ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ

ನವದೆಹಲಿ, ಡಿ.1: ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದ ನರೇಂದ್ರ ಮೋದಿ ಸರ್ಕಾರ ಸಬ್ಸಿಡಿಯೇತರ ಎಲ್ಪಿಜಿ ಸಿಲಿಂಡರಿನ ಬೆಲೆಯನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ. ನೂತನ ದರಪಟ್ಟಿಯಂತೆ ಪ್ರತಿ ಸಿಲಿಂಡರ್ ಮೇಲೆ 113 ರು ಇಳಿಕೆಯಾಗಲಿದೆ. ಜೊತೆಗೆ ಜೆಟ್ ಅನಿಲ ದರ ಶೇ 4.1ರಷ್ಟು ಇಳಿಕೆಯಾಗಿದೆ.

ವಾರ್ಷಿಕ 12 ಸಿಲಿಂಡರುಗಳನ್ನು ಬಳಸುವ ಪ್ರತಿ 14.2 ಕೆಜಿ ತೂಗುವ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಕಳೆದ ಆರು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಏರಿಕೆ ಕಂಡಿತ್ತು. ದೆಹಲಿಯಲ್ಲಿ ಸಿಲಿಂಡರ್ ಬೆಲೆ 906 ರು ನಿಂದ ಬೆಲೆ 922.50 ನಷ್ಟಾಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ಪ್ರಕಟಿಸಿತ್ತು.

LPG rate cut by Rs 113, jet fuel prices by 4.1 per cent

ದೆಹಲಿಯಲ್ಲಿ ಈಗ ಸಬ್ಸಿಡಿ ರಹಿತ 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 752 ರು ಆಗಲಿದೆ. ಈ ಮುಂಚೆ 865 ರು ನಷ್ಟಿತ್ತು. ಕಳೆದ ಆಗಸ್ಟ್ ನಿಂದ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಇಳಿಕೆ ಐದನೇ ಬಾರಿಗೆ ಮಾಡಲಾಗುತ್ತಿದೆ. ವಾಣಿಜ್ಯ ಉದ್ದೇಶಿತ ಸಿಲಿಂಡರ್ ದರ 170.5 ಪ್ರತಿ ಸಿಲಿಂಡರ್ ನಂತೆ ತೆರಬೇಕಾಗುತ್ತದೆ.

ಎವಿಯೇಷನ್ ಟರ್ಬೈನ್ ಇಂಧನ(ಎಟಿಎಫ್) ಅಥವಾ ಜೆಟ್ ಫ್ಯೂಯಲ್ ದರ ಶೇ 4.1ರಷ್ಟು ಇಳಿಕೆಯಾಗಿದೆ. ಇದು ಕೂಡಾ ಐದನೇ ಬಾರಿಗೆ ದರದಲ್ಲಿ ಇಳಿಮುಖ ಕಂಡಿದೆ.

ಕಳೆದ ಅಕ್ಟೋಬರ್ ನಲ್ಲಿ 14.2 ಕೆ.ಜಿ ತೂಕದ ಸಬ್ಸಿಡಿಸಹಿತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಪ್ರತಿ ಸಿಲಿಂಡರ್ ಗೆ 3 ರು ನಂತೆ ಏರಿಕೆ ಮಾಡಲಾಗಿತ್ತು. ಡೀಲರ್ ಗಳಿಗೆ ನೀಡುವ ಕಮಿಷನ್ ದರ ಏರಿಕೆ ಮಾಡಿರುವುದರಿಂದ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಅನಿವಾರ್ಯ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು[ದರ ಪಟ್ಟಿ ಇಲ್ಲಿದೆ]

ತಿಂಗಳಿಗೆ ಒಂದು ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಪೂರೈಸುವ ನಿರ್ಬಂಧವನ್ನು ಕೇಂದ್ರ ಸರ್ಕಾರ ಕಳೆದ ಆಗಸ್ಟ್ ತಿಂಗಳಿನಲ್ಲಿ ಹಿಂತೆಗೆದುಕೊಂಡಿತ್ತು. ಇದರಿಂದಾಗಿ ವರ್ಷದಲ್ಲಿ ಯಾವಾಗ ಬೇಕಾದರೂ 12 ಸಬ್ಸಿಡಿ ಸಿಲಿಂಡರ್‌ಗಳನ್ನು ಗ್ರಾಹಕರು ಪಡೆಯಬಹುದಾಗಿದೆ. [ವಿವರ ಇಲ್ಲಿದೆ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+