ರಿಯಲ್ ಎಸ್ಟೇಟ್ ನಲ್ಲಿ ಜಾಕಿರ್ ನೂರು ಕೋಟಿ ರು. ಬಂಡವಾಳ ಪತ್ತೆ

Posted By:
Subscribe to Oneindia Kannada

ನವದೆಹಲಿ, ಜನವರಿ 19: ವಿವಾದಾತ್ಮಕ ಇಸ್ಲಾಂ ಧರ್ಮ ಬೋಧಕ ಜಾಕಿರ್ ಹುಸೇನ್ ಅವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ 100 ಕೋಟಿ ರು. ಬಂಡವಾಳ ಹೂಡಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಇದರ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಶೀಘ್ರವೇ ಅವರ ವಿಚಾರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಇದರೊಂದಿಗೆ, ಜಾಕಿರ್ ಅವರು, ಭಾರತದಲ್ಲಿ ಸುಮಾರು 78 ಬ್ಯಾಂಕ್ ಖಾತೆಗಳನ್ನು ಹೊಂದಿರುವುದೂ ಗಮನಕ್ಕೆ ಬಂದಿದ್ದು, ಆ ಎಲ್ಲಾ ಖಾತೆಗಳಲ್ಲಿ ಈವರೆಗೆ ನಡೆದಿರುವ ಆರ್ಥಿಕ ವ್ಯವಹಾರಗಳ ವಿವರ ನೀಡುವಂತೆ ಬ್ಯಾಂಕ್ ಗಳಿಗೆ ಎನ್ ಐಎ ಸೂಚಿಸಿದೆ.

NIA may quiz Zakir for his investments of Rs. 100 crore in real estate

ಕಳೆದ ವರ್ಷ ಜಾಕಿರ್ ಅವರ ವಿರುದ್ಧ ಧರ್ಮ ಪ್ರಚಾರದ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿದ್ದಾರೆಂದು ದೂರು ದಾಖಲಾಗಿತ್ತು. ಇದರ ತನಿಖೆಯನ್ನು ಎನ್ಐಎ ವಹಿಸಿಕೊಂಡಿದೆ. ಈವರೆಗಿನ ತನಿಖೆಯ ಪ್ರಕಾರ, ಜಾಕಿರ್ ಜತೆಗೆ ಸುಮಾರು 23 ಸಂಘ, ಸಂಸ್ಥೆಗಳು ಹಾಗೂ ಕಾರ್ಪೊರೇಟ್ ಗಳು ಕೈ ಜೋಡಿಸಿದ್ದು ಅವುಗಳ ಜಾಕಿರ್ ಹಿಂದಿನ ಆರ್ಥಿಕ ಶಕ್ತಿಯಾಗಿವೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
National Investigating Agency (NIA) which is investigaition about Islam preacher Zakir Naik, may quiz him on finding his investment about 100 crore in real estate sector.
Please Wait while comments are loading...