• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಫೆ.27 ಹಾಗೂ 28 ರಂದು ಕೊರೊನಾ ಲಸಿಕೆ ಪ್ರಕ್ರಿಯೆ ಇಲ್ಲ

|

ನವದೆಹಲಿ,ಫೆಬ್ರವರಿ 26: ದೇಶಾದ್ಯಂತ ಫೆ.27 ಹಾಗೂ 28 ರಂದು ಕೊರೊನಾ ಲಸಿಕೆ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸಾಫ್ಟ್‌ವೇರ್ ನವೀಕರಣದಿಂದಾಗಿ ಫೆ 27 ರಿಂದ ಎರಡು ದಿನಗಳವರೆಗೆ ದೇಶದಲ್ಲಿ ಕೋವಿಡ್‌-19 ಲಸಿಕೆ ಪ್ರಕ್ರಿಯೆ ನಡೆಯುವುದಿಲ್ಲ ಎಂದು ಹೇಳಿದೆ.

ಭಾರತ,ಮೋದಿಯನ್ನು ಶ್ಲಾಘಿಸಿದ ವಿಶ್ವ ಆರೋಗ್ಯ ಸಂಸ್ಥೆಭಾರತ,ಮೋದಿಯನ್ನು ಶ್ಲಾಘಿಸಿದ ವಿಶ್ವ ಆರೋಗ್ಯ ಸಂಸ್ಥೆ

ಈ ಶನಿವಾರ ಮತ್ತು ಭಾನುವಾರ (27 ಮತ್ತು 28 ಫೆಬ್ರವರಿ), ಕೋ-ವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್ ಕೋ-ವಿನ್ 1.0 ರಿಂದ ಕೋ-ವಿನ್ 2.0 ಗೆ ಪರಿವರ್ತನೆಯಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಈ ಎರಡರಲ್ಲಿ ಕೋವಿಡ್ 19 ಲಸಿಕೆ ಸೆಷನ್‌ಗಳನ್ನು ನಿಗದಿಪಡಿಸಲಾಗುವುದಿಲ್ಲ " ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಯುನಿಸೆಫ್ ಸಹಯೋಗದೊಂದಿಗೆ ಭಾರತವು ಬುಧವಾರ ಆರು ಲಕ್ಷ ಕೋವಾಕ್ಸ್ ಲಸಿಕೆಯನ್ನು ಘಾನಾಗೆ ರವಾನಿಸಿದೆ. ಈ ಉಪಕ್ರಮದಲ್ಲಿ 92 ದೇಶಗಳನ್ನು ಒಳಗೊಳ್ಳುವ ಗುರಿ ಹೊಂದಿದೆ.

ಕೋವಿಡ್ ಲಸಿಕೆಯನ್ನು ಬಾಂಗ್ಲಾದೇಶ(20 ಲಕ್ಷ), ಮ್ಯಾನ್ಮಾರ್(17 ಲಕ್ಷ), ನೇಪಾಳ(10 ಲಕ್ಷ), ಭೂತಾನ್(1.5 ಲಕ್ಷ), ಮಾಲ್ಡೀವ್ಸ್(1 ಲಕ್ಷ), ಮಾರಿಷಸ್(1 ಲಕ್ಷ), ಸೀಶೆಲ್ಸ್(50,000), ಶ್ರೀಲಂಕಾ(5 ಲಕ್ಷ), ಬಹ್ರೇನ್(1 ಲಕ್ಷ), ಒಮಾನ್(1 ಲಕ್ಷ), ಅಫ್ಘಾನಿಸ್ತಾನ(5 ಲಕ್ಷ), ಬಾರ್ಬಡೋಸ್(1 ಲಕ್ಷ) ಮತ್ತು ಡೊಮಿನಿಕಾ(70,000)ಗೆ ಡೋಸ್ ಗಳನ್ನು ಉಡುಗೊರೆಯಾಗಿ ಸರಬರಾಜು ಮಾಡಲಾಯಿತು.

English summary
As the IT system prepares to transition from Co-Win 1.0 to Co-Win 2.0, there will be no COVID-19 vaccination sessions this Saturday and Sunday (February 27 and February 28), the Union Health Ministry said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X