ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಸನ್ಯಾಸಿನಿಯ ವಿರುದ್ಧವೇ ತಿರುಗಿದ ಅತ್ಯಾಚಾರ ಪ್ರಕರಣ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14 : ಜಲಂಧರ್ ಪಾದ್ರಿಯಿಂದ ಕೇರಳದ ಸನ್ಯಾಸಿನಿ ಅತ್ಯಾಚಾರ ಪ್ರಕರಣ, ಹೋರಾಟ ಮಾಡುತ್ತಿರುವ ಸನ್ಯಾಸಿನಿಯರ ವಿರುದ್ಧವೇ ತಿರುಗುವಂಥ ಬೆಳವಣಿಗೆಗಳು ಜರುಗುತ್ತಿವೆ. ಈ ಬೆಳವಣಿಗೆಯಿಂದ ಸನ್ಯಾಸಿನಿಯರಿಗೆ ಹಿನ್ನಡೆಯಾಗುವ ಸಂಭವನೀಯತೆ ಇದೆ.

ಸನ್ಯಾಸಿನಿ ಆರೋಪಿಸಿದಂತೆ, ಅತ್ಯಾಚಾರ ನಡೆದಿದೆಯೆನ್ನಲಾದ 2014ರ ಮೇ 5ರಂದು ಜಲಂಧರ್ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರು ಕುರವಿಲನ್ಗಡ್ ಕಾನ್ವೆಂಟ್ ನಲ್ಲಿ ಇರಲೇ ಇಲ್ಲ. ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಅವರು ಭಾಗಿಯಾಗಿರುವ ಫೋಟೋ ಇದೆ. ಅತ್ಯಾಚಾರ ನಡೆದೇ ಇಲ್ಲ ಎಂದು ಇವು ಸಾಬೀತುಪಡಿಸುತ್ತಿವೆ ಎಂದು ಮಿಷನರೀಸ್ ಆಫ್ ಜೀಸಸ್ ವಿಚಾರಣಾ ಸಮಿತಿ ವರದಿ ನೀಡಿದೆ.

ಕೇರಳ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ: ಬಿಶಪ್‌ಗೆ ಪೊಲೀಸ್ ಸಮನ್ಸ್‌ಕೇರಳ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ: ಬಿಶಪ್‌ಗೆ ಪೊಲೀಸ್ ಸಮನ್ಸ್‌

ಅತ್ಯಾಚಾರವಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದು ಮಾತ್ರವಲ್ಲ, ಸಂತ್ರಸ್ತ ಸನ್ಯಾಸಿನಿ ಇನ್ನಿತರ ನಾಲ್ಕು ಸನ್ಯಾಸಿನಿಯರೊಂದಿಗೆ ಸೇರಿಕೊಂಡು ಜಲಂಧರ್ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ಸಿಲುಕಿಸಲು ಷಡ್ಯಂತ್ರ ರಚಿಸಿದ್ದಾರೆ ಎಂದು ಆ ವರದಿಯಲ್ಲಿ ಹೇಳಲಾಗಿದ್ದು, ಸನ್ಯಾಸಿನಿಯರಿಗೆ ಆಘಾತ ತರುವಂಥದ್ದಾಗಿದೆ.

ಸಂದರ್ಶಕರ ರಿಜಿಸ್ಟರ್ ಅನ್ನು ಸಂತ್ರಸ್ತೆಯ ಸ್ನೇಹಿತೆ ನಿಭಾಯಿಸುತ್ತಿದ್ದರು. ಅವರೇ ಆ ಪುಸ್ತಕವನ್ನು ತಿದ್ದುಪಡಿ ಮಾಡಿದ್ದಿರಬಹುದು. ಅಲ್ಲದೆ, ಮದರ್ ಸುಪೀರಿಯರ್ ಅವರಿಂದ ಸಿಸಿಟಿವಿಯನ್ನು ಕೂಡ ಸಂತ್ರಸ್ತೆ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮಿಷನರೀಸ್ ಆಫ್ ಜೀಸಸ್ ವಿಚಾರಣಾ ಸಮಿತಿ ವರದಿ ನೀಡಿದೆ.

ಸನ್ಯಾಸಿನಿಗೆ ನ್ಯಾಯ ಸಿಗಲೇಬೇಕು

ಸನ್ಯಾಸಿನಿಗೆ ನ್ಯಾಯ ಸಿಗಲೇಬೇಕು

ಬಿಷಪ್ ಪ್ರಾಂಕೋ ಮುಲಕ್ಕಲ್ ವಿರುದ್ಧ ಪ್ರಕರಣ ದಾಖಲಾಗಿ, ಪೊಲೀಸರು ಕೂಡ ಅತ್ಯಾಚಾರ ನಡೆದಿರುವುದನ್ನು ಖಚಿತಪಡಿಸಿರುವ ಸಂದರ್ಭದಲ್ಲಿ ಸಮಿತಿಯ ವರದಿ ಅಚ್ಚರಿ ಮೂಡಿಸುವಂತಿದೆ. ಹಲವಾರು ವರ್ಷಗಳ ಕಾಲ ಬಿಷಪ್ ನಿಂದ ಅತ್ಯಾಚಾರಕ್ಕೊಳಗಾದ 44 ವರ್ಷದ ಕ್ರೈಸ್ತ ಸನ್ಯಾಸಿನಿಗೆ ನ್ಯಾಯ ಸಿಗಲೇಬೇಕೆಂದು ಭಾರೀ ಹೋರಾಟಗಳು ನಡೆಯುತ್ತಿವೆ. ಪೊಲೀಸರು ಕೂಡ ಫ್ರಾಂಕೋ ಮುಲಕ್ಕಲ್ ಅವರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ಜಾರಿ ಮಾಡಿದ್ದಾರೆ.

ಸನ್ಯಾಸಿನಿಯ ಕುಟುಂಬದ ಮೇಲೆಯೇ ಕೇಸ್

ಸನ್ಯಾಸಿನಿಯ ಕುಟುಂಬದ ಮೇಲೆಯೇ ಕೇಸ್

ಫ್ರಾಂಕೋ ಮುಲಕ್ಕಲ್ ಅವರು ತಮ್ಮ ಮತ್ತು ತಮ್ಮ ಕುಟುಂಬದವರ ವಿರುದ್ಧ ಸುಳ್ಳು ಕೇಸ್ ಹಾಕುತ್ತಿದ್ದಾರೆ, ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ, ಕೇಸ್ ಕ್ಲೋಸ್ ಮಾಡಿಸಲು ಭಾರೀ ಆಮಿಷ ಒಡ್ಡುತ್ತಿದ್ದಾರೆ, ಹಲವಾರು ವ್ಯಕ್ತಿಗಳ ಪ್ರಭಾವ ಬಳಸಿ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಂತ್ರಸ್ತೆ ಈಗಾಗಲೆ ಆರೋಪಿಸಿದ್ದಾರೆ. ಆದರೆ, ಬಿಷಪ್ ಫ್ರಾಂಕೋ ಮಾತ್ರ ತಾವು ಏನೂ ಮಾಡಿಲ್ಲ, ಸನ್ಯಾಸಿನಿಯೇ ತಮ್ಮ ವಿರುದ್ಧ ಸುಳ್ಳು ದೂರು ನೀಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

ಅತ್ಯಾಚಾರ ಸಂತ್ರಸ್ಥ ಕ್ರೈಸ್ತ ಸನ್ಯಾಸಿನಿಯಿಂದ ಕ್ಯಾಥೊಲಿಕ್‌ ಚರ್ಚ್‌ಗೆ ಭಾವುಕ ಪತ್ರಅತ್ಯಾಚಾರ ಸಂತ್ರಸ್ಥ ಕ್ರೈಸ್ತ ಸನ್ಯಾಸಿನಿಯಿಂದ ಕ್ಯಾಥೊಲಿಕ್‌ ಚರ್ಚ್‌ಗೆ ಭಾವುಕ ಪತ್ರ

ಅತ್ಯಾಚಾರ ಆಗಿದೆ ಎನ್ನುವುದೆಲ್ಲ ಕಟ್ಟುಕಥೆ

ಅತ್ಯಾಚಾರ ಆಗಿದೆ ಎನ್ನುವುದೆಲ್ಲ ಕಟ್ಟುಕಥೆ

ಮಿಷನರೀಸ್ ಆಫ್ ಜೀಸಸ್ ಸನ್ಯಾಸಿನಿಯರ ವಿರುದ್ಧ ತನ್ನ ದಾಳಿಯನ್ನು ಮುಂದುವರಿಸಿದ್ದು, ಅತ್ಯಾಚಾರವಾದ ಸ್ಥಳದ ಬಳಿ ಯಾರಾದರೂ ಮತ್ತೆ ಹೋಗಲು ಇಚ್ಛಿಸುತ್ತಾರಾ? ಎಂದು ಪ್ರಶ್ನಿಸಿದೆ. ಅತ್ಯಾಚಾರವಾಗಿದೆ ಎನ್ನಲಾಗಿರುವುದು 20ನೇ ಸಂಖ್ಯೆಯ ಕೋಣೆಯಲ್ಲಿ. ಆದರೆ, ಸನ್ಯಾಸಿನಿ 12 ಸಂಖ್ಯೆಯ ಕೋಣೆಯಿಂದ 19ನೇ ಸಂಖ್ಯೆಯ ಕೋಣೆಗೆ ಸ್ಥಳಾಂತರಿಸಿಕೊಂಡರು. ಅವರು ಈಗಲೂ ಅಲ್ಲಿಯೇ ವಾಸಿಸುತ್ತಿದ್ದಾರೆ. ಅತ್ಯಾಚಾರ ಆಗಿದೆ ಎನ್ನುವುದೆಲ್ಲ ಕಟ್ಟುಕಥೆ ಎಂದು ಮಿಷನರೀಸ್ ಆಫ್ ಜೀಸಸ್ ವಾದಿಸಿದೆ.

ಅತ್ಯಾಚಾರಿಯ ಮರುಭೇಟಿ ಸಾವಿಗೆ ಸಮಾನ

ಅತ್ಯಾಚಾರಿಯ ಮರುಭೇಟಿ ಸಾವಿಗೆ ಸಮಾನ

ಯಾವುದೇ ಅತ್ಯಾಚಾರ ಸಂತ್ರಸ್ತೆಗೆ, ಅತ್ಯಾಚಾರಿಯನ್ನು ಮತ್ತೆ ಭೇಟಿ ಮಾಡುವುದೆಂದರೆ ಅದು ಸಾವಿಗೆ ಸಮಾನ. ಆದರೆ, ಸನ್ಯಾಸಿನಿಯವರು ಆರೋಪಿಯಾಗಿರುವ ಬಿಷಪ್ ಅವರ ಜೊತೆ 2014ರಿಂದ 2016ರ ನಡುವೆ ಒಂದಲ್ಲ ಎರಡಲ್ಲ ಇಪ್ಪತ್ತು ಬಾರಿ ಒಟ್ಟಿಗೇ ಸಂಚರಿಸಿದ್ದಾರೆ. ಇದರ ಅರ್ಥ ಏನು? ಅತ್ಯಾಚಾರಕ್ಕೊಳಗಾದವರು ಅತ್ಯಾಚಾರಿಯ ಜೊತೆ ಅಷ್ಟು ಬಾರಿ ಸಂಚರಿಸಲು ಹೇಗೆ ಸಾಧ್ಯ? ದೂರು ಬರೀ ಸುಳ್ಳುಗಳಿಂದಲೇ ಹೆಣೆಯಲಾಗಿದೆ ಎಂದು ಸುಸ್ಪಷ್ಟ ಎಂದು ಮಿಷನರೀಸ್ ಆಫ್ ಜೀಸಸ್ ಹೇಳಿದೆ.

ಕೇರಳದ ಕಾನ್ವೆಂಟ್ ನ ಬಾವಿಯಲ್ಲಿ 'ಶಿಕ್ಷಕಿ' ಶವ ಪತ್ತೆಕೇರಳದ ಕಾನ್ವೆಂಟ್ ನ ಬಾವಿಯಲ್ಲಿ 'ಶಿಕ್ಷಕಿ' ಶವ ಪತ್ತೆ

ಮಿಷನರೀಸ್ ವಿರುದ್ಧ ಸಾರ್ವಜನಿಕರ ಆಕ್ರೋಶ

ಮಿಷನರೀಸ್ ವಿರುದ್ಧ ಸಾರ್ವಜನಿಕರ ಆಕ್ರೋಶ

ಮಿಷನರೀಸ್ ಆಫ್ ಜೀಸಸ್ ನೀಡಿರುವ ಹೇಳಿಕೆಗೆ ಭಾರೀ ಪ್ರತಿರೋಧಗಳು ವ್ಯಕ್ತವಾಗುತ್ತಿವೆ. ನಮ್ಮ ನ್ಯಾಯಾಲಯ, ಪೊಲೀಸರು, ರಾಜಕಾರಣಿಗಳು, ಬುದ್ಧಿಜೀವಿಗಳು (ನಗರದ ನಕ್ಸಲರು) ಸನ್ಯಾಸಿನಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆಯನ್ನು ಕಣ್ಣುಮುಚ್ಚಿಕೊಂಡು ನೋಡುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೀವೇನು ಕೋರ್ಟ್ ನಿಯೋಜಿಸಿರುವ ವಿಚಾರಣಾ ಸಂಸ್ಥೆಯೆ? ನಿಮಗೆ ಈ ಅಧಿಕಾರ ಕೊಟ್ಟವರಾರು? ಪೊಲೀಸರು ಮತ್ತು ಸಿಬಿಐಗೆ ಈ ಪ್ರಕರಣದ ತನಿಖೆ ನಡೆಸಲು ಬಿಡಿ. ಈ ವಿಷಯದಲ್ಲಿ ಚರ್ಚ್ ಗಳನ್ನು, ಕ್ರಿಮಿನಲ್ ಗಳನ್ನು ಯಾರೂ ಬೆಂಬಲಿಸಬಾರದು ಎಂದು ಕಿಡಿ ಕಾರುತ್ತಿದ್ದಾರೆ.

ಕಾನೂನು ನೈತಿಕತೆ ಗಾಳಿಗೆ ತೂರಿದ ಮಿಷನರೀಸ್ ಆಫ್ ಜೀಸಸ್

ಕಾನೂನು ನೈತಿಕತೆ ಗಾಳಿಗೆ ತೂರಿದ ಮಿಷನರೀಸ್ ಆಫ್ ಜೀಸಸ್

ಇಷ್ಟು ಸಾಲದೆಂಬಂತೆ, ಮಿಷನರೀಸ್ ಆಫ್ ಜೀಸಸ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಅತ್ಯಾಚಾರಕ್ಕೊಳಗಾದ 44 ವರ್ಷದ ಸನ್ಯಾಸಿನಿಯ ಭಾವಚಿತ್ರವನ್ನು ಶುಕ್ರವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಲ್ಲದೆ, ಅವರ ಹೆಸರನ್ನು ಕೂಡ ಬಹಿರಂಗಪಡಿಸಿ ಕಾನೂನು ಉಲ್ಲಂಘಿಸಿದೆ ಮತ್ತು ನೈತಿಕತೆಯನ್ನು ಗಾಳಿಗೆ ತೂರಿದೆ. ಖಾಸಗಿ ಸಮಾರಂಭವೊಂದರಲ್ಲಿ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರೊಂದಿಗೆ ಸನ್ಯಾಸಿ ಕೂಡ ಕುಳಿತಿರುವ ಚಿತ್ರವನ್ನು ಮಿಷನರೀಸ್ ಆಫ್ ಜೀಸಸ್ ಬಿಡುಗಡೆ ಮಾಡಿದೆ. ಫ್ರಾಂಕೋ ಜೊತೆಗೆ ಕುಳಿತಿರುವ ಚಿತ್ರವನ್ನು ಅತ್ಯಾಚಾರವಾಗಿದೆ ಎನ್ನಲಾದ ದಿನದ ಮರುದಿನವೇ ತೆಗೆಯಲಾಗಿದೆ. ಹಾಗಿದ್ದರೆ ಅತ್ಯಾಚಾರ ನಡೆದಿರಲು ಹೇಗೆ ಸಾಧ್ಯ ಎಂದೂ ಪ್ರಶ್ನಿಸಿದೆ.

English summary
No rape against Kerala nun by Jalandhar bishop Franco Mulakkal. Findings by Missionaries of Jesus Inquiry Commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X