ಕಾನೂನಿನ ಕಣ್ಣಿನಿಂದ ಭ್ರಷ್ಟರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ-ಬಿವಿ ಆಚಾರ್ಯ

Subscribe to Oneindia Kannada

ಚೆನ್ನೈ, ಫೆಬ್ರವರಿ 14: ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ಶಶಿಕಲಾ ನಟರಾಜನ್ ಮತ್ತು ಇತರ ಇಬ್ಬರು ದೋಷಿಗಳು ಎಂದು ತೀರ್ಪು ನೀಡಿದೆ. ಈ ಮಹತ್ವದ ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ವಕೀಲ, ಮಾಜಿ ಅಡ್ವೊಕೇಟ್ ಜನರಲ್ ಬಿ. ವಿ ಆಚಾರ್ಯ 'ಕಾನೂನಿನ ಕಣ್ಣಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ' ಎಂದಿದ್ದಾರೆ.

ಭಾರತದ ನ್ಯಾಯಾಂಗ ವ್ಯವಸ್ಥೆ ಇನ್ನೂ ಸ್ವತಂತ್ರವಾಗಿದೆ. ಹೀಗಾಗಿ ಯಾರು ಎಷ್ಟೇ ಪ್ರಭಾವಿಗಳಾದರೂ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.[ಶಶಿಕಲಾ ಭವಿಷ್ಯ: 2 ಸುಪ್ರೀಂ ಜಡ್ಜ್ ಗಳ ಮುಂದಿರುವ 4 ಸಾಧ್ಯತೆಗಳು]

No one can hide from law’s eye – B V Acharya

ಲೆಕ್ಕ ಸರಿಯಾಗಿಲ್ಲ ಎಂದು ಒಂದೇ ಕಾರಣಕ್ಕೆ ಕರ್ನಾಟಕ ಹೈಕೋರ್ಟಿನಲ್ಲಿ ಜಯಲಲಿತಾ ಮತ್ತು ಶಶಿಕಲಾರನ್ನು ನಿರ್ದೋಷಿ ಎಂದು ತೀರ್ಪು ನೀಡಲಾಗಿತ್ತು. ಇದೀಗ ಸುಪ್ರಿಂ ಕೋರ್ಟ್ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ. ಕಾನೂನಿನ ಕೈಯಿಂದ ಎಷ್ಟೇ ಪ್ರಭಾವಿಗಳಾದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದಿದ್ದಾರೆ.[ಸಂಕಷ್ಟದಲ್ಲಿರುವ ಶಶಿಕಲಾ ನಟರಾಜನ್ ಮಾಡಿದ 5 ನಿರ್ಣಾಯಕ ತಪ್ಪುಗಳು]

ಒಟ್ಟು 1,000 ಕ್ಕೂ ಹೆಚ್ಚು ಪುಟಗಳ ಆದೇಶವನ್ನು ಸುಪ್ರಿಂ ಕೋರ್ಟ್ ನೀಡಿದ್ದು ಅಂತಿಮ ಆದೇಶ ನೋಡಿ ಹೆಚ್ಚಿನ ವಿವರ ನೀಡಬೇಕಾಗುತ್ತದೆ ಎಂದಿದ್ದಾರೆ. ಜಯಲಲಿತಾ ವಿರುದ್ಧವಾಗಿ ಸುಪ್ರಿಂ ಕೋರ್ಟ್ ಹಾಗೂ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಬಿ.ವಿ ಆಚಾರ್ಯ ವಾದಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In the Jayalalitha disproportionate assets case is Supreme Court delivered verdict. Sasikala and 2 others are convicted as per CBI special court order. BV Acharya reaction to the apex court verdict.
Please Wait while comments are loading...