ಭಯೋತ್ಪಾದನೆಗೆ ಹಣ ಸಂಗ್ರಹ : NIAಯಿಂದ ದಾವೂದ್ ಇಬ್ರಾಹಿಂ, ಶಕೀಲ್ ಸೇರಿ ಐವರ ವಿರುದ್ಧ ಚಾರ್ಚ್‌ಶೀಟ್
ನವದೆಹಲಿ, ನವೆಂಬರ್ 5: ಭಯೋತ್ಪಾದನೆಗೆ ಹಣ ಸಂಗ್ರಹಿಸುತ್ತಿದ್ದ ಆರೋಪದ ಮೇಲೆ ದೇಶದಿಂದ ಪರಾರಿಯಾಗಿರುವ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ಹಾಗೂ ಆತನ ಸಹಚರ ಚೋಟಾ ಶಕೀಲ್ ಹಾಗೂ ಬಂಧಿತರಾಗಿರುವ ದಾವೂದ್‌ನ ಡಿ ಕಂಪನಿಯ ಇತರೆ ಮೂವರು ಸದಸ್ಯರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ.
ಬಂಧಿತ ಆರೋಪಿಗಳು ಮುಂಬೈ ಮತ್ತು ದೇಶದ ಇತರೆ ಪ್ರದೇಶಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಎನ್‌ಎನ್ಐ ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ.

ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕರು ಎಂದು ಗುರುತಿಸಲ್ಪಟ್ಟಿರುವ ದಾವೂದ್ ಇಬ್ರಾಹಿಂ ಹಾಗೂ ಶಕೀಲ್ ಹೊರತುಪಡಿಸಿ ಎನ್‌ಐಎ ಬಂಧಿಸಿರುವ ಆರಿಫ್ ಅಬೂಬಕರ್ ಶೇಖ್ ಅಲಿಯಾಸ್ ಆರಿಫ್ ಭಾಯಿಜಾನ್, ಶಬ್ಬೀರ್ ಅಬೂಬಕರ್ ಶೇಖ್ ಮತ್ತು ಮೊಹಮ್ಮದ್ ಸಲೀಂ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್ ಎಂಬುವವರನ್ನು ಐಎನ್‌ಎ ಹೊಸ ಚಾರ್ಜ್‌ಶೀಟ್‌ನಲ್ಲಿ ಸೇರಿಸಿದೆ.
ವಿಶ್ವದಲ್ಲಿ ಭಯೋತ್ಪಾದಕ ಗ್ಯಾಂಗ್ ಎಂದು ಗುರುತಿಸಿಕೊಂಡಿರುವ ಡಿ-ಕಂಪನಿ ಸದಸ್ಯರಾಗಿರುವ ಬಂಧಿತ ಆರೋಪಿಗಳು ವಿವಿಧ ರೀತಿಯ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಮೂಲಕ ಗ್ಯಾಂಗ್‌ನ ಅಪರಾಧ ಚಟುವಟಿಕೆಗಳನ್ನು ದೇಶದಲ್ಲಿ ಮತ್ತಷ್ಟು ಹೆಚ್ಚಿಸಲು ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ದೃಢಪಟ್ಟಿದೆ.
ಅಲ್ಲದೆ ಆರೋಪಿಗಳು ಹಲವು ಜನರಿಗೆ ಬೆದರಿಕೆ ಹಾಗೂ ಕೆಲವು ವ್ಯಕ್ತಿಗಳಿಗೆ ಮಾರಣಾಂತಿಕ ಹಲ್ಲೆ ಮಾಡಿ ಸಾವಿನ ಭಯವನನ್ನು ಉಂಟು ಮಾಡಿ ಅಪಾರ ಪ್ರಮಾಣದ ಹಣವನ್ನು ಸಂಗ್ರಹಿಸಿದ್ದಾರೆ. ಈ ಮೂಲಕ ಜನರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸುವ ಹಾಗೂ ಭಾರತದ ಭದ್ರತಾ ವ್ಯವಸ್ಥೆಯ ಧಕ್ಕೆಯನ್ನುಂಟು ಮಾಡುವ ಉದ್ಧೇಶ ಇವರು ಹೊಂದಿದ್ದರು ಎಂದು ಎನ್‌ಐಎ ತಿಳಿಸಿದೆ.
ಬಂಧಿತ ಆರೋಪಿಗಳು ಮುಂಬೈ ಮತ್ತು ಭಾರತದ ಇತರ ಭಾಗಗಳಲ್ಲಿ ಜನರಲ್ಲಿ ಭಯವನ್ನು ಸೃಷ್ಟಿಸಲು ಭಯೋತ್ಪಾದನಾ ಚಟುವಟಿಕೆಗಳಿಗೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅಪರಾಧಿಗಳಿಂದ ಹವಾಲಾ ಚಾನೆಲ್‌ಗಳ ಮೂಲಕ ಅಪಾರ ಪ್ರಮಾಣದ ಹಣವನ್ನು ಪಡೆದಿದ್ದಾರೆ. ಜೊತೆಗೆ ಆರೋಪಿಗಳು ಭಯೋತ್ವಾದನೆಯ ಮೂಲಕ ಆದಾಯಗಳಿಸುತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.












Click it and Unblock the Notifications