ಉಪರಾಷ್ಟ್ರಪತಿ ಚುನಾವಣೆ: ಗೋಪಾಲ ಕೃಷ್ಣ ಗಾಂಧಿ ವಿಪಕ್ಷಗಳ ಅಭ್ಯರ್ಥಿ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜುಲೈ 18: ಉಪರಾಷ್ಟ್ರಪತಿ ಚುನಾವಣೆಗೆ ಮಹಾತ್ಮಾ ಗಾಂಧಿಯವರ ಮೊಮ್ಮಗ ಗೋಪಾಲ ಕೃಷ್ಣ ಗಾಂಧಿಯವರನ್ನು ತಮ್ಮ ಒಮ್ಮತದ ಅಭ್ಯರ್ಥಿಯಾಗಿ ವಿಪಕ್ಷಗಳು ಆಯ್ಕೆ ಮಾಡಿವೆ.

ಇಂದು ನಡೆದ ವಿಪಕ್ಷಗಳ ಸಭೆಯಲ್ಲಿ 18 ಪಕ್ಷಗಳು ಅವಿರೋಧವಾಗಿ ಗೋಪಾಲಕೃಷ್ಣ ಗಾಂಧಿಯವರನ್ನು ತಮ್ಮ ಅಭ್ಯರ್ಥಿಯಾಗಿ ಆಯ್ಕೆ ಮಾಡಿದವು.

Next Vice-President: Opposition picks Gopal Krishna Gandhi

ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿಯವರ ಹೆಸರು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಮಯದಲ್ಲಿಯೂ ಕೇಳಿ ಬಂದಿತ್ತು. ಕೊನೆಗೆ ಮೀರಾ ಕುಮಾರ್ ರನ್ನು ವಿಪಕ್ಷಗಳ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು.

ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಮೊಮ್ಮಗನಾಗಿರುವ ಗೋಪಾಲ ಕೃಷ್ಣ ಗಾಂಧಿ 2004-2009ರ ಮಧ್ಯೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅವರಿಗೆ ಗಾಂಧಿ ಬಹಿರಂಗ ಪತ್ರವೊಂದನ್ನು ಬರೆದಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

1946, ಏಪ್ರಿಲ್ 22ರಂದು ಹುಟ್ಟಿದ ಗೋಪಾಲ ಕೃಷ್ಣ ಗಾಂಧಿ ಭಾರತದ ಆಡಳಿತ ಸೇವೆಯಲ್ಲಿದ್ದರು. ಭಾರತದ ರಾಯಭಾರಿಯಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಅಧಿಕಾರಿಯಾಗಿದ್ದ ವೇಳೆ ಭಾರತದ ರಾಷ್ಟ್ರಪತಿಗಳ ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸಿದ್ದರು. ಅವರು ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ದೇಶಗಳಿಗೆ ಭಾರತ ರಾಯಭಾರಿಯಾಗಿದ್ದರು.

Next Vice-President: Opposition picks Gopal Krishna Gandhi

ಚುನಾವಣಾ ವೇಳಾಪಟ್ಟಿ
ನಾಮಪತ್ರ ಸಲ್ಲಿಸಲು ಕೊನೆಯ ದಿನ-ಜುಲೈ 18
ನಾಮಪತ್ರ ಪರಿಶಿಲನೆ-ಜುಲೈ 19
ನಾಮಪತ್ರ ಹಿಂತೆಗೆತ-ಜುಲೈ 21
ಮತದಾನ - ಆಗಸ್ಟ್ 5
ಮತ ಎಣಿಕೆ -ಆಗಸ್ಟ್ 5

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The opposition has named Gopal Krishna Gandhi as its candidate for the post of next Vice President of India. The decision to name Gandhi was taken at a meeting of the joint opposition held at New Delhi just a while ago.
Please Wait while comments are loading...