ನಾಳೆ ಸಂಜೆ ಮತ್ತೆ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣ ವಚನ

Subscribe to Oneindia Kannada

ಪಾಟ್ನಾ, ಜುಲೈ 26: ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ನಾಳೆ ಅಂದರೆ ಗುರುವಾರ ಸಂಜೆ 5 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಿಜೆಪಿ ನಿತೀಶ್ ಕುಮಾರ್ ಅವರನ್ನು ಬೆಂಬಲಿಸಿದ್ದು, ಕೇಸರಿ ಪಕ್ಷದ ಬೆಂಬಲದೊಂದಿಗೆ ಅವರು ಅಧಿಕಾರಕ್ಕೇರಲಿದ್ದಾರೆ.

ಇನ್ನು ಈ ಹಿಂದೆ ನಿತೀಶ್ ಕುಮಾರ್ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿ ಬೆಂಬಲ ನೀಡಲು ಮುಂದೆ ಬಂದಿತ್ತು. ಈ ಕುರಿತು ಬಿಹಾರ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಇದಾದ ನಂತರ ನಿತೀಶ್ ಕುಮಾರ್ ನಿವಾಸಕ್ಕೆ ತಮ್ಮ ಶಾಸಕರು ಹಾಗೂ ನಾಯಕರ ಜತೆ ಸುಶೀಲ್ ಮೋದಿ ದಾವಿಸಿದ್ದರು.

Nitish Kumar to take oath as CM of Bihar at 5 pm tomorrow

ನಿತೀಶ್ ಕುಮಾರ್ ನಿವಾಸದಲ್ಲಿ ಬಿಜೆಪಿ ಮತ್ತು ಜೆಡಿಯು ಶಾಸಕ ಸಭೆ ನಡೆಯುತ್ತಿದೆ. ಸಭೆಯಲ್ಲಿ ಸುಶೀಲ್ ಕುಮಾರ್ ಮೋದಿ, ನಿತ್ಯಾನಂದ ರೈ, ನಿತೀಶ್ ಕುಮಾರ್ ಹಾಗೂ ಹಿರಿಯ ಮುಖಂಡರು, ಶಾಸಕರುಗಳು ಭಾಗವಹಿಸಿದ್ದಾರೆ. ಇನ್ನೊಂದು ಕಡೆ ನಿತೀಶ್ ಕುಮಾರ್ ನಿವಾಸದ ಹೊರಗೆ ಅವರ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದಾರೆ.

ನಾಳೆ ಬಿಜೆಪಿ ನಾಯಕರು ರಾಜ್ಯಕ್ಕೆ

ಗುರುವಾರ ಸಂಜೆ ಬಿಜೆಪಿ ಬೆಂಬಲದೊಂದಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು ಅದಕ್ಕೂ ಮೊದಲು ಬಿಜೆಪಿಯ ಕೇಂದ್ರ ನಾಯಕರಾದ ಜೆಪಿ ನಡ್ಡಾ ಹಾಗೂ ಅನಿಲ್ ಜೈನ್ ಬಿಹಾರಕ್ಕೆ ಭೇಟಿ ನೀಡಿ ಸರಕಾರ ರಚನೆ ಬಗ್ಗೆ ಚರ್ಚಿಸಲಿದ್ದಾರೆ.

ಆಸ್ಪತ್ರೆ ಸೇರಿ ಬಿಡುಗಡೆಯಾದ ರಾಜ್ಯಪಾಲರು

ಒಂದೆಡೆ ಮಿಂಚಿನ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದರೆ ಅತ್ತ ಬಿಹಾರ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಕಿವಿ, ಮೂಗು, ನಾಲಗೆ ಸಮಸ್ಯೆಯ ಕಾರಣಕ್ಕೆ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಕೆಲವೇ ಕ್ಷಣಗಳಿಗೂ ಮುಂಚೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With support of BJP, JDU leader Nitish Kumar to take oath as Chief minister of Bihar at 5 pm tomorrow.
Please Wait while comments are loading...