ರೈಲ್ವೆಯಲ್ಲಿ ಎಫ್ ಡಿಐ ಹೂಡಿಕೆಗೆ ಕಾರ್ಮಿಕರ ವಿರೋಧ

ಕಾನ್ಪುರ, ಜ. 11 : ಭಾರತೀಯ ರೈಲ್ವೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ(ಎಫ್ ಡಿಐ) ಅವಕಾಶ ನೀಡುವ ಕೇಂದ್ರ ಸರ್ಕಾರದ ಕ್ರಮಕ್ಕೆ ವಿಘ್ನ ಎದುರಾಗಿದೆ. ಕೇಂದ್ರ ಸರ್ಕಾರದ ನೀತಿಯನ್ನು ಭಾರತೀಯ ರೈಲ್ವೆ ಕಾರ್ಮಿಕರ ರಾಷ್ಟ್ರೀಯ ಒಕ್ಕೂಟ (ಎನ್ ಐ ಎಫ್ ಆರ್ ) ವಿರೋಧಿಸಿದೆ. ಅಲ್ಲದೇ ಜೂನ್ 2015ರಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿವ ಬೆದರಿಕೆಯೊಡ್ಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಎನ್ ಐ ಎಫ್ ಆರ್ ಪ್ರಧಾನ ಕಾರ್ಯದರ್ಶಿ ರಾಘವಯ್ಯ, ರೈಲ್ವೆ ಇಲಾಖೆಯಲ್ಲಿ ಎಫ್ ಡಿಐ ಅಳವಡಿಸುವ ಯಾವ ಅನಿವಾರ್ಯವಿಲ್ಲ. ಕೇಂದ್ರ ಸರ್ಕಾರ ನಿಧಾನವಾಗಿ ವಿದೇಶಿಗರ ಕೈಗೆ ಇಲಾಖೆಯನ್ನು ಕೊಡಲು ಹೊರಟಂತೆ ಕಾಣುತ್ತಿದ್ದು ಇದು ಮೊತ್ತೊಂದು ಈಸ್ಟ್ ಇಂಡಿಯಾ ಕಂಪನಿ ಆಡಳಿತಕ್ಕೆ ಕಾರಣವಾಗುತ್ತದೆ ಎಂದು ಆರೋಪಿಸಿದ್ದಾರೆ.[ಮೈಸೂರು : ಮತ್ತೊಂದು ರೈಲ್ವೆ ಟಿಕೆಟ್ ಕೌಂಟರ್ ಆರಂಭ]

india

ನಿಜವಾಗಿ ಇಲಾಖೆ ನಷ್ಟ ಅನುಭವಿಸುತ್ತಿದ್ದರೆ ರೈಲ್ವೆ ಇಲಾಖೆ ಕಾರ್ಮಿಕರ ಭವಿಷ್ಯ ನಿಧಿಯಿಂದ ಸಾಲ ಪಡೆದು ಸವಕಾಶವಾಗಿ ತೀರಿಸಬಹುದು. ಅಲ್ಲದೇ ನೌಕರರ ಸಂಬಳದಲ್ಲಿಯೇ ಸ್ವಲ್ಪ ಭಾಗವನ್ನು ಸಾಲವಾಗಿ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

ಪ್ರಯಾಣ ದರವನ್ನು ಕೊಂಚ ಹೆಚ್ಚುಮಾಡಿ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಿ ಜನರನ್ನು ಸೆಳೆಯಬಹುದು. ಪ್ರವಾಸೋದ್ಯಮಕ್ಕೆ ನೆರವಾಗುವಂಥ ವಿಶೇಷ ರೈಲುಗಳ ವ್ಯವಸ್ಥೆ, ಅಗತ್ಯವಿದ್ದಡೆ ಬುಲೆಟ್ ಟ್ರೇನ್ ಬಿಡಬಹುದು ಎಂದು ಹೇಳಿದ್ದಾರೆ. ಸಂಘಟನೆ ಈ ವಿಚಾರವನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಅವರ ಗಮನಕ್ಕೂ ತಂದಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+