ವಿಡಿಯೋ: ಗಂಗಾ ಶುದ್ಧೀಕರಣ ಯೋಜನೆಯ ಆಶಯ ಗೀತೆ

ನವದೆಹಲಿ, ಮೇ.14: ಗಂಗಾನದಿಯ ಶುದ್ಧೀಕರಣ, ಸಂರಕ್ಷಣೆಗಾಗಿ ಸಹಸ್ರಾರು ಕೋಟಿ ರು ಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ 'ನಮಾಮಿ ಗಂಗೆ' ಯೋಜನೆಗೆ 20 ಸಾವಿರ ಕೋಟಿ ರು ವ್ಯಯಿಸಲಾಗುತ್ತಿದೆ.

ಈ ಯೋಜನೆಯನ್ನು ಜನರ ಬಳಿಗೆ ಸಾಮಾಜಿಕ ಜಾಲ ತಾಣಗಳ ಮೂಲಕ ಕೊಂಡೊಯ್ಯುವ ಪ್ರಯತ್ನವಾಗಿ ಒಂದು ಟ್ವಿಟ್ಟರ್ ಅಕೌಂಟ್ ತೆರೆಯಲಾಗಿದೆ.

ಯೋಜನೆಯ ರೂಪು-ರೇಷೆ, ಗತಿ-ವಿಧಾನಗಳನ್ನು ಕಾಲ ಕಾಲಕ್ಕೆ ಅಪ್ಡೇಟ್ ಮಾಡುವ ಈ ಖಾತೆ ಗಂಗಾ ಶುದ್ಧೀಕರಣದ ಅಂತರ್ಜಾಲದ ಗಂಗೆಯಂತೆ ಗೋಚರಿಸುತ್ತಿದೆ. ಈ ಖಾತೆಯಲ್ಲಿ ಪ್ರಕಟವಾದ ಗಂಗಾ ಶುದ್ಧೀಕರಣದ ಆಶಯವನ್ನು ಸಾರುವ ಒಂದು ಸುಶ್ರಾವ್ಯ ಸ್ವರಸಂಯೋಜನೆಯನ್ನು ಒನ್ ಇಂಡಿಯಾ ಕನ್ನಡ ನಿಮಗೆ ತಲುಪಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ 'ನಮಾಮಿ ಗಂಗೆ' ಯೋಜನೆಗೆ ನಿಧಿಯನ್ನು ಮಂಜೂರು ಮಾಡಿದ್ದಾರೆ. ಕಳೆದ 30 ವರ್ಷಗಳಲ್ಲಿ ಗಂಗಾ ಶುದ್ಧೀಕರಣಕ್ಕೆ ಕೇಂದ್ರ ಸರಕಾರ ವೆಚ್ಚ ಮಾಡಿರುವ ಮೊತ್ತ 4 ಪಾಲು ಹೆಚ್ಚಳವಾಗಿದೆ. 1985ರ ಬಳಿಕ ಈ ಕಾರ್ಯಕ್ಕಾಗಿ ಸರಕಾರ ಒಟ್ಟಾರೆ ಅಂದಾಜು ರೂ.4 ಸಾವಿರ ಕೋಟಿ ವೆಚ್ಚ ಮಾಡಲಾಗಿತ್ತು.

Namami Gange Music Video trailer is out

ಥೀಮ್ ಸಾಂಗ್: ತ್ರಿಚೂರು ಸೋದರರ ಸಂಯೋಜನೆಯಲ್ಲಿ ಮೂಡಿ ಬಂದಿರುವ ಆಶಯ ಗೀತೆಗೆ ಆದಿ ಶಂಕರಾಚಾರ್ಯರ ಗಂಗಾಷ್ಟಕದ ಶ್ಲೋಕಗಳನ್ನು ಬಳಸಿಕೊಳ್ಳಲಾಗಿದೆ. ಗಂಗಾ ನದಿಯ ತಟದ ಚಟುವಟಿಕೆಗಳು, ಭಕ್ತಾದಿಗಳು, ಗಂಗೆಯ ಮಹತ್ವವನ್ನು ಈ ಟ್ರೈಲರ್ ಹೊಂದಿದೆ.

ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಹಾಗೂ ಪಶ್ಚಿಮಬಂಗಾಲಗಳಲ್ಲಿ ಗಂಗಾನದಿಯ ದಂಡೆಯಲ್ಲಿರುವ ನಗರಗಳು ಹಾಗೂ ಪಟ್ಟಣಗಳಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕಗಳು ಸಹಿತ ಅನೇಕ ಯೋಜನೆಗಳನ್ನು ಪಿಪಿಪಿ ಮಾದರಿಯಲ್ಲಿ ಸರ್ಕಾರ ಪೂರೈಸಲಿದೆ.

ಯೋಜನೆ ಅನುಷ್ಠಾನ: ಗಂಗಾಶುದ್ಧೀಕರಣದ ರಾಷ್ಟ್ರೀಯ ಮಿಶನ್(ಎನ್‌ಎಂಸಿಜಿ) ಹಾಗೂ ರಾಜ್ಯ ಕಾರ್ಯಕ್ರಮ ಪ್ರಬಂಧನ ಗುಂಪುಗಳಂತಹ(ಎಸ್‌ಪಿಎಂಜಿ) ಅದರ ರಾಜ್ಯ ಸಹ ಕರ್ಮಿಗಳ ಮೂಲಕ ಅನುಷ್ಠಾನಗೊಳ್ಳಲಿದೆ. ಅನೇಕ ಯೋಜನೆಗಳ ಜಾರಿಗಾಗಿ ಎನ್‌ಎಂಸಿಜಿ ಅಗತ್ಯವಿರುವಲ್ಲಿ ಕ್ಷೇತ್ರ ಕಚೇರಿಗಳನ್ನೂ ತೆರೆಯಲಿದೆ.

ಗಂಗೆಯ ಮಹತ್ವ ಸಾರುವ ಆಶಯ ಗೀತೆ
:

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+