• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಲ್ಮಾನ್ ಖಾನ್ ವಿರುದ್ಧದ ಎಫ್ಐಆರ್ ರದ್ದುಪಡಿಸಿದ ಸುಪ್ರೀಂಕೋರ್ಟ್

|

ನವದೆಹಲಿ, ಸೆಪ್ಟೆಂಬರ್ 27: ಸಲ್ಮಾನ್ ಖಾನ್ ಅವರ ನಿರ್ಮಾಣದ 'ಲವ್ ರಾತ್ರಿ' ಚಿತ್ರಕ್ಕೆ ಕಟಂಕ ನಿವಾರಣೆಯಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಶೀರ್ಷಿಕೆ ಬಳಸಲಾಗಿದೆ ಎಂದು ದೂರು ಸಲ್ಲಿಸಲಾಗಿತ್ತು. ಆದರೆ, ಸಲ್ಮಾನ್ ಖಾನ್ ಹಾಗೂ ಚಿತ್ರ ತಂಡದ ವಿರುದ್ಧ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ಇಂದು ಆದೇಶಿಸಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಲವ್ ರಾತ್ರಿ ಚಿತ್ರ ನಿರ್ಮಿಸಿರುವ ಸಲ್ಮಾನ್ ಖಾನ್ ಅವರ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ದಾಖಲಿಸುವಂತೆ ಬಿಹಾರದ ಮುಜಾಫರ್ ನಗರ ಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ನಟ ಸಲ್ಮಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ಪಾತಕಿ ಬಂಧನ

ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಗುರುವಾರದಂದು ಸಲ್ಮಾನ್ ಖಾನ್ ಗೆ ಶುಭ ಸುದ್ದಿ ನೀಡಿದೆ. ಸಲ್ಮಾನ್ ಖಾನ್ ವೆಂಚರ್ಸ್ ಪ್ರೈ ವಿರುದ್ಧ ದೇಶದ ಯಾವುದೇ ಭಾಗದಲ್ಲಿ ಯಾವುದೇ ದಂಡನಾ ಕ್ರಮವನ್ನು ತೆಗೆದುಕೊಳ್ಳವಂತಿಲ್ಲ ಎಂದು ಕೋರ್ಟ್ ನಿರ್ದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಮೂರ್ತಿಗಳ ಪೀಠ, ಚಿತ್ರ ಬಿಡುಗಡೆಗೆ ಒಪ್ಪಿಗೆ ನೀಡಿದ್ದು, ಚಿತ್ರ ಅಕ್ಟೋಬರ್ 5ರಂದು ತೆರೆಗೆ ಬರಲಿದೆ.

ಚಿತ್ರದ ಹೆಸರು ಹಾಗೂ ಕಥೆಗೆ ಸಂಬಂಧಿಸಿದಂತೆ ದೇಶದ ಯಾವ ಸ್ಥಳದಲ್ಲಿಯೂ ದಂಡನಾ ಕ್ರಮಕೈಗೊಳ್ಳಬೇಡಿ ಎಂದು ಆದೇಶಿಸಿರುವುದರಿದ ಸಲ್ಮಾನ್ ಖಾನ್ ಹಾಗೂ ಚಿತ್ರಕ್ಕೆ ಸಂಬಂಧಿಸಿದ ಕೆಲವರ ವಿರುದ್ಧ ದಾಖಲಾಗಿದ್ದ ಎಲ್ಲ ಎಫ್ಐಆರ್ ರದ್ದಾಗಿದೆ.

ವಿದೇಶಕ್ಕೆ ತೆರಳಲು ಸಲ್ಮಾನ್ ಗೆ ಕೋರ್ಟ್ ಅನುಮತಿ

ನವರಾತ್ರಿಗೆ ಪ್ರಾಸವಾಗಿರುವಂತೆ ಲವ್ ರಾತ್ರಿಯನ್ನು ಶೀರ್ಷಿಕೆಯಾಗಿ ಬಳಸಲಾಗಿದೆ. ಇದು ದೇವಿ ದುರ್ಗಾಮಾತೆಗೆ ಮಾಡಿರುವ ಅಪಮಾನ ಎಂದು ದೂರಿನಲ್ಲಿ ಹೇಳಲಾಗಿದ್ದು, ಸಲ್ಮಾನ್ ಖಾನ್ ಸೇರಿದಂತೆ 7 ಮಂದಿ ವಿರುದ್ಧ ದೂರು ನೀಡಲಾಗಿತ್ತು. ಆಯುಷ್ ಶರ್ಮ ಹಾಗೂ ವಾರಿನಾ ಹುಸೇನ್ ಅವರ ಚೊಚ್ಚಲ ಚಿತ್ರ ಇದಾಗಿದೆ.

English summary
The Supreme Court on Thursday upheld the creative freedom of Bollywood actor Salman Khan by protecting his company-produced movie Loveyatri from criminal action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X