ಪತಿ, ಪತ್ನಿ ಆದಾಯ 10 ಲಕ್ಷ ಇದ್ದರೆ ಎಲ್‌ಪಿಜಿ ಸಬ್ಸಿಡಿ ಇಲ್ಲ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 05 : ಎಲ್‌ಪಿಜಿ ಸಿಲಿಂಡರ್‌ಗೆ ನೀಡುವ ಸಬ್ಸಿಡಿಗೆ ಪತಿಯ ಆದಾಯದ ಜೊತೆ ಪತ್ನಿಯ ಆದಾಯವನ್ನು ಸೇರಿಸಲಾಗಿದೆ. ಇದರಿಂದಾಗಿ ಪತಿ ಹಾಗೂ ಪತ್ನಿ ಇಬ್ಬರ ಆದಾಯವೂ ಸೇರಿ 10 ಲಕ್ಷ ರೂ. ಮೀರಿದ್ದರೆ, ಅವರಿಗೆ ಸಬ್ಸಿಡಿ ಕಡಿತಗೊಳ್ಳಲಿದೆ.

ಹಿಂದೆ ಸಬ್ಸಿಡಿ ಪಡೆಯುವ ವ್ಯಕ್ತಿಯ ವಾರ್ಷಿಕ ಆದಾಯ 10 ಲಕ್ಷ ರೂ. ಮೀರಿರಬಾರದು ಎಂದು ನಿರ್ಬಂಧ ವಿಧಿಸಲಾಗಿತ್ತು. ಈಗ ಸಬ್ಸಿಡಿ ಆದಾಯ ಮಿತಿಗೆ ಪತ್ನಿಯ ಆದಾಯವನ್ನೂ ಸೇರಿಸಲಾಗಿದೆ. ಇದರಿಂದಾಗಿ ಸಬ್ಸಿಡಿ ವಂಚಿತ ಕುಟುಂಬಗಳ ಸಂಖ್ಯೆ ಹೆಚ್ಚಾಗಲಿದೆ. [10 ಲಕ್ಷ ರು ವಾರ್ಷಿಕ ಆದಾಯವಿದ್ದರೆ, ಎಲ್ ಪಿಜಿ ಸಬ್ಸಿಡಿ ಖೋತಾ]

lpg

ಸಿಲಿಂಡರ್‌ ಸಬ್ಸಿಡಿ ಪಡೆಯಲು ಬಯಸುವ ಕುಟುಂಬದ ಪತಿ-ಪತ್ನಿಯರಿಬ್ಬರ ವಾರ್ಷಿಕ ಆದಾಯ ಹತ್ತು ಲಕ್ಷ ರೂ. ದಾಟುವಂತಿಲ್ಲ ಎಂದು ಸೂಚಿಸಲಾಗಿದೆ. ಪತಿ-ಪತ್ನಿಯ ಆದಾಯ 10 ಲಕ್ಷಕ್ಕಿಂತ ಹೆಚ್ಚಿರುವವರು ಘೋಷಣಾ ಪತ್ರ ಸಲ್ಲಿಸಬೇಕು ಎಂದು ಗ್ರಾಹಕರಿಗೆ ಮೊಬೈಲ್‌ ಸಂದೇಶಗಳನ್ನು ರವಾನಿಸಲಾಗುತ್ತಿದೆ. [ಸ್ಥಿತಿವಂತರಿಗೆ ಎಲ್ ಪಿಜಿ ಸಬ್ಸಿಡಿ ಸ್ಥಗಿತ: ವೆಂಕಯ್ಯ ನಾಯ್ಡು]

ಬೆಂಗಳೂರಲ್ಲಿ ಹೆಚ್ಚು : ಕರ್ನಾಟಕದಲ್ಲಿ ಸುಮಾರು 8 ಲಕ್ಷ ಕುಟುಂಬಗಳಲ್ಲಿ ಪತಿ ಮತ್ತು ಪತ್ನಿಯ ವಾರ್ಷಿಕ ಆದಾಯ 10 ಲಕ್ಷ ಮೀರಿದೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಶೇ 80ರಷ್ಟು ಜನರು ಬೆಂಗಳೂರಿನಲ್ಲಿದ್ದಾರೆ. ಸರ್ಕಾರದ ಸಬ್ಸಿಡಿ ಕಡಿತದ ಬಿಸಿ ಬೆಂಗಳೂರಿಗರಿಗೇ ಹೆಚ್ಚಾಗಿ ತಟ್ಟಲಿದೆ.[ಹೊಸದಾಗಿ LPG ಸಂಪರ್ಕ ಪಡೆಯುವುದು ಹೇಗೆ?]

ಸಾಫ್ಟ್‌ವೇರ್‌ ಇಂಜಿನಿಯರ್‌ಗಳು, ವಿಜ್ಞಾನಿಗಳು, ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಅಧಿಕಾರಿಗಳು, ಯುಜಿಸಿ ವೇತನ ಪಡೆಯುವ ಹಿರಿಯ ಪ್ರಾಧ್ಯಾಪಕರು ಸೇರಿದಂತೆ ಇತರರು ಈ ನಿಯಮದಿಂದಾಗಿ ಸಬ್ಸಿಡಿ ಕಡಿತದ ವ್ಯಾಪ್ತಿಗೆ ಒಳಪಡಲಿದ್ದಾರೆ. [ಸಿಲಿಂಡರ್ ಸಬ್ಸಿಡಿ ತಿರಸ್ಕರಿಸಲು ಏನು ಮಾಡಬೇಕು?]

ಕರ್ನಾಟಕದಲ್ಲಿ ಭಾರತೀಯ ತೈಲ ನಿಗಮದ 45 ಲಕ್ಷ, ಹಿಂದೂಸ್ತಾನ್‌ ಪೆಟ್ರೋಲಿಯಂನ 27 ಲಕ್ಷ ಹಾಗೂ ಭಾರತ್‌ ಪೆಟ್ರೋಲಿಯಂ 23 ಲಕ್ಷ ಗ್ರಾಹಕರಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tax payers with annual income of more than Rs 10 lakh will not get subsidised cooking gas (LPG). The benefit of the LPG subsidy will not be available for consumers if the consumer or his/her spouse had taxable income of more than Rs 10 lakh.
Please Wait while comments are loading...