Nipah Virus: ಕೇರಳದ ವಯನಾಡ್ ಜಿಲ್ಲೆಯ ಬಾವಲಿಗಳಲ್ಲಿ ನಿಫಾ ವೈರಸ್..
ಆಧುನಿಕ ಜಗತ್ತು ವೇಗವಾಗಿ ಅಭಿವೃದ್ಧಿ ಹಿಂದೆ ಓಡುತ್ತಿದ್ದರೂ, ಇನ್ನೊಂದು ಕಡೆ ಬಿಟ್ಟೂ ಬಿಡದಂತೆ ಚಿತ್ರ ವಿಚಿತ್ರ ರೋಗಗಳು ಪ್ರಪಂಚವನ್ನೇ ಕಾಡುತ್ತಿವೆ. ಅದರಲ್ಲೂ ಕೊರೊನಾಗೆ ಲಕ್ಷಾಂತರ ಜನ ಬಲಿಯಾಗಿ ಇನ್ನೂ ಐದು ವರ್ಷ ಕಳೆದಿಲ್ಲ, ಮತ್ತೊಂದು ಭೀಕರ ರೋಗ ಮನುಷ್ಯರನ್ನ ಕಾಡಲು ಸಿದ್ಧವಾಗಿದೆ. ಭಾರತದಲ್ಲಿ ಇದೀಗ ಹೊಸ ರೋಗದ ಭಯ ಶುರು ಆಗಿದ್ದು, ಅದ್ರಲ್ಲೂ ದಕ್ಷಿಣ ಭಾರತೀಯರಿಗೆ ಸಂಕಷ್ಟ ಎದುರಾಗಿದೆ.
ಡೆಡ್ಲಿ ಕೊರೊನಾ ಬಳಿಕ ದೇಶದಲ್ಲಿ ಹೊಸ ವೈರಸ್ ಹಾವಳಿ ಭಯ ಹುಟ್ಟಿಸಿದೆ. ಕೇರಳ ರಾಜ್ಯ ನಿಫಾ ವೈರಸ್ ಹಾವಳಿಯಿಂದ ಇನ್ನೇನು ಮುಕ್ತವಾಗುತ್ತಿದೆ ಎನ್ನುವಾಗಲೇ ಭಯ ಹುಟ್ಟಿದೆ. ಆತಂಕ ಮೂಡಿಸುವ ಸುದ್ದಿ ರಿವೀಲ್ ಆಗಿದೆ. ಕೇರಳದ ವಯನಾಡ್ ಜಿಲ್ಲೆಯ ಬಾವಲಿಗಳಲ್ಲಿ ನಿಫಾ ವೈರಸ್ ಇರುವುದನ್ನ ಈಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಂದರೆ ಐಸಿಎಂಆರ್ ಪತ್ತೆಹಚ್ಚಿದೆ. ವಯನಾಡ್ ಜಿಲ್ಲೆಯ ಮಾನಂದವಾಡಿ ಹಾಗೂ ಸುಲ್ತಾನ್ ಬತ್ತೇರಿ ಪ್ರದೇಶದಿಂದ ಬಾವಲಿ ಮಾದರಿ ಸಂಗ್ರಹ ಮಾಡಿ, ಐಸಿಎಂಆರ್‌ಗೆ ನೀಡಲಾಗಿತ್ತು.

ಸಂಶೋಧನೆಯ ಉದ್ದೇಶ ಏನು?
ಅಷ್ಟಕ್ಕೂ ಈ ಸಂಶೋಧನೆಯ ಉದ್ದೇಶ, ನಿಫಾ ಸೋಂಕು ಮರುಕಳಿಸಲು ಕಾರಣವೇನು.?ಅನ್ನೋದನ್ನ ಪತ್ತೆ ಹಚ್ಚುವುದೇ ಆಗಿತ್ತಂತೆ. ಈ ಕಾರಣ, ಕೇರಳದ ವಿವಿಧೆಡೆಯಲ್ಲಿ ಬಾವಲಿ ಮಾದರಿ ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಲಾಗಿತ್ತು ಎನ್ನಲಾಗಿದೆ. ಇದರ ನಡುವೆ ನಿಫಾ ಲಕ್ಷಣ ಕಂಡು ಬರುವ ರೋಗಿಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ. ಜನರು ಇದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇರಳ ರಾಜ್ಯದ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ತಿಳಿಸಿದ್ದಾರೆ. ಕೆಲವು ವಾರಗಳ ಹಿಂದಷ್ಟೇ, ಕೇರಳದ ಕೋಯಿಕ್ಕೋಡ್‌ನಲ್ಲಿ ನಿಫಾ ವೈರಸ್‌ಗೆ ಇಬ್ಬರು ಬಲಿಯಾಗಿ ನಾಲ್ವರು ಗುಣಮುಖರಾಗಿದ್ದರು.
ನಿಫಾ ಮನುಷ್ಯರಿಗೆ ಹೇಗೆ ಹರಡುತ್ತೆ?
ಅಷ್ಟಕ್ಕೂ ನಿಫಾ ವೈರಸ್ (NV) ಅಪರೂಪದ ರೋಗವಾದ್ರೂ ದೊಡ್ಡ ಅಪಾಯ ವೈರಸ್‌ನಿಂದ ಮನುಷ್ಯರಿಗೆ ಎದುರಾಗುತ್ತದೆ. ಭಾರತದಲ್ಲಿ ಇಂಡೋ-ಬಾಂಗ್ಲಾದೇಶ ಮತ್ತು ಕೇರಳ ಕರಾವಳಿ ವಲಯದಲ್ಲಿ ಈ ವೈರಸ್ ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ ಅಂತಾರೆ ತಜ್ಞರು. ಹಾಗೇ ನಿಫಾ ವೈರಸ್ ಬಾವಲಿಗಳಿಂದ ಮನುಷ್ಯರಿಗೆ ಬರುತ್ತೆ. ಇದೀಗ ಕೇರಳ ರಾಜ್ಯ ಬೆಚ್ಚಿಬೀಳುವ ಸುದ್ದಿ ಸಿಕ್ಕಿದ್ದು ಕೇರಳದ ಬಾವಲಿಗಳಲ್ಲಿ ಭಯಾನಕ ವೈರಸ್ ಪತ್ತೆಯಾಗಿದೆ.

ನಿಫಾ ವೈರಸ್ ಲಕ್ಷಣ ಏನು?
ಸಾಮಾನ್ಯವಾಗಿ ಇತರ ವೈರಸ್‌ಗಳ ರೀತಿ ನಿಫಾ ವೈರಸ್ ಹರಡಿದರೂ ಇದರ ಫಲಿತಾಂಶ ಮಾತ್ರ ಭಯಾನಕ. ನಿಫಾ ಲಕ್ಷಣ ನೋಡುವುದಾದರೆ ಭಾರಿ ಜ್ವರ, ತಲೆನೋವು & ತಲೆತಿರುಗುವಿಕೆ, ಉಸಿರಾಟ ತೊಂದರೆ ಕಾಣಿಸುತ್ತೆ. ಹಾಗೇ ನಿಫಾ ವೈರಸ್‌ಗೆ ಯಾವುದೇ ವಯಸ್ಸಿನ ಹಂಗು ಇಲ್ಲ, ಯಾವುದೇ ವಯಸ್ಸಿನ ವ್ಯಕ್ತಿಯಲ್ಲಿಯೂ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಸಮಸ್ಯೆ ಪಕ್ಕಾ. ಸೋಂಕಿತರ ಸಂಪರ್ಕಕ್ಕೆ ಬರುವ ಯಾವುದೇ ವ್ಯಕ್ತಿಯು ನಿಫಾ ವೈರಸ್ ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಅಂತಾರೆ ತಜ್ಞರು.












Click it and Unblock the Notifications