Breaking; ಕೋವಿಡ್ ಲಸಿಕೆ ಪಡೆಯುವಂತೆ ಬಲವಂತ ಮಾಡುವಂತಿಲ್ಲ

ನವದೆಹಲಿ, ಮೇ 02; ಕೋವಿಡ್ ಲಸಿಕೆ ಪಡೆಯುವಂತೆ ಯಾರೊಬ್ಬರನ್ನು ಬಲವಂತ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಲಸಿಕೆ ಪಡೆದರೆ ಆಗುವ ಪರಿಣಾಮದ ಕುರಿತ ಅಂಕಿ ಅಂಶಗಳನ್ನು ಬಹಿರಂಗಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಸೋಮವಾರ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈಗಿರುವ ಕೋವಿಡ್ ಲಸಿಕೆ ಪಡೆಯುವ ನಿಯಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ. ಬಹುಸಂಖ್ಯಾತ ಜನರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೆಲವು ನಿಯಮ ರೂಪಿಸಬಹುದು ಎಂದು ಕೋರ್ಟ್‌ ಹೇಳಿದೆ.

No Individual Can Be Forced To Get Vaccine Says Supreme Court

ಕೋವಿಡ್ ಲಸಿಕೆ ಪಡೆಯದ ವ್ಯಕ್ತಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ನಿರ್ಬಂಧಿಸುವ ಕೆಲವು ರಾಜ್ಯಗಳ ಕ್ರಮ ಸರಿಯಲ್ಲ. ಇಂತಹ ನಿಯಮಗಳನ್ನು ರೂಪಿಸಿದ್ದರೆ ಪುನರ್ ಪರಿಶೀಲಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎಲ್. ಎನ್. ರಾವ್ ಮತ್ತು ನ್ಯಾಯಮೂರ್ತಿ ಬಿ. ಜಿ. ಗವಾಯಿ ಅವರಿದ್ದ ಪೀಠ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡದಂತೆ ನಿಷೇಧಿಸುವುದು ಸರಿಯಲ್ಲ ಎಂದು ಹೇಳಿದೆ.

ಮಕ್ಕಳಿಗೆ ಲಸಿಕೆ ನೀಡುವ ಕುರಿತು ಸಹ ಸುಪ್ರೀಂಕೋರ್ಟ್‌ ವಿಚಾರಣೆ ವೇಳೆ ಗಮನ ಹರಿಸಿದ್ದು, ತಜ್ಞರ ಅಭಿಪ್ರಾಯದ ನಂತರ ನಾವು ಎರಡನೇ ಅಭಿಪ್ರಾಯವನ್ನು ತಿಳಿಸುವುದುದ ಸರಿಯಲ್ಲ ಎಂದಿದೆ.

ಕೇಂದ್ರ ಸರ್ಕಾರ ಏಪ್ರಿಲ್ 10ರಂದು 18 ವರ್ಷ ಮೇಲ್ಪಟ್ಟ ಎಲ್ಲರೂ ಬೂಸ್ಟರ್ ಡೋಸ್ ಲಸಿಕೆ ಪಡೆಯಬಹುದು ಎಂದು ಆದೇಶ ಹೊರಡಿಸಿದೆ. ವಿವಿಧ ರಾಜ್ಯ ಸರ್ಕಾರಗಳು ಕೋವಿಡ್ ಬೂಸ್ಟರ್ ಲಸಿಕೆ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+