'ನಿಸರ್ಗ' ಚಂಡಮಾರುತ; ರೈಲುಗಳ ವೇಳಾಪಟ್ಟಿ ಬದಲು
ಬೆಂಗಳೂರು, ಜೂನ್ 03 : ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ 'ನಿಸರ್ಗ' ಚಂಡಮಾರುತದ ಪರಿಣಾಮ ಹಲವು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ನಾಲ್ಕು ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.
Recommended Video
ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ಗೋವಾ ರಾಜ್ಯದಲ್ಲಿ ಚಂಡಮಾರುತದ ಪ್ರಭಾವದಿಂದ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಆದ್ದರಿಂದ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಜೂನ್ 2 ಮತ್ತು 3ರಂದು ಕೊಂಕಣ ಮಾರ್ಗದಲ್ಲಿ ಸಂಚಾರ ನಡೆಸುವ ವಿಶೇಷ ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಲಾಕ್ ಡೌನ್ ಪರಿಣಾಮ ವಿಶೇಷ ರೈಲುಗಳು ಮಾತ್ರ ಸಂಚಾರ ನಡೆಸುತ್ತಿವೆ.

ರೈಲುಗಳ ವಿವರ
* ಎರ್ನಾಕುಲಂ- ಎಚ್. ನಿಜಾಮುದ್ದೀನ್ (20617) ವಿಶೇಷ ರೈಲು ಮಡಗಾಂ ಜಂಕ್ಷನ್‌ನಿಂದ ಲೋಂಡಾ-ಮೀರಜ್-ಪುಣೆ-ಮನ್ಮಾದ್ ಮಾರ್ಗವಾಗಿ ಚಲಿಸಲಿದೆ.
* ತಿರುವನಂತಪುರ ಸೆಂಟ್ರಲ್-ಲೋಕಮಾನ್ಯ ತಿಲಕ್ ಟರ್ಮಿನಸ್ (06346) ರೈಲು ಮಡಗಾಂವ್ ಜಂಕ್ಷನ್‌ನಿಂದ ಲೋಂಡಾ-ಮೀರಜ್-ಪುಣೆ-ಕಲ್ಯಾಣ್ ಮೂಲಕ ಸಾಗಲಿದೆ.
* ನವದೆಹಲಿ-ತಿರುವನಂತಪುರ (02432) ರೈಲು ಸೂರತ್-ವಸೈ ರೋಡ್-ಕಲ್ಯಾಣ್-ಮೀರಜ್-ಲೋಂಡಾ-ಮಡಗಾಂವ್ ಜಂಕ್ಷನ್ ಮೂಲಕ ಸಂಚಾರ ನಡೆಸಲಿದೆ.
* ಲೋಕಮಾನ್ಯ ತಿಲಕ್ (ಟಿ)-ತಿರುವನಂತಪುರ ಸೆಂಟ್ರಲ್ (06345) ವಿಶೇಷ ರೈಲು ಸಂಜೆ 6 ಗಂಟೆಗೆ ಪ್ರಯಾಣ ಆರಂಭಿಸಲಿದೆ.












Click it and Unblock the Notifications