ಚುನಾವಣೆ ಖರ್ಚಿಗಾಗಿ ವಾರದ ವಿಥ್ ಡ್ರಾ ಮಿತಿ ಹೆಚ್ಚಿಸಲು ಆಗಲ್ಲ: ಆರ್ ಬಿಐ

Posted By:
Subscribe to Oneindia Kannada

ನವದೆಹಲಿ, ಜನವರಿ 28: ವಿಧಾನಸಭೆ ಚುನಾವಣೆಯ ಖರ್ಚಿಗೆ ಹಣ ಬೇಕಾಗುತ್ತದೆ. ಆದ್ದರಿಂದ ಈಗಿರುವ ವಾರದ ವಿಥ್ ಡ್ರಾ ಮಿತಿಯನ್ನು ಹೆಚ್ಚಿಸಿ ಎಂಬ ಚುನಾವಣೆ ಆಯೋಗದ ಮನವಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಳ್ಳಿ ಹಾಕಿದೆ. ಆದ್ದರಿಂದ ಐದು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಚೆಕ್, ಡಿಜಿಟಲ್ ಪಾವತಿಯನ್ನೇ ಮಾಡಬೇಕಾಗುತ್ತದೆ.

ಫೆಬ್ರವರಿ ಹಾಗೂ ಮಾರ್ಚ್ ನಲ್ಲಿ ಉತ್ತರ ಪ್ರದೇಶ, ಪಂಜಾಬ್, ಉತ್ತರಾ ಖಂಡ್, ಮಣಿಪುರ ಹಾಗೂ ಗೋವಾದಲ್ಲಿ ಚುನಾವಣೆಯಿದೆ. ಆದ್ದರಿಂದ ಚುನಾವನೆ ಆಯೋಗವು ರಿಸರ್ವ್ ಬ್ಯಾಂಕ್ ಗೆ ಮನವಿ ಮಾಡಿತ್ತು. ವೈಯಕ್ತಿಕ ಖಾತೆಗಳಿಂದ ಈಗ ವಾರಕ್ಕೆ ಇಪ್ಪತ್ನಾಲ್ಕು ಸಾವಿರ ಮಾತ್ರ ಡ್ರಾ ಮಾಡಲು ಸಾಧ್ಯವಿದೆ. ಅದನ್ನು ಎರಡು ಲಕ್ಷಕ್ಕೆ ಹೆಚ್ಚಿಸಿ ಎಂದು ಸಲ್ಲಿಸಿದ್ದ ಮನವಿ ತಿರಸ್ಕರಿಸಲಾಗಿದೆ.[ಉತ್ತರ ಪ್ರದೇಶ ಚುನಾವಣೆ: ಮಹಿಳಾ ಅಭ್ಯರ್ಥಿಗಳನ್ನು ಹುಡುಕಿಕೊಡಿ ಪ್ಲೀಸ್..]

rbi

ಈ ಮಿತಿಯನ್ನು ಅಪನಗದೀಕರಣ ಘೋಷಣೆಯಾದ ನಂತರ ವಿಧಿಸಲಾಗಿದೆ. ಮಾಧ್ಯಮದ ವರದಿ ಪ್ರಕಾರ ಫೆಬ್ರವರಿ ಕೊನೆಗೆ ಹೊಸ ನೋಟುಗಳು ಅಗತ್ಯ ಸಂಖ್ಯೆಯಲ್ಲಿ ಚಲಾವಣೆಗೆ ಬಂದ ನಂತರ ಕೆಲವು ವಿನಾಯ್ತಿಗಳು ದೊರೆಯುತ್ತವೆ. ಚುನಾವಣೆಯಲ್ಲಿ ಮಾಡುವ ಖರ್ಚಿನ ಮೇಲೆ ಚುನಾವಣೆ ಆಯೋಗ ಹಾಗೂ ತೆರಿಗೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.[ಪಂಜಾಬ್: ಒಂದೇ ರಾಜ್ಯಕ್ಕೆ ಎಎಪಿಯಿಂದ ನಾಲ್ಕು ಪ್ರಣಾಳಿಕೆ!]

ಅಭ್ಯರ್ಥಿಗಳು ಚುನಾವಣೆ ಖರ್ಚು-ವೆಚ್ಚಕ್ಕೆ ಸಂಬಂಧಿಸಿದ ಹಾಗೆ ಖಾತೆ ತೆರೆಯಬೇಕು. ಚುನಾವಣೆ ಆಯೋಗ ಅದರ ನಿಗಾ ವಹಿಸುತ್ತದೆ. ವಾರಕ್ಕೆ 24 ಸಾವಿರ ಅಂದರೆ ನಾಲ್ಕು ವಾರದಲ್ಲಿ 96 ಸಾವಿರ ಆಗುತ್ತದೆ. ಈಗ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ನಲ್ಲಿ ಅಭ್ಯರ್ಥಿಗಳು 28 ಲಕ್ಷ ರುಪಾಯಿಯನ್ನು ವೆಚ್ಚ ಮಾಡಬಹುದಾಗಿದೆ.

Election commission

ಇನ್ನು ಗೋವಾ ಮತ್ತು ಮಣಿಪುರದಲ್ಲಿ ಈ ಮೊತ್ತ 20 ಲಕ್ಷ ರುಪಾಯಿ. ಆದ್ದರಿಂದ ವಾರದ ಹಣ ವಿಥ್ ಡ್ರಾ ಮಿತಿ ಹೆಚ್ಚಿಸುವಂತೆ ಚುನಾವಣೆ ಆಯೋಗವು ಆರ್ ಬಿಐಗೆ ಅಧಿಕೃತವಾಗಿ ಮನವಿ ಮಾಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Reserve Bank of India is said to have turned down the Election Commission’s plea to relax weekly cash withdrawal limits for poll expenses, which means candidates in upcoming contests in five states will have to increase their reliance on digital payments systems or cheques.
Please Wait while comments are loading...