ಭಯ ಹುಟ್ಟಿಸಿರುವ C.1.2 ಕೊರೊನಾ ರೂಪಾಂತರಿ ಭಾರತದಲ್ಲಿ ಪತ್ತೆಯಾಗಿಲ್ಲ

ನವದೆಹಲಿ, ಸೆಪ್ಟೆಂಬರ್ 01: ಭಯ ಹುಟ್ಟಿಸಿರುವ C.1.2 ಕೊರೊನಾ ರೂಪಾಂತರಿ ಭಾರತದಲ್ಲಿ ಇನ್ನೂ ಪತ್ತೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ವರ್ಷದ ಮೇ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಈ ತಳಿಯು ಅತ್ಯಂತ ಕಳವಳಕಾರಿಯಾಗಿದೆ ಎಂದು ದಕ್ಷಿಣ ಆಫ್ರಿಕಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕೇಬಲ್ ಡಿಸೀಸಸ್ ಮತ್ತು ಕ್ವಾಜುಲು-ನಟಾಲ್ ರಿಸರ್ಚ್ ಇನ್ನೋವೇಶನ್ ಆಂಡ್ ಸೀಕ್ವೆನ್ಸಿಂಗ್ ಪ್ಲಾಟ್‌ಫಾರ್ಮ್ ವಿಜ್ಞಾನಿಗಳು ಹೇಳಿದ್ದಾರೆ.

ಕೋವಿಡ್‌ 19ನ ಹೊಸ ರೂಪಾಂತರಿ ಸಿ 1.2 ಹೆಚ್ಚು ಹರಡಬಲ್ಲ ಮತ್ತು ಲಸಿಕೆಗಳು ಒದಗಿಸುವ ರಕ್ಷಣೆಯನ್ನು ತಪ್ಪಿಸುತ್ತದೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಈ ಮಧ್ಯೆ ಸಿ.1.2 ರೂಪಾಂತರ ಸೋಂಕಿತ ಪ್ರಕರಣ ಪತ್ತೆಯಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ನಿಟ್ಟಿನಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ ಸಂಸ್ಥೆ ಎಚ್ಚರವಹಿಸುತ್ತಿದೆ.

No Case Of New COVID-19 Variant C.1.2 Reported In India So Far: Govt Sources

ಈ ಕೋವಿಡ್ ರೂಪಾಂತರವು ಚೀನಾ, ಕಾಂಗೋ, ಮಾರಿಷಸ್, ಯುಕೆ, ನ್ಯೂಜಿಲೆಂಡ್, ಪೂರ್ಚುಗಲ್ ಮತ್ತು ಸ್ವಿಡ್ಜರ್‌ಲೆಂಡ್‌ನಲ್ಲಿ ಕಂಡುಬಂದಿದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ಹೊಸ ಕೊರೊನಾ ರೂಪಾಂತರಿ 'Mu' ಮೇಲೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ನಿಗಾ ಇರಿಸಿದೆ. ವೈಜ್ಞಾನಿಕವಾಗಿ ಬಿ.1.621 ಎಂದು ಕರೆಯಲ್ಪಡುವ 'Mu' ತಳಿ ಮುಂಬರುವ ದಿನಗಳಲ್ಲಿ ಜಗತ್ತಿಗೆ ಆತಂಕವನ್ನು ತಂದೊಡ್ಡಬಲ್ಲ ಸಾಧ್ಯತೆ ಇದೆ ಎಂದು ತಜ್ನರು ಅಭಿಪ್ರಾಯ ಪಟ್ಟಿದ್ದಾರೆ.

ಸದ್ಯ ವಿಶ್ವ ಆರೋಗ್ಯ ಸಂಸ್ಥೆ ನಿಗಾ 5 ಕೊರೊನಾ ರೂಪಾಂತರಿ ತಳಿಗಳ ಮೇಲೆ ನಿಗಾ ಇರಿಸಿದೆ. ಅಲ್ಫಾ ವೈರಾಣು 193 ದೇಶಗಳಲ್ಲಿ ಹಾವಳಿ ಎಬ್ಬಿಸಿದೆ. ಇನ್ನು ಭಾರತದಲ್ಲಿ ಮೊದಲು ಪತ್ತೆಯಾಗಿದ್ದ ಡೆಲ್ಟಾ ತಳಿ ಜಗತ್ತಿನ 170 ದೇಶಗಳಲ್ಲಿ ಕಂಡು ಬಂದಿದೆ. ಇದೀಗ ಈ ಪಟ್ಟಿಗೆ ವಿಶ್ವ ಆರೋಗ್ಯ ಸಂಸ್ಥೆ 'Mu' ಅನ್ನೂ ಸೇರಿಸಿದೆ.

'Mu' ವೈರಾಣು ರೋಗ ನಿರೋಧಕ ಶಕ್ತಿಯ ಕಣ್ತಪ್ಪಿಸಿ ಕಾಯಿಲೆ ಹರಡಬಲ್ಲ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿರುವ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಅದರ ಮೇಲೆ ನಿಗಾ ಇರಿಸಿದೆ. 'Mu' ತಳಿಯ ವೈರಾಣು ಜನವರಿ ತಿಂಗಳಲ್ಲಿ ದಕ್ಷಿಣ ಅಮೆರಿಕ ರಾಷ್ಟ್ರವಾದ ಕೊಲಂಬಿಯಾದಲ್ಲಿ ಮೊದಲು ಪತ್ತೆಯಾಗಿತ್ತು.

ವೈರಸ್ ಗಳು ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಪರಿಸರಕ್ಕೆ ತಕ್ಕಂತೆ ಬದಲಾಗುತ್ತವೆ. ಅದೇ ರೀತಿ ಕೊರೊನಾ ವೈರಾಣು ಕೂಡಾ ರೂಪಾಂತರಗೊಂಡಿದೆ. ಆ ಮೂಲಕ ಕೊರೊನಾ ಸೋಂಕನ್ನು ಹೆಚ್ಚಿನ ಸಂಖ್ಯೆಯ ಜನರಿಗೆ ಹರಡುವ ಮೂಲಕ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ. ಹೀಗಾಗಿಯೇ ರೂಪಾಂತರಗೊಂಡ ಕೊರೊನಾ ವೈರಾಣುವಿನ ಹಲವು ತಳಿಗಳು ಇಂದು ಜಗತ್ತಿನಾದ್ಯಂತ ಹರಡಿಕೊಂಡಿದೆ.

ರೂಪಾಂತರಿ ತಳಿಗಳು ಒಂದಕ್ಕಿಂತ ಮತ್ತೊಂದು ಎಷ್ಟು ಅಪಾಯಕಾರಿ ಎನ್ನುವುದು ಅವುಗಳ ವಂಶವಾಹಿಯ ಮೇಲೆ ಅವಲಂಬಿತವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ತಿಳಿದುಬಂದಿರುವ ಸಂಗತಿಯೆಂದರೆ, ಪ್ರತಿಯೊಂದು ರೂಪಾಂತರಿ ತಳಿಯೂ ವಿಭಿನ್ನವಾಗಿದ್ದು ವಿಭಿನ್ನ ಬಗೆಯ ಗುಣವಿಶೇಷಗಳನ್ನು ಹೊಂದಿದೆ. ಉದಾಹರಣೆಗೆ ಡೆಲ್ಟಾ ಕೊರೊನಾ ವೈರಾಣು ಮಿಕ್ಕೆಲ್ಲಾ ತಳಿಗಳಿಗಿಂತ ವೇಗವಾಗಿ ಹರಡಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಹಲವು ತಿಂಗಳುಗಳಿಂದ ಅಮೆರಿಕದಲ್ಲಿ ಡೆಲ್ಟಾ ವೈರಾಣು ಅತ್ಯಧಿಕ ಸಂಖ್ಯೆಯ ಮಂದಿಗೆ ಹರಡಿರುವುದು ಕಂಡುಬಂದಿದೆ. ಮೇ ತಿಂಗಳಿಗೂ ಹಿಂದೆ ಅಮೆರಿಕದಲ್ಲಿ ಆಲ್ಫಾ ವೈರಾಣು ಪ್ರಾಬಲ್ಯವನ್ನು ಮೆರೆದಿತ್ತು. ಅದರ ಸ್ಥಾನವನ್ನು ಡೆಲ್ಟಾ ವೈರಾಣು ತುಂಬಿದೆ.

ಈ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಆದರೆ, ಕುರಿತಾಗಿ ಪ್ರಯೋಗಗಳು ನಡೆದಿವೆ. ಈಗಾಗಲೇ ಹಲವು ಪ್ರಯೋಗಗಳು ಈ ಕುರಿತಾಗಿ ಬೆಳಕು ಚೆಲ್ಲಿದ್ದರೂ ಅವುಗಳ ಸತ್ಯಾಸತ್ಯತೆಯನ್ನು ಸರ್ಕಾರಗಳು ಹಾಗೂ ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿಲ್ಲ. ಆದರೆ ಲಸಿಕೆ ಹಾಕಿಸಿಕೊಂಡವರ ದೇಹ ಕೊರೊನಾ ತಳಿಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+