ಮಧುರೈ ರೈಲಿನಲ್ಲಿ ಬೆಂಕಿ ಅವಘಡ: 9 ಮಂದಿ ಉತ್ತರ ಪ್ರದೇಶದ ಪ್ರಯಾಣಿಕರ ಸಾವು!
ಮಧುರೈ, ಆಗಸ್ಟ್ 26: ಶನಿವಾರ ಬೆಳಗ್ಗೆ ಮಧುರೈ ರೈಲು ನಿಲ್ದಾಣದಲ್ಲಿ ಪ್ರವಾಸಿಗರ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಘಟನೆಯಲ್ಲಿ 9 ಪ್ರವಾಸಿಗರು ಸಾವನ್ನಪ್ಪಿ ಸುಮಾರು 20 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಬೆಳಗ್ಗೆ 5 ಗಂಟೆಗೆ ಬೆಂಕಿಹೊತ್ತಿಕೊಂಡಿದ್ದು, 7.15 ಕ್ಕೆ ಬೆಂಕಿಯನ್ನ ನಂದಿಸಲಾಗಿದೆ. ರೈಲಿನಲ್ಲಿ ಕೆಲವು ಪ್ರಯಾಣಿಕರು ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗಳನ್ನು ಸಾಗಿಸುತ್ತಿದ್ದು, ಅದರಿಂದಾಗಿಯೇ ಅಗ್ನಿ ಅವಘಡ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೃತ ಪಟ್ಟವರಲ್ಲಿ ಉತ್ತರ ಪ್ರದೇಶದ ಪ್ರವಾಸಿಗರೂ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಡಿವಿಜನಲ್ ರೈಲ್ವೇ ಮ್ಯಾನೇಜರ್ (ಮದುರೈ), ಮತ್ತು ಹೆಚ್ಚುವರಿ ವಿಭಾಗೀಯ ರೈಲ್ವೆ ಮ್ಯಾನೇಜರ್ (ADRM) ಈಗಾಗಲೇ ಸ್ಥಳದಲ್ಲಿದ್ದು, ಜನರಲ್ ಮ್ಯಾನೇಜರ್ (ದಕ್ಷಿಣ ರೈಲ್ವೆ) ಮತ್ತು ಇತರ ಹಿರಿಯ ಅಧಿಕಾರಿಗಳು ಚೆನ್ನೈನಿಂದ ಮಧುರೈಗೆ ಆಗಮಿಸಿದ್ದಾರೆ.
ರೈಲಿಗೆ ಬೆಂಕಿ ಹೊತ್ತಿಕೊಂಡು ಬಲಿಯಾದ ಉತ್ತರ ಪ್ರದೇಶ ಮೂಲದ 9 ಮಂದಿ ಪ್ರಯಾಣಿಕರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ದಕ್ಷಿಣ ರೈಲ್ವೆ ಘೋಷಣೆ ಮಾಡಿದೆ ಇನ್ನೂ ಘಟನೆಯಲ್ಲಿ ಗಾಯಗೊಂಡವರನ್ನು ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಇನ್ನೂ ಬೆಂಕಿಯನ್ನು ಗಮನಿಸಿದ ಅನೇಕ ಪ್ರಯಾಣಿಕರು ಕೋಚ್‌ನಿಂದ ಹೊರ ಬಂದಿದ್ದಾರೆ. ಕೆಲವು ಪ್ರಯಾಣಿಕರು ಪ್ಲಾಟ್‌ಫಾರ್ಮ್‌ನಲ್ಲಿಯೇ ಇಳಿದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಸಿದ್ದಾರೆ. ಘಟನೆ ನಡೆದ ಜಾಗವನ್ನು ಪರಿಶೋಧಿಸಲಾಗಿದ್ದು, ಅದರಲ್ಲಿ ಅಡುಗೆ ಸಿಲಿಂಡರ್, ಗ್ಯಾಸ್ ಸ್ಟೋವ್, ಆಲೂಗೆಡ್ಡೆ ಹಾಗೂ ಮುಂತಾದ ವಸ್ತುಗಳು ಕಂಡುಬಂದಿದೆ.
ಗ್ಯಾಸ್ ಸಿಲಿಂಡರ್ ಸೇರಿದಂತೆ ಯಾವುದೇ ಸ್ಫೋಟಕಗಳು ಹಾಗೂ ಇನ್ನಿತರ ಶೀಘ್ರ ದಹನಕಾರಿ ವಸ್ತುಗಳನ್ನು ರೈಲು ಬೋಗಿಗಳೊಳಗೆ ತರುವುದಕ್ಕೆ ನಿಷೇಧವಿದೆ. ಆದರೂ ರೈಲಿನಲ್ಲಿ ಎಲ್ ಪಿಡಿ ಸಿಲಿಂಡರ್ ಗಳನ್ನು ತಂದಿದ್ದಾರೂ ಹೇಗೆ ಎಂಬುದರ ಬಗ್ಗೆ ತನಿಖೆ ನಡೆಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.












Click it and Unblock the Notifications