ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲಿದ್ದಲು ಹಂಚಿಕೆಯಲ್ಲಿ ರಾಜ್ಯಗಳಿಗೆ ತಾರತಮ್ಯ ಮಾಡಿಲ್ಲ; ಜೋಶಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 09; " ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿ ಒಂದು ರಾಜ್ಯ ಸರ್ಕಾರಕ್ಕೆ ಪ್ರಾಶಸ್ತ್ಯ ನೀಡಲಾಗಿದೆ ಎಂಬ ಆರೋಪಗಳು ಶುದ್ಧ ಸುಳ್ಳು" ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಈ ಕುರಿತು ಅವರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. "ಕಲ್ಲಿದ್ದಲು ಬ್ಲಾಕ್ಸ್‌ಗಳ ಹಂಚಿಕೆಯಲ್ಲಿ ಯಾವುದೇ ಒಂದು ರಾಜ್ಯಕ್ಕೆ ವಿಶೇಷ ಪ್ರಾಶಸ್ತ್ಯ ನೀಡಲು ಯಾವುದೇ ವಿಶೇಷ ನಿಯಮ ಅಥವಾ ವ್ಯಾಪ್ತಿ ಇಲ್ಲ" ಎಂದು ತಿಳಿಸಿದ್ದಾರೆ.

ದೇಶಿಯ ಕಲ್ಲಿದ್ದಲು ಉತ್ಪಾದನೆ ಈ ವರ್ಷ ಶೇ.18ರಷ್ಟು ಹೆಚ್ಚಳವಾಗಿದೆ: ಪ್ರಹ್ಲಾದ್ ಜೋಶಿದೇಶಿಯ ಕಲ್ಲಿದ್ದಲು ಉತ್ಪಾದನೆ ಈ ವರ್ಷ ಶೇ.18ರಷ್ಟು ಹೆಚ್ಚಳವಾಗಿದೆ: ಪ್ರಹ್ಲಾದ್ ಜೋಶಿ

2015ರಲ್ಲಿ ಗುಜರಾತ್ ಮಿನರಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆರಡ್‌ಗೆ ಎರಡು ಲಿಗ್ನೈಟ್ ಬ್ಲಾಕ್‌ಗಳನ್ನು ಹಂಚಲಾಯಿತು.‌ ಅದೇ ರೀತಿ, ಮೂರು ಕಲ್ಲಿದ್ದಲು ಬ್ಲಾಕ್‌ಗಳನ್ನು ತೆಲಂಗಾಣದ SCCLಗೆ ಹಂಚಲಾಯಿತು.

ಭಾರತದ ಭವಿಷ್ಯದ ವಿದ್ಯುತ್ ಪೂರೈಕೆಗೆ ಕಲ್ಲಿದ್ದಲು ಮಹತ್ವದ ಪಾತ್ರ ವಹಿಸಲಿದೆ : ಪ್ರಲ್ಹಾದ ಜೋಶಿ ಭಾರತದ ಭವಿಷ್ಯದ ವಿದ್ಯುತ್ ಪೂರೈಕೆಗೆ ಕಲ್ಲಿದ್ದಲು ಮಹತ್ವದ ಪಾತ್ರ ವಹಿಸಲಿದೆ : ಪ್ರಲ್ಹಾದ ಜೋಶಿ

No Discrimination In Coal Distribution To States Says Pralhad Joshi

ಒಡಿಶಾದ ನೈನಿ ಕಲ್ಲಿದ್ದಲು ಬ್ಲಾಕ್, ತೆಲಂಗಾಣದ ಪೆಂಗಡಪ್ಪ ಕಲ್ಲಿದ್ದಲು ಬ್ಲಾಕ್, ಒಡಿಶಾದ ಹೊಸ ಪತ್ರಪರ ಕಲ್ಲಿದ್ದಲು ಬ್ಲಾಕ್‌ಗಳನ್ನ ಹಂಚಿಕೆ ಮಾಡಲಾಗಿದೆ. 2015 ರಲ್ಲಿ SCCLಗೆ ಮಂಜೂರು ಮಾಡಲಾದ ನೈನಿ ಬ್ಲಾಕ್ ಅನ್ನು ತೆಲಂಗಾಣ ಸರ್ಕಾರವು ಎಲ್ಲಾ ಅನುಮತಿಗಳನ್ನು ಪಡೆಯುವಲ್ಲಿ ಅನುಕೂಲ ಮಾಡಿಕೊಟ್ಟಿದ್ದರೂ ಸಹ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ.

'ಕಮರ್ಷಿಯಲ್ ಕೋಲ್ ಬ್ಲಾಕ್ಸ್ ಹರಾಜಿನಿಂದ ಕಲ್ಲಿದ್ದಲು ಕೊರತೆ ನಿವಾರಣೆ''ಕಮರ್ಷಿಯಲ್ ಕೋಲ್ ಬ್ಲಾಕ್ಸ್ ಹರಾಜಿನಿಂದ ಕಲ್ಲಿದ್ದಲು ಕೊರತೆ ನಿವಾರಣೆ'

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ, 1957 ಮತ್ತು ಕಲ್ಲಿದ್ದಲು ಗಣಿಗಳ (ವಿಶೇಷ ನಿಬಂಧನೆಗಳು) ಕಾಯಿದೆ, 2015ರ ಮೂಲಕ ಕಲ್ಲಿದ್ದಲು ಬ್ಲಾಕ್‌ಗಳ ಹರಾಜನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಲ್ಲಿದ್ದಲು ಗಣಿಗಳ (ವಿಶೇಷ ನಿಬಂಧನೆಗಳು) ಕಾಯಿದೆ, ಗಣಿ ಮತ್ತು ಖನಿಜ ಅಭಿವೃದ್ಧಿಯ ಕಾಯಿದೆಗಳು ಗಣಿ ಹಂಚಿಕೆಯ ಪಾರದರ್ಶಕ ಕಾರ್ಯವಿಧಾನವನ್ನು ಒದಗಿಸುತ್ತವೆ. 2020ರ ಜೂನ್ 18 ರಂದು ವಾಣಿಜ್ಯ ಗಣಿಗಾರಿಕೆಯನ್ನು ಪ್ರಾರಂಭಿಸಿದ ನಂತರ ಅತ್ಯಂತ ಪಾರದರ್ಶಕ ಹರಾಜು ವಿಧಾನವನ್ನು ಅನುಸರಿಸಲಾಗುತ್ತಿದೆ.

No Discrimination In Coal Distribution To States Says Pralhad Joshi

ಇದರ ಅಡಿಯಲ್ಲಿ ಎಲ್ಲಾ ಕಲ್ಲಿದ್ದಲು/ ಲಿಗ್ನೈಟ್ ಮಾರಾಟಕ್ಕೆ ಹರಾಜು ಮಾರ್ಗದ ಮೂಲಕ ಲಿಗ್ನೈಟ್ ಬ್ಲಾಕ್‌ಗಳನ್ನು ನೀಡಲಾಗಿದೆ. ಯಾವುದೇ ರಾಜ್ಯ ಅಥವಾ ಕೇಂದ್ರ ಪಿಎಸ್‌ಯುಗೆ ವಾಣಿಜ್ಯ ಗಣಿಗಾರಿಕೆಯನ್ನು ಪ್ರಾರಂಭಿಸಿದ ನಂತರ ಹಂಚಿಕೆ ಮಾರ್ಗದ ಮೂಲಕ ಯಾವುದೇ ಕಲ್ಲಿದ್ದಲು/ ಲಿಗ್ನೈಟ್ ಬ್ಲಾಕ್‌ಗಳನ್ನು ನೀಡಲಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಕಲ್ಲಿದ್ದಲು ಹಂಚಿಕೆ; ಕೇಂದ್ರ ಕಲ್ಲಿದ್ದಲು ಸಚಿವಾಲಯವು ದೇಶಾದ್ಯಂತ ಹೂಡಿಕೆದಾರರ ಸಮಾವೇಶವನ್ನು ನಡೆಸುತ್ತಿದೆ. ಈಗಾಗಲೇ ಇಂಧೋರ್ ಮತ್ತು ಮುಂಬೈ ನಗರಗಳಲ್ಲಿ ಇಂತಹ ಸಮಾವೇಶಗಳನ್ನು ಯಶಸ್ವಿಯಾಗಿ ಆಯೋಜನೆ ಮಾಡಲಾಗಿದೆ. ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜಿನ ಬಗ್ಗೆ ಗಣಿವಲಯದಲ್ಲಿ ಉತ್ಸಾಹ ಉಂಟು ಮಾಡುವುದು ಇವುಗಳ ಉದ್ದೇಶವಾಗಿದೆ.

ಸಚಿವಾಲಯ 6ನೇ ಸುತ್ತಿನ ವಾಣಿಜ್ಯ ಹರಾಜಿನ ಅಡಿಯಲ್ಲಿ 133 ಕಲ್ಲಿದ್ದಲು ಗಣಿಗಳನ್ನು ಮತ್ತು 5ನೇ ಹಂತದ ವಾಣಿಜ್ಯ ಹರಾಜಿನ 2ನೇ ಪ್ರಯತ್ನದ ಅಡಿಯಲ್ಲಿ 8 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ 141 ಕಲ್ಲಿದ್ದಲು ಗಣಿಗಳು ಮುಖ್ಯವಾಗಿ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಬಿಹಾರ, ಛತ್ತೀಸ್‌ ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಪರಿಧಿಗೆ ಸೇರಿವೆ.

ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು, ಅಪರೂಪದ ಜೀವಜಂತುಗಳ ಆವಾಸಸ್ಥಾನಗಳು, ಶೇ 40ಕ್ಕಿಂತ ಹೆಚ್ಚಿನ ಅರಣ್ಯವನ್ನು ಹೊಂದಿರುವ ಗಣಿಗಳು, ಸೂಕ್ಷ್ಮ ಪ್ರದೇಶ ಇತ್ಯಾದಿಗಳನ್ನು ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ದಟ್ಟವಾದ ಜನವಸತಿಯ ವಾಸಸ್ಥಾನ ಪ್ರದೇಶ, ಹೆಚ್ಚಿನ ಹಸಿರು ಹೊದಿಕೆ ಅಥವಾ ನಿರ್ಣಾಯಕ ಮೂಲಸೌಕರ್ಯ ಇತ್ಯಾದಿಗಳಿರುವ ಕೆಲವು ಕಲ್ಲಿದ್ದಲು ಗಣಿಗಳ ಬ್ಲಾಕ್ ಗಡಿಗಳನ್ನು ಪ್ರತ್ಯೇಕಿಸಲಾಗಿದೆ.

ಹರಾಜು ಪ್ರಕ್ರಿಯೆಯ ಮುಂಗಡ ಮೊತ್ತ ಮತ್ತು ಬಿಡ್ ಭದ್ರತಾ ಮೊತ್ತದಲ್ಲಿ ಕಡಿತ, ಕಲ್ಲಿದ್ದಲು ಗಣಿಗಳನ್ನು ಭಾಗಶಃ ಪರಿಶೋಧಿಸಿದ ಸಂದರ್ಭದಲ್ಲಿ ಕಲ್ಲಿದ್ದಲು ಗಣಿಯ ಭಾಗವನ್ನು ಬಿಟ್ಟುಕೊಡಲು ಅನುಮತಿ, ಯಾವುದೇ ಪ್ರವೇಶ ಅಡೆತಡೆಗಳಿಲ್ಲದೆ ಸುಲಭವಾಗಿ ಭಾಗವಹಿಸುವಿಕೆ, ಕಲ್ಲಿದ್ದಲು ಬಳಕೆಯಲ್ಲಿ ಸಂಪೂರ್ಣ ನಮ್ಯತೆ, ಆಪ್ಟಿಮೈಸ್ಡ್ ಪಾವತಿ ರಚನೆಗಳು, ಆರಂಭಿಕ ಉತ್ಪಾದನೆ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನದ ಬಳಕೆಗೆ ಪ್ರೋತ್ಸಾಹ, ಇತ್ಯಾದಿಗಳು ಹರಾಜು ಪ್ರಕ್ರಿಯೆಯ ಪ್ರಮುಖ ಲಕ್ಷಣಗಳು.

English summary
No discrimination in coal distribution to states said Pralhad Joshi union minister of parliamentary affairs, coal and mines.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X