೂರ್ವ ಮತ್ತು ಈಶಾನ್ಯ ಭಾಗಗಳು ಶೇ. 21 ರಷ್ಟು ಮಳೆ ಕೊರತೆಯನ್ನು ಅನುಭವಿಸಿವೆ.[ರಾಜ್ಯಾದ್ಯಂತ ಅಬ್ಬರಿಸಿದ ಮಳೆರಾಯ, ಭರ್ತಿಯಾದ ಜಲಾಶಯ]

rain

ನಿರೀಕ್ಷೆಗಿಂತ ತಡವಾಗಿ ದೇಶದೊಳಕ್ಕೆ ಮುಂಗಾರು ಪ್ರವೇಶ ಮಾಡಿದರೂ ನಂತರ ಶಕ್ತಿ ಕಳೆದುಕೊಂಡಿತು. ಹವಾಮಾನ ಇಲಾಖೆ ಹೇಳಿದಂತೆ ಈ ಬಾರಿ ಮುಂಗಾರು ಆರ್ಭಟಿಸಬೇಕಿತ್ತು.

ಕರ್ನಾಟಕದಲ್ಲಿ ತಗ್ಗಿದ ವರುಣನ ಅಬ್ಬರ
ಕರ್ನಾಟಕದಲ್ಲಿ ಕಳೆದ 3 ದಿನಗಳಿಂದ ಮಳೆ ಅಬ್ಬರ ಕಡಿಮೆಯಾಗಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಆರ್ಭಟಿಸುತ್ತಿದ್ದ ವರುಣ ತಣ್ಣಗಾಗಿದ್ದಾನೆ. ಆದರೆ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಳಗಾವಿ ತತ್ತರಿಸಿದೆ.[ಧಾರಾಕಾರ ಮಳೆಗೆ ಮೈದುಂಬಿದ ಜೋಗ ನೋಡಿಕೊಂಡು ಬನ್ನಿ]

ಬೆಳಗಾವಿಯಲ್ಲಿ ರಾಜ್ಯದಲ್ಲಿಯೇ ಅಧಿಕವೆನಿಸಿದ 11 ಸೆಂ.ಮೀ.ಮಳೆ ಸುರಿದಿದೆ. ಉಳಿದಂತೆ ಮಡಿಕೇರಿ(10), ಕಾರ್ಕಳ(10), ಲೋಂಡಾ(10), ಭಾಗಮಂಡಲ(9), ಮಂಗಳೂರು(8), ಮೂಡಬಿದರೆ(8) ಸೆಂ. ಮೀ. ಮಳೆ ದಾಖಾಲಾಗಿದೆ. ರಾಜ್ಯದ ಮಲೆನಾಡು, ದಕ್ಷಿಣ ಒಳನಾಡು, ಕರಾವಳಿ ಭಾಗಗಳು ಹದ ಮಳೆಯನ್ನು ಪಡೆದುಕೊಂಡಿವೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗಿಲ್ಲ.[ಧುಮ್ಮಿಕ್ಕುತಿಹ ಅಬ್ಬಿ ಫಾಲ್ಸ್‌ನತ್ತ ಪ್ರವಾಸಿಗರ ದೌಡು]

ಮೋಡ ಕವಿದ ವಾತಾವರಣ ರಾಜ್ಯದಲ್ಲಿ ಮುಂದುವರಿಯಲಿದ್ದು, ಕರವಾಳಿ ಸೇರಿದಂತೆ ರಾಜ್ಯದ ಹಲವೆಡೆ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Around 89 per cent of the country has received normal and excess rainfall, owing to a good amount of monsoon in several parts, while large parts of Gujarat have recorded deficiency of more than half. Overall, the country has recorded 254 mm of rainfall from June 1 to July 10, as against 251 mm, which is one per cent more. The India Meteorological Department said 26 per cent of the country has received "excess" rainfall while the 63 per cent "normal" rainfall.
Please Wait while comments are loading...