Ludhiana Gas Leak: ಪಂಜಾಬ್‌ನ ಲೂಧಿಯಾನದಲ್ಲಿ ಅವಘಡ: ಅನಿಲ ಸೋರಿಕೆಯಾಗಿ 9 ಸಾವು, 11 ಮಂದಿ ಅಸ್ವಸ್ಥ
ಅಮೃತಸರ, ಏಪ್ರಿಲ್. 30: ಪಂಜಾಬ್‌ನಲ್ಲಿ ಭಾನುವಾರ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಲೂಧಿಯಾನಾದ ಗಿಯಾಸ್‌ಪುರ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಗ್ಯಾಸ್ ಸೋರಿಕೆಯಾದ ಘಟನೆಯಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಅಸ್ವಸ್ಥರಾಗಿದ್ದಾರೆ.
ಸ್ಥಳಕ್ಕೆ ರಕ್ಷಣಾ ತಂಡ ಧಾವಿಸಿದ್ದು, ವೈದ್ಯರು, ಆಂಬ್ಯುಲೆನ್ಸ್‌ಗಳು ಮತ್ತು ಅಗ್ನಿಶಾಮಕ ದಳದ ತಂಡವನ್ನು ಕೂಡ ಸ್ಥಳಕ್ಕೆ ರವಾನಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಂತ್ರಸ್ತ ಪ್ರದೇಶವನ್ನು ಸುತ್ತುವರಿದಿದ್ದು ರಕ್ಷಾ ಕಾರ್ಯಾಚರಣೆ ನಡೆಸುತ್ತಿದೆ.

"ಖಂಡಿತವಾಗಿಯೂ ಇದು ಅನಿಲ ಸೋರಿಕೆ ಪ್ರಕರಣವಾಗಿದ್ದು, ಜನರನ್ನು ಸ್ಥಳಾಂತರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಿದೆ. ಈ ಘಟನೆಯಲ್ಲಿ 9 ಜನರು ಸಾವನ್ನಪ್ಪಿದ್ದಾರೆ ಮತ್ತು 11 ಜನರು ಅಸ್ವಸ್ಥರಾಗಿದ್ದಾರೆ" ಎಂದು ಲೂಧಿಯಾನದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸ್ವಾತಿ ತಿವಾನಾ ಎಎನ್‌ಐಗೆ ತಿಳಿಸಿದರು.
ಅನಿಲದ ಸ್ವರೂಪ ಮತ್ತು ಮೂಲಗಳು ಇನ್ನೂ ತಿಳಿದಿಲ್ಲ ಮತ್ತು ಎನ್‌ಡಿಆರ್‌ಎಫ್ ತಂಡವು ಅದನ್ನು ತನಿಖೆ ಮಾಡುತ್ತದೆ. ಸದ್ಯಕ್ಕೆ ಜನನಿಬಿಡ ಪ್ರದೇಶದಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವುದು ತಕ್ಷಣದ ಆದ್ಯತೆಯಾಗಿದೆ ಎಂದು ಹೇಳಿದರು.
#WATCH | Punjab: NDRF personnel reach the spot in Giaspura area of Ludhiana where a gas leak claimed 9 lives; 11 others are hospitalised.
— ANI (@ANI) April 30, 2023
Local officials say that the area has been cordoned off. pic.twitter.com/BuxUEb8SCq
ಘಟನೆ ಸಂಬಂಧ ಟ್ವಿಟ್ ಮಾಡಿರುವ ಮುಖ್ಯಮಂತ್ರಿ ಭಗವಂತ್ ಮಾನ್ , ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ ಮತ್ತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
"ಲೂಧಿಯಾನದ ಗಿಯಾಸ್‌ಪುರ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆಯಾದ ಘಟನೆ ತುಂಬಾ ದುಃಖಕರ. ಪೊಲೀಸರು, ಸರ್ಕಾರ ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿವೆ. ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ. ಶೀಘ್ರದಲ್ಲೇ ಹೆಚ್ಚಿನ ವಿವರಗಳನ್ನು ಹಂಚಿಕೊಲ್ಳಲಾಗುವುದು" ಎಂದು ಪಂಜಾಬಿಯಲ್ಲಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications