• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಡಾಖ್ ಘರ್ಷಣೆಯಲ್ಲಿ 76 ಸೈನಿಕರಿಗೆ ಗಾಯ, ಯಾರೂ ಕಾಣೆಯಾಗಿಲ್ಲ

|

ಲಡಾಖ್, ಜೂನ್ 18: ಲಡಾಖ್ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಜೂನ್ 15 ರಂದು ರಾತ್ರಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಈ ಘಟನೆಯಲ್ಲಿ ಚೀನಾ ಸೇನೆಯಲ್ಲೂ ಪ್ರಾಣ ಹಾನಿ ಸಂಭವಿಸಿದೆ. ಆದರೆ, ಈ ಕುರಿತು ಚೀನಾ ನಿಖರವಾದ ಮಾಹಿತಿ ನೀಡಿಲ್ಲ.

   BJP High Command ignores CM Yeddyurappa in election Council | Oneindia Kannada.

   ಘರ್ಷಣೆ ವೇಳೆ ಚೀನಾ ಸೈನಿಕರ ಸಂಖ್ಯೆ ಹೆಚ್ಚಿತ್ತು. ಭಾರತೀಯ ಯೋಧರ ಕಡಿಮೆ ಸಂಖ್ಯೆಯಲ್ಲಿದ್ದರು ಎಂದು ಮೂಲಗಳು ಹೇಳಿವೆ. 20 ಮಂದಿ ಸೈನಿಕರು ಪ್ರಾಣ ತ್ಯಾಗ ಮಾಡಿದ್ದು, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದರು.

   'ಸೈನಿಕರನ್ನು ನಿರಾಯುಧವಾಗಿ ಕಳುಹಿಸಿದ್ದು ಏಕೆ?'- ರಾಹುಲ್ ಗಾಂಧಿ

   ಈ ಮಧ್ಯೆ ಭಾರತದ ಹಲವು ಯೋಧರು ಕಾಣೆಯಾಗಿದ್ದಾರೆ ಎಂಬ ಸುದ್ದಿಯೂ ಚರ್ಚೆಯಾಯಿತು. ಚೀನಾ ಮತ್ತು ಭಾರತದ ಘರ್ಷಣೆ ಬಳಿಕ ಹಲವು ಯೋಧರು ಕಣ್ಮರೆಯಾಗಿದ್ದಾರೆ. ಅವರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬ ಸುದ್ದಿಯೂ ಹಬ್ಬಿದೆ. ಮಾಧ್ಯಮಗಳನ್ನು ಈ ಸುದ್ದಿ ವರದಿಯಾಗಿದೆ. ಇದೀಗ, ಈ ಕುರಿತು ಭಾರತ ಮತ್ತು ಚೀನಾ ಸ್ಪಷ್ಟನೆ ನೀಡಿದೆ. ಮುಂದೆ ಓದಿ....

   ಆಪರೇಷನ್‌ನಲ್ಲಿ ಯಾರೂ ಕಾಣೆಯಾಗಿಲ್ಲ

   ಆಪರೇಷನ್‌ನಲ್ಲಿ ಯಾರೂ ಕಾಣೆಯಾಗಿಲ್ಲ

   ಚೀನಾ ಮತ್ತು ಭಾರತದ ನಡುವೆ ಮೇಜರ್ ಜನರಲ್ ಮಟ್ಟದ ಚರ್ಚೆ ನಡೆದಿದೆ. ಸುಮಾರು ಆರು ಗಂಟೆಗಳ ಕಾಲ ಈ ಚರ್ಚೆ ಆಗಿದೆ. ಈ ವೇಳೆ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಭಾಗಿಯಾಗಿದ್ದ ಎಲ್ಲ ಸೈನಿಕರ ಬಗ್ಗೆ ವಿವರಣೆ ಹಂಚಿಕೊಳ್ಳಲಾಗಿದ್ದು, ಯಾವ ಸೈನಿಕರು ಕಾಣೆಯಾಗಿಲ್ಲ ಎಂದು ತಿಳಿದು ಬಂದಿದೆ ಎಂದು ಸೇನೆಯ ಮೂಲಗಳು ಹೇಳಿವೆ.

   76 ಸೈನಿಕರಿಗೆ ಗಾಯ

   76 ಸೈನಿಕರಿಗೆ ಗಾಯ

   ಚೀನಾ ಜೊತೆಗಿನ ಘರ್ಷಣೆಯಲ್ಲಿ ಭಾರತ 76 ಸೈನಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದರಲ್ಲಿ 18 ಯೋಧರಿಗೆ ಗಂಭೀರವಾಗಿ ಪೆಟ್ಟಾಗಿತ್ತು. ಆದರೆ, ಸೂಕ್ತ ಚಿಕಿತ್ಸೆ ನೀಡಿರುವ ಕಾರಣ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಸೇನೆಯಿಂದ ತಿಳಿದು ಬಂದಿದೆ. ಇದರ ಜೊತೆಗೆ 20 ಸಿಪಾಯಿಗಳು ಮೃತಪಟ್ಟಿದ್ದಾರೆ.

   ಗಾಲ್ವಾನ್ ಘರ್ಷಣೆ ನಂತರ ಗಡಿಭಾಗದಲ್ಲಿ 3 ಸೇನೆಯಿಂದ ಅಲರ್ಟ್

   ಚೀನಾ ಮತ್ತು ಭಾರತ ಏಳನೇ ಸಭೆ

   ಚೀನಾ ಮತ್ತು ಭಾರತ ಏಳನೇ ಸಭೆ

   ಗಾಲ್ವಿನ್ ಕಣಿವೆ ಘಟನೆ ನಡೆದ ಬಳಿಕ ಚೀನಾ ಮತ್ತು ಭಾರತದ ಸೇನೆಯ ನಡುವೆ ಸತತ ಮಾತುಕತೆ ನಡೆಯುತ್ತಿದೆ. ಗಡಿಯಲ್ಲಿ ಉಂಟಾಗಿರುವ ಸಂದಿಗ್ಧ ಪರಿಸ್ಥಿತಿಯನ್ನು ನಿಯಂತ್ರಿಸುವ ಉದ್ದೇಶದಿಂದ ವಿದೇಶಾಂಗ ಸಚಿವಾಲಯ ಚರ್ಚೆಗಳ ಮೇಲೆ ಚರ್ಚೆಗಳನ್ನು ನಡೆಸುತ್ತಿದೆ. ಇಂದು ಸಹ ಮೇಜರ್ ಜನರಲ್ ಮಟ್ಟದ ಸಭೆ ನಡೆದಿದ್ದು, ಸುಮಾರು 6 ಗಂಟೆಗಳ ಕಾಲ ಈ ಚರ್ಚೆ ನಡೆದಿದೆ.

   ಭಾರತದ ಮೇಲೆ ಗೂಬೆ ಕೂರಿಸಿದ ಚೀನಾ

   ಭಾರತದ ಮೇಲೆ ಗೂಬೆ ಕೂರಿಸಿದ ಚೀನಾ

   ಭಾರತೀಯ ಸೈನಿಕರು ಗಡಿ ನಿಯಮ ಉಲ್ಲಂಘನೆ ಮಾಡಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಚೀನಾ ಆರೋಪಿಸಿದೆ. ಈ ಘಟನೆಯಿಂದ ಚೀನಾದಲ್ಲಿ ಎಷ್ಟು ಪ್ರಾಣಹಾನಿಯಾಗಿದೆ ಎಂದು ಲೆಕ್ಕ ನೀಡಿಲ್ಲ. ಯುಎಸ್ ಗುಪ್ತಚರ ವರದಿ ಮಾಡಿರುವಂತೆ 35 ಚೈನೀಸ್ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ 43 ಚೀನಾ ಸೈನಿಕರು ಅಸುನೀಗಿದ್ದಾರೆ.

   English summary
   Major General-level talks between India and China are over after more than six hours. All the personnel who took part in the Galwan valley operations on June 15-16 are accounted for and no personnel are missing in action: Sources.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X