ನಿತ್ಯಾನಂದ ಸ್ವಾಮೀಜಿ- ರಂಜಿತಾ ಈಗ ಎಲ್ಲಿದ್ದಾರೆ?
ತಿರುಪತಿ, ಜೂನ್ 19: ವಿವಾದಾತ್ಮಕ ಸ್ವಾಮೀಜಿ, ಬಿಡದಿಯ ನಿತ್ಯಾನಂದ ಸ್ವಾಮೀಜಿ ಈಗ ಎಲ್ಲಿದ್ದಾರೆ, ಅವರ ಕಟ್ಟಾ ಅನುಯಾಯಿ, ಮಾಜಿ ಚಿತ್ರ ನಟಿ ರಂಜಿತಾ ಅವರೆಲ್ಲಿದ್ದಾರೆ?
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ನಿತ್ಯಾನಂದ ಸ್ವಾಮೀಜಿ ಮತ್ತು ಮಾ ಆನಂದಮಯಿ ರಂಜಿತಾ ಅವರು ತಿರುಪತಿಯ ವೆಂಕಟರಮಣ ಸ್ವಾಮಿ ಸನ್ನಿಧಿಗೆ ತೆರಳಿ, ಪ್ರಾರ್ಥನೆ ಸಲ್ಲಿಸಿಬಂದಿದ್ದಾರೆ. ನಿನ್ನೆ ಬುಧವಾರ ಇಬ್ಬರೂ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಅವರ ಜತೆಯಲ್ಲಿ ಅವರ ಶಿಷ್ಯ ವೃಂದವೂ ಇತ್ತು. (ನಿತ್ಯಾನಂದ ವಿಡಿಯೋ: ನಟಿ ರಂಜಿತಾ ಕ್ಷಮಾಪಣೆಗೆ ಆದೇಶ)
ಸ್ವಯಂಘೋಷಿತ ದೇವ ಮಾನವ, ನಿತ್ಯಾನಂದ ಸ್ವಾಮೀಜಿ ಮತ್ತು ರಂಜಿತಾ ಅವರುಗಳು ವಿಐಪಿ ದರ್ಶನ ಪಡೆಯಲು ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಯವರು ಬುಧವಾರ ಬೆಳಗ್ಗೆ ವಿಶೇಷ ವ್ಯವಸ್ಥೆ ಮಾಡಿದ್ದರು. ವಿಶೇಷ ಪ್ರಾರ್ಥನೆ ಸಲ್ಲಿಸಲು ಸಹ ಆಡಳಿತ ಮಂಡಳಿ ಅವರಿಗೆ ಅವಕಾಶ ನೀಡಿದರು. ಇಬ್ಬರೂ ಕಾವಿ ಬಟ್ಟೆ ಧರಿಸಿ, ದೊಡ್ಡ ಹೂವಿನ ಹಾರ ಹಾಕಿಕೊಂಡು, ತಿಮ್ಮಪ್ಪನಿಗೆ ಕೈಮುಗಿದರು. (ಸನ್ಯಾಸ ದೀಕ್ಷೆಗೆ ಶರಣಾದ ನಟಿ ರಂಜಿತಾ)













Click it and Unblock the Notifications