ಅವಿಶ್ವಾಸ ನಿರ್ಣಯ : ಲೋಕಸಭೆಯಲ್ಲಿ ಸಂಭವಿಸಲಿದೆಯಾ 'ಭೂಕಂಪ'?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಒಂದೂವರೆ ವರ್ಷಗಳ ಹಿಂದೆ ಡಿಸೆಂಬರ್ 9ರಂದು ಭಾರತೀಯ ಜನತಾ ಪಕ್ಷಕ್ಕೆ ಮತ್ತು ಪ್ರತ್ಯೇಕವಾಗಿ ನರೇಂದ್ರ ಮೋದಿಯವರಿಗೆ ಒಂದು ಸವಾಲು ಎಸೆದಿದ್ದರು. ಅದೇನೆಂದರೆ...
"ಅಪನಗದೀಕರಣದ ಮೇಲೆ ಚರ್ಚೆ ಮಾಡದೆ ಕೇಂದ್ರ ಸರಕಾರ ಪಲಾಯನ ಮಾಡುತ್ತಿದೆ. ಅವರು ನನಗೆ ಈ ವಿಷಯದ ಮೇಲೆ ಮಾತನಾಡಲು ಅವಕಾಶ ಮಾಡಿಕೊಟ್ಟರೆ ಭೂಕಂಪ ಹೇಗಿರುತ್ತದೆಂದು ತೋರಿಸುತ್ತೇನೆ!" ಎಂದು ಸವಾಲು ಎಸೆದಿದ್ದರು.
ಅವಿಶ್ವಾಸ ನಿರ್ಣಯ LIVE: ಯುಪಿಎ vs ಎನ್ಡಿಎ ಬಲಾಬಲದ ಪರೀಕ್ಷೆ
ನಂತರ ಏಪ್ರಿಲ್ ನಲ್ಲಿ ಅಮೇಥಿಯಲ್ಲಿ ಮಾತನಾಡುತ್ತ, "ಪಾರ್ಲಿಮೆಂಟಿನಲ್ಲಿ ನನ್ನ ಎದುರು ನಿಲ್ಲಲು ಮೋದಿ ಹೆದರುತ್ತಾರೆ. ನನ್ನಿಂದ 15 ನಿಮಿಷಗಳ ಭಾಷಣ ಮಾಡಿಸಿ. ನಾನು ರಾಫೇಲ್ ಬಗ್ಗೆ ಮಾತನಾಡುತ್ತೇನೆ, ನೀರವ್ ಮೋದಿ ಬಗ್ಗೆ ಮಾತನಾಡುತ್ತೇನೆ. ಮೋದಿಯವರಿಗೆ ನನ್ನ ಮುಂದೆ ನಿಲ್ಲಲೇ ಆಗುವುದಿಲ್ಲ" ಎಂದು ಗುಡುಗಿದ್ದರು.
ಮಾತಾಡಲು ಬಿಡಿ, ಭೂಕಂಪ ಏನಂತ ತೋರಿಸ್ತೀನಿ : ರಾಹುಲ್
ತದನಂತರ, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯವರೂ ರಾಹುಲ್ ಗಾಂಧಿಯವರಿಗೆ ಒಂದು ಚಾಲೆಂಜ್ ಮಾಡಿದ್ದರು. ರಾಹುಲ್ ಗಾಂಧಿಯವರು ಕೇವಲ ಹದಿನೈದು ನಿಮಿಷ, ಯಾವುದೇ ಚೀಟಿಯ ಸಹಾಯವಿಲ್ಲದೆ ಯಾವುದೇ ವಿಷಯದ ಬಗ್ಗೆ ಹದಿನೈದು ನಿಮಿಷ ಮಾತಾಡಲಿ ಎಂದು ಸವಾಲು ಹಾಕಿದ್ದರು.

ಹಳೆಯ ಸವಾಲುಗಳಿಗೆ ಜವಾಬು
ಈಗ ಮತ್ತೆ ಸವಾಲು ಹಾಕುವ, ಎಲ್ಲ ಹಳೆಯ ಸವಾಲುಗಳಿಗೆ ಜವಾಬು ನೀಡುವ ಸಮಯ ಬಂದಿದೆ. ಲೋಕಸಭೆ ಚುನಾವಣೆ ಇನ್ನು ಕೆಲವೇ ತಿಂಗಳು ಬಾಕಿಯಿರುವಾಗ ಕೇಂದ್ರ ಸರಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಚರ್ಚೆ ಶುಕ್ರವಾರ ಲೋಕಸಭೆಯಲ್ಲಿ ನಡೆಯಲಿದ್ದು, ರಾಹುಲ್ ಗಾಂಧಿಯವರಿಗೆ ತೆಲುಗು ದೇಶಂ ಪಕ್ಷದ ಕೇಸಿನೇನಿ ಶ್ರೀನಿವಾಸ್ ಅವರ ನಂತರ ಮಾತನಾಡಲು ಅವಕಾಶ ಸಿಗಲಿದ್ದು, ಅವರಿಗೆ 38 ನಿಮಿಷಗಳನ್ನು ದಯಪಾಲಿಸಲಾಗಿದೆ. ತೆಲುಗು ದೇಶಂನ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿದ್ದಕ್ಕೆ ಕಾಂಗ್ರೆಸ್ ತಗಾದೆಯನ್ನೂ ತೆಗೆದಿತ್ತು. ಹೀಗಾಗಿ ಮೊದಲಿ ತೆಲುಗು ದೇಶಂ ಪಕ್ಷಕ್ಕೆ ಭಾಷಣ ಮಾಡಲು ಮೊದಲ ಆದ್ಯತೆ. ನಂತರ ರಾಹುಲ್ ಗಾಂಧಿಯವರಿಗೆ.
ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ: ಯಾರು, ಏನಂದರು?

ರಾಹುಲ್ ಮಾತು ಕೇಳಲು ದೇಶವೇ ಕಾದಿದೆ
ರಾಹುಲ್ ಗಾಂಧಿಯವರು ಯಾವ್ಯಾವ ವಿಷಯಗಳ ಬಗ್ಗೆ ಮಾತನಾಡಿ ಕೇಂದ್ರ ಸರಕಾರದ ಜನ್ಮ ಜಾಲಾಡಲಿದ್ದಾರೆ, ಯಾವ್ಯಾವ ವಿಷಯದಲ್ಲಿ ಕೇಂದ್ರ ಸರಕಾರವನ್ನು ಮುಜುಗರಕ್ಕೆ ಈಡುಮಾಡಲಿದ್ದಾರೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ. ಅಲ್ಲದೆ, ನಾನು ಮಾತಾಡಿದರೆ ಭೂಕಂಪವಾಗತ್ತೆ ಎಂದು ಹೇಳಿದ್ದರಿಂದ ಎಲ್ಲರೂ ಅವರ ಮಾತಿಗಾಗಿ ಕಾದು ಕುಳಿತಿದಿದ್ದಾರೆ. 11.30ರ ಸುಮಾರಿಗೆ ರಾಹುಲ್ ಅವರಿಗೆ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪರ ಪ್ರಥಮ ಅವಕಾಶ ಸಿಗಲಿದ್ದು, ಮಲ್ಲಿಕಾರ್ಜುನ ಖರ್ಗೆ ಕೂಡ ಮೋದಿ ಸರಕಾರದ ಮೇಲೆ ಮುಗಿಬೀಳಲಿದ್ದಾರೆ. ರಾಹುಲ್ ಅವರಿಗೂ ಮಾತನಾಡಲು ಬೇಕಾದಷ್ಟು

ಮಹಿಳಾ ಮೀಸಲಾತಿ Vs ತ್ರಿವಳಿ ತಲಾಖ್
ಪ್ರಮುಖವಾಗಿ, ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ದುಂಬಾಲು ಬಿದ್ದಿದ್ದರೆ, ನೀವೂ ತ್ರಿವಳಿ ತಲಾಖ್ ನಿಷೇಧಿಸುವ ಮಸೂದೆಗೆ ಬೆಂಬಲ ವ್ಯಕ್ತಪಡಿಸಿ ಎಂದು ಬಿಜೆಪಿ ಚಾಲೆಂಜ್ ನೀಡಿದೆ. ಈ ಸವಾಲಿನಿಂದಾಗಿ ಕಾಂಗ್ರೆಸ್ ಅಡಕತ್ತರಿಗೆ ಸಿಲುಕಿದಂತಾಗಿದೆ. ದೇಶದೆಲ್ಲೆಡೆ ಗೋರಕ್ಷಕರಿಂದ ನಡೆಯುತ್ತಿರುವ ಹತ್ಯೆ(lynching)ಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಭವವಾಗಿರುವ ಅತಂತ್ರ ಸ್ಥಿತಿ, ಕಾಳ ಧನ ತರಲು ಬಿಜೆಪಿ ವಿಫಲವಾಗಿರುವ ಬಗ್ಗೆ ರಾಹುಲ್ ಧೂಳೆಬ್ಬಿಸುವ ಸಾಧ್ಯತೆಯಿದೆ.

ಭೂಕಂಪದ ಮಜಾ ತೆಗೆದುಕೊಳ್ಳಲು ಸಿದ್ಧರಾಗಿ
ಆದರೆ, ರಾಹುಲ್ ಅವರು ಹಿಂದೆ ಹೇಳಿದ್ದ 'ಭೂಕಂಪ'ದ ಮಾತನ್ನೇ ಮತ್ತೆ ಎತ್ತಿಕೊಂಡು ಭಾರತೀಯ ಜನತಾ ಪಕ್ಷದ ನಾಯಕರು ತಮಾಷೆ ಮಾಡುತ್ತಿದ್ದಾರೆ. ಬಿಜೆಪಿಯ ವಿವಾದಾತ್ಮಕ ಸಂಸದ ಗಿರಿರಾಜ್ ಸಿಂಗ್ ಅವರು, ಭೂಕಂಪದ ಮಜಾ ತೆಗೆದುಕೊಳ್ಳಲು ಎಲ್ಲರೂ ಸಜ್ಜಾಗಿರಿ ಎಂದು ವ್ಯಂಗ್ಯವಾಡಿದ್ದರೆ, ಸಂಸದ ಪ್ರಹ್ಲಾದ್ ಜೋಶಿಯವರು, ಆತ್ಮೀಯ ಸ್ನೇಹಿತರೆ ಇಂದು ಲೋಕಸಭೆಯಲ್ಲಿ ಭೂಕಂಪವಾಗುವ ಸಂಭವನೀಯತೆ ಇದೆ ಎಂದು ಲೇವಡಿ ಮಾಡಿದ್ದಾರೆ.

ಅಮಿತ್ ಮಾಳವೀಯ ಭೂಕಂಪದ ರಸಪ್ರಶ್ನೆ
ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ಇನ್-ಚಾರ್ಜ್ ಆಗಿರುವ ಅಮಿತ್ ಮಾಳವೀಯ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಒಂದು ವೇಳೆ 15 ನಿಮಿಷದಲ್ಲಿ ಒಂದು ಬಾರಿ ಭೂಕಂಪವಾಗುವಂತಿದ್ದರೆ, 38 ನಿಮಿಷಗಳಲ್ಲಿ ಎಷ್ಟು ಬಾರಿ ಭೂಕಂಪ ಆಗಲಿದೆ ಎಂದು ರಸಪ್ರಶ್ನೆ ಕೇಳಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ಕಾಲೆಳೆದಿದ್ದಾರೆ. ಎರಡು ಬಾರಿ, ಎರಡೂವರೆ ಬಾರಿ, ಮಾತಿನ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ರಾಹುಲ್ ಗಾಂಧಿ ಅವರಿಗೇ ಗೊತ್ತು ಎಂದು ಆಯ್ಕೆಗಳನ್ನು ನೀಡಿದ್ದಾರೆ.