ಝಾಕೀರ್ ನಾಯಕ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ
ಮುಂಬೈ, ಅಕ್ಟೋಬರ್ 26: ವಿವಾದಿತ ಮುಸ್ಲಿಂ ಧರ್ಮ ಪ್ರಚಾರಕ ಝಾಕೀರ್ ನಾಯಕ್ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಚಾರ್ಜ್ ಶೀಟ್ ಸಲ್ಲಿಸಿದೆ.
ಇಂದು ವಿಶೇಷ ನ್ಯಾಯಾಲಯಕ್ಕೆ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ. ಪ್ರಚೋದನಕಾರಿ ಭಾಷಣ ಮತ್ತು ಉಗ್ರ ಚಟುವಟಿಕೆ ನಡೆಸಲು ಯುವಕರನ್ನು ಪ್ರೇರೇಪಿಸುತ್ತಿದ್ದ ಆರೋಪವನ್ನು ನಾಯಕ್ ಮೇಲೆ ಚಾರ್ಜ್ ಶೀಟ್ ನಲ್ಲಿ ಹೊರಿಸಲಾಗಿದೆ.

ಹಣಕಾಸು ಅವ್ಯವಹಾರದ ಆರೋಪವನ್ನೂ ಹೊತ್ತಿರುವ ಝಾಕೀರ್ ನಾಯಕ್ ಭಾರತದಿಂದ ಓಡಿ ಹೋಗಿ, ಬಂಧನ ರಹಿತ ವಾರೆಂಟ್ ಜಾರಿಯಾಗಿದ್ದರೂ ವಿದೇಶದಲ್ಲಿ ಅಡಗಿದ್ದಾನೆ.
ಇದೆಲ್ಲದರ ಮಧ್ಯೆ ಕಳೆದ ಮೇನಲ್ಲಿ ಝಾಕೀರ್ ನಾಯಕ್ ಮಲೇಷ್ಯಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ ಎಂಬ ಸುದ್ದಿಯೂ ಹರಿದಾಡಿತ್ತು.












Click it and Unblock the Notifications