ಪಾಕ್ ನಿಂದ ಪಿಒಕೆ ಕಸಿದುಕೊಳ್ಳುವುದು ಎಷ್ಟರ ಕೆಲಸ: ಕೇಂದ್ರ ಸಚಿವ

Posted By:
Subscribe to Oneindia Kannada

ಪಾಕಿಸ್ತಾನದಿಂದ ಪಿಒಕೆ (ಪಾಕ್ ಆಕ್ರಮಿತ ಕಾಶ್ಮೀರ) ಕಸಿದುಕೊಳ್ಳಬೇಕು ಅಂತ ಭಾರತ ಅಂದುಕೊಂಡರೆ ಯಾರಿಂದಲೂ ತಡೆಯುವುದಕ್ಕೆ ಸಾಧ್ಯವಿಲ್ಲ. ಆ ಭೂ ಪ್ರದೇಶ ಭಾರತಕ್ಕೆ ಸೇರಿದ್ದು ಎಂದು ಕೇಂದ್ರ ಸಚಿವ ಹನ್ಸ್ ರಾಜ್ ಅಹಿರ್ ಗುರುವಾರ ಹೇಳಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ನಿಂದ 6 ಅಣೆಕಟ್ಟು ನಿರ್ಮಾಣ

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹನ್ಸ್ ರಾಜ್, ಹಿಂದಿನ ಸರಕಾರಗಳ ತಪ್ಪಿನ ಕಾರಣದಿಂದ ಪಾಕಿಸ್ತಾನ ಆಕ್ರಮಿಸಿದ ಕಾಶ್ಮೀರ ಭೂ ಭಾಗ ಇಸ್ಲಾಮಾಬಾದ್ ಅಡಿಯಲ್ಲಿದೆ. "ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗ. ಹಿಂದಿನ ಸರಕಾರಗಳ ತಪ್ಪಿನ ಕಾರಣಕ್ಕೆ ಪಾಕಿಸ್ತಾನದ ಬಳಿಯಿದೆ. ಆ ಭೂ ಭಾಗ ಮರಳಿ ಪಡೆಯಲು ನಾವು ಪ್ರಯತ್ನಿಸಿದರೆ ಯಾರೂ ತಡೆಯಲು ಸಾಧ್ಯವಿಲ್ಲ. ಅದು ನಮ್ಮ ಹಕ್ಕು ಎಂದು ಅವರು ಹೇಳಿದ್ದಾರೆ.

No one can stop India if it tries to take PoK: Central minister

ಭಾರತವು ಪಾಕ್ ಆಕ್ರಮಿತ ಕಾಶ್ಮೀರ ಭೂ ಭಾಗವನ್ನು ವಾಪಸ್ ಪಡೆಯಲು ಶ್ರಮಿಸುತ್ತದೆ ಎಂದು ಕೂಡ ಹನ್ಸ್ ರಾಜ್ ಹೇಳಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಈಚೆಗಷ್ಟೇ ಹೇಳಿಕೆ ನೀಡಿ, ಪಾಕ್ ಆಕ್ರಮಿತ ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಿದ್ದು ಎಂದಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union Minister Hansraj Ahir today said no one could stop India if it wanted to wrest PoK from Pakistan, stressing that the territory was a part of India.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ