ಒಂದೆಳೆ ಬಂಗಾರನೂ ಇಲ್ಲದೇ ಮದುವೆ ಆಗ್ತಿರೋ ಜೋಡಿ, ಕೇರಳದಲ್ಲೀಗ ನೋ ಜುವೆಲ್ಲರಿ ವೆಡ್ಡಿಂಗ್ ಟ್ರೆಂಡ್

ಬಂಗಾರ ಇಲ್ಲದೇ ಮದುವೆ ಆಗೋದನ್ನು ಹಲವರಿಗೆ ಊಹಿಸಲೂ ಕಷ್ಟ. ಆದರೆ ಸದ್ಯ ಬಂಗಾರ ತುಟ್ಟಿ ಆಗಿರೋದನ್ನೇ ಕಾರಣವಾಗಿಟ್ಟುಕೊಂಡು ಕೇರಳದ ಹುಡುಗ ಹುಡುಗಿ ನೋ ಜ್ಯುವೆಲ್ಲರಿ ವೆಡ್ಡಿಂಗ್ ಗೆ ಜೈ ಅಂದಿದ್ದಾರೆ.

ಭಾರತೀಯ ಕುಟುಂಬಗಳಲ್ಲಿ ಬಂಗಾರ ಅಂದರೆ ಜನರ ಲೈಫ್ಗೆ ಹೆಚ್ಚೇ ಹತ್ತಿರ. ಮದುವೆಯಲ್ಲಿ ಹೈಲೈಟೇ ಬಂಗಾರದ ಒಡವೆಗಳು. ಮದುಮಗಳು, ಮದುಮಗನಿಗೆ ಹಾಕಿರೋ ಒಡವೆಗಳ ಅಂದ, ಚಂದ, ಆಡಂಬರ ಒಂದು ಕಡೆ ಆದರೆ ಮದುವೆಗೆ ಬಂಗಾರ ಪ್ರದರ್ಶನಕ್ಕೆಂದೇ ಬರುವ ಬಂಧುಗಳ ಶೋ ಮತ್ತೊಂದು ಕಡೆ. ಹೆಚ್ಚಿನೆಲ್ಲ ಕಡೆ ಸಾಲ ಮಾಡಿ, ಜಮೀನು ಮಾರಿ ಮದುವೆಗೆ ಬಂಗಾರ ಮಾಡಿಸುವ ಪದ್ಧತಿಯೂ ಇದೆ. ಯಾಕೆಂದರೆ ಮದುವೆಗೆ ಅಂದಾಕ್ಷಣ ಚಿನ್ನ ಬೇಕು ಅಂತ ಯೋಚಿಸುವವರೇ ಎಲ್ಲ.

No Jewellery Wedding Trend

ಜೆನ್ ಜೀಗಳ ಹೊಸ ಚಿಂತನೆ

ಆದರೆ ಜೆನ್ ಜೀ ಥಾಟ್, ಅವರ ಲೈಫ್ಸ್ಟೈಲ್ ಕಂಪ್ಲೀಟ್ ಡಿಫರೆಂಟ್. ಅವರು ಅಜ್ಜ ನೆಟ್ಟ ಆಲದ ಮರಕ್ಕೆ ನೇಣು ಹಾಕ್ಕೊಳ್ಳುವವರಲ್ಲ. ಸರಿ ಇರಲಿ, ತಪ್ಪಿರಲಿ ಸ್ವತಂತ್ರ ನಿಲುವಿನ ಮೂಲಕ ಗಮನಸೆಳೆಯುವವರು. ಸೋ ಅವರು ಈಗ ಅಪ್ಪಿಕೊಂಡಿರುವ ಹೊಸ ಹಾದಿ ನೋ ಜ್ಯುವೆಲ್ಲರಿ ವೆಡ್ಡಿಂಗ್.

ಕೋಲಾರ ಗೋಲ್ಡ್ ಫೀಲ್ಡ್ಸ್‌ನಂತೆ ಚಿನ್ನದ ಹುಡುಕಾಟ! ನಗರದಲ್ಲಿ ಅಡಗಿಸಿದ 21 ಲಕ್ಷ ರೂ. ನಾಣ್ಯ ಎಲ್ಲಿದೆ?
ಕೋಲಾರ ಗೋಲ್ಡ್ ಫೀಲ್ಡ್ಸ್‌ನಂತೆ ಚಿನ್ನದ ಹುಡುಕಾಟ! ನಗರದಲ್ಲಿ ಅಡಗಿಸಿದ 21 ಲಕ್ಷ ರೂ. ನಾಣ್ಯ ಎಲ್ಲಿದೆ?

ಕೇರಳದಲ್ಲೊಂದು ಹೊಸ ಕ್ರಾಂತಿ

ಈಗ ಇನ್ಸ್ಟಾಗ್ರಾಮ್ನಲ್ಲಿ ಕೇರಳದ ಮದುವೆ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರಲ್ಲಿ ಒಬ್ಬ ಹುಡುಗ, ಹುಡುಗಿ ಆಭರಣವನ್ನೇ ಧರಿಸದೇ ಮದುವೆ ಆಗಿದ್ದಾರೆ. ಒಂದೇ ಒಂದು ಆಭರಣ, ಒಂದು ಗ್ರಾಂ ಚಿನ್ನ ಕೂಡಾ ಧರಿಸದ ರೀತಿ ಹಲವರ ಹುಬ್ಬೇರುವ ಹಾಗೆ ಮಾಡಿದೆ. ಚಿನ್ನ ಇಲ್ಲಾಂದ್ರೆ ಆರ್ಟಿಫಿಷಿಯಲ್ ಜುವೆಲ್ಲರಿ ಧರಿಸಿರಬಹುದು ಅಂದುಕೊಂಡರೆ ನಿಮ್ಮ ಆ ಊಹೆಯೂ ಸುಳ್ಳಾಗುತ್ತೆ. ಈ ಯುವ ಜೋಡಿ ಒಂದೇ ಒಂದು ಆರ್ಟಿಫಿಶಿಯಲ್ ಜ್ಯುವೆಲ್ಲರಿ ಕೂಡಾ ಧರಿಸಿಲ್ಲ.

ಕೆಂಪು ಬಣ್ಣದ ಭರ್ಜರಿ ಸೀರೆ ಉಟ್ಟು, ಹೇರ್ಸ್ಟೈಲ್, ಮೇಕಪ್ನಿಂದ ಬಂಗಾರವಿಲ್ಲದ ಫೀಲ್ ಕೊಂಚವೂ ಬರದ ಹಾಗೆ ಇವರು ಮದುವೆಯಾಗಿದ್ದಾರೆ. ಇವರ ಮದುವೆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಜೆನ್ ಝೀ ಅಂತೂ ಈ ಮದುವೆಗೆ ಜೈ ಎಂದಿದ್ದಾರೆ.

 1,600 ವರ್ಷಗಳಿಂದ ನಾಪತ್ತೆ! ರೋಮ್‌ನ ದೋಚಿದ ಚಿನ್ನ ಇನ್ನೂ ಸಿಕ್ಕಿಲ್ಲ, ಲಕ್ಕುಂಡಿಯಂತೆ ಇಲ್ಲೂ ಸವಾಲಾದ ರಹಸ್ಯ
1,600 ವರ್ಷಗಳಿಂದ ನಾಪತ್ತೆ! ರೋಮ್‌ನ ದೋಚಿದ ಚಿನ್ನ ಇನ್ನೂ ಸಿಕ್ಕಿಲ್ಲ, ಲಕ್ಕುಂಡಿಯಂತೆ ಇಲ್ಲೂ ಸವಾಲಾದ ರಹಸ್ಯ

ಅನೇಕರಿಗೆ ಆದರ್ಶವಾದ ಮದುವೆ

ನೋ ಜ್ಯುವೆಲ್ಸ್ ಟ್ರೆಂಡ್ನಲ್ಲಿ ಸರಳವಾಗಿ ಮದುವೆ ಆದರೆ ಅಲ್ಲೊಂದು ಸರಳತೆ ಇರುತ್ತದೆ. ಹೊರೆಯಾಗುವ ವೆಚ್ಚ ತಗ್ಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ಒತ್ತಡಕ್ಕಿಂತಲೂ ವೈಯಕ್ತಿಕ ನೆಮ್ಮದಿಗೆ ಆದ್ಯತೆ ನೀಡಲು ಇದು ಒಂದು ಉತ್ತಮ ಅವಕಾಶ. ಈ ಹಾದಿಯನ್ನು ಆರಿಸಿಕೊಳ್ಳುವ ವಧೂವರರು ಆಭರಣಗಳಿಲ್ಲದೆಯೂ ಡಿಗ್ನಿಫೈಡ್ ಆಗಿ ಮದುವೆ ಆಗಬಹುದು. ಒಳ್ಳೆಯ ಕಸೂತಿ ವರ್ಕ್ ಇರುವ ಸೀರೆಯೇ ಬಂಗಾರವಿಲ್ಲದ ಖಾಲಿತನವನ್ನು ತುಂಬಬಲ್ಲದು. ನೋಡುವವರ ಗಮನವೆಲ್ಲ ಭರ್ಜರಿ ಆಗಿರುವ ಸೀರೆಯ ಮೇಲೇ ಹೋಗುವ ಕಾರಣ ಅಲ್ಲಿ ಬಂಗಾರದ ಕೊರತೆ ಕಾಣಿಸದು.

ಹೂವಿನ ಅಲಂಕಾರ

ಸೊಗಸಾದ ಹೂವಿನ ಆಭರಣಗಳನ್ನು ಒಂದಿಷ್ಟು ಮಂದಿ ಹಳದಿ, ಸಂಗೀತ್ನಂಥ ಕಾರ್ಯಕ್ರಮಕ್ಕೆ ಧರಿಸುತ್ತಾರೆ. ಅದನ್ನು ಮದುವೆಗೂ ಧರಿಸಬಹುದು. ಹೂವಿನ ಸಹಜ ಸೌಂದರ್ಯ ಸೊಗಸಾಗಿ ಕಾಣುತ್ತದೆ. ಎಲ್ಲೂ ಕೊರತೆ ಕಾಣಿಸದು. ಕತ್ತಿಗೆ ನೆಕ್ಲೆಸ್ ಥರ ಹೂವಿನ ಅಲಂಕಾರ ಮಾಡಬಹುದು, ಕಿವಿ, ತೋಳುಗಳಿಗೆ, ಸೊಂಟಕ್ಕೆ ಹೀಗೆ. ನಾವು ಎಲ್ಲೆಲ್ಲ ಆಭರಣ ಧರಿಸುತ್ತೇವೋ ಅಲ್ಲೆಲ್ಲ ಹೂವಿನ ಅಲಂಕಾರ ಮಾಡಬಹುದು. ಹೂವುಗಳು ಕೊಂಚ ಡೆಲಿಕೇಟ್ ಆಗಿರುವ ಕಾರಣ ಹುಷಾರಾಗಿ ಮೈಂಟೇನ್ ಮಾಡಬೇಕು.

ಚಿನ್ನದ ಸಂಕಟ ಇನ್ನಿಲ್ಲ

ಆಭರಣಗಳಿಲ್ಲದ ಅಥವಾ ಕಡಿಮೆ ಆಭರಣಗಳ ತತ್ವವನ್ನು ಅಳವಡಿಸಿಕೊಳ್ಳುವುದು ಕುಟುಂಬಗಳಿಗೆ ಭಾರಿ ಪ್ರಮಾಣದ ಚಿನ್ನವನ್ನು ಖರೀದಿಸಲು ತಗಲುವ ದೊಡ್ಡ ಆರ್ಥಿಕ ಹೊರೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಬ್ಯಾಂಕ್ ಲಾಕರ್ನ ಆತಂಕ ಅಥವಾ ಒಡವೆಗಳನ್ನು ಸುರಕ್ಷಿತವಾಗಿಡುವ ಚಿಂತೆಯ ಬದಲು, ದಂಪತಿ ಆ ಹಣವನ್ನು ಒಟ್ಟಿಗೆ ಪ್ರವಾಸ ಮಾಡಲು, ಶಿಕ್ಷಣಕ್ಕೆ ಅಥವಾ ತಮ್ಮ ಹೊಸ ಜೀವನವನ್ನು ಪ್ರಾರಂಭಿಸಲು ಬಳಸಬಹುದು.

ಚಿನ್ನವಿಲ್ಲದಿದ್ದರೇ ಲೈಫು ಚೆನ್ನ

ಚಿನ್ನದ ರೇಟು ಗಗನಕ್ಕೇರಿರುವ ಕಾರಣ ಚಿನ್ನವಿಲ್ಲದೇ ಸೊಗಸಾಗಿ ಮದುವೆಯಾಗೋದನ್ನು ರೂಢಿಸಿಕೊಂಡರೆ ಲೈಫು ಚೆನ್ನಾಗಿರುತ್ತದೆ. ಭಾರವೂ ಇರುವುದಿಲ್ಲ. ಸಾಲದ ಹೊರೆ ಇಲ್ಲದ ಕಾರಣ ಮನಸ್ಸೂ ಹಗುರಾಗಿರುತ್ತದೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+