ನಿಯೋಜಿತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವ್ಯಕ್ತಿಚಿತ್ರ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 5: ಬಹುನಿರೀಕ್ಷಿತ ಉಪರಾಷ್ಟ್ರಪತಿ ಚುನಾವಣೆಗೆ ಇಂದು ಬೆಳಗ್ಗೆ ಮತದಾನ ನಡೆದಿದ್ದು, ಈಗಾಗಲೇ ಅಧಿಕೃತ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಯಂತೆಯೇ ಎನ್ ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಅವರು ಭಾರತದ ಮುಂದಿನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.

ಹಾಲಿ ಉಪರಾಷ್ಟ್ರಪತಿ ಹಮಿದ್ ಅನ್ಸಾರಿ ಅವರ ಅಧಿಕಾರಾವಧಿ ಆಗಸ್ಟ್ 10 ರಂದು ಮುಕ್ತಾಯವಾಗಲಿದ್ದು, ಭಾರತದ ಮುಂದಿನ ಉಪರಾಷ್ಟ್ರಪತಿಯಾಗಿ ಐದು ವರ್ಷಗಳ ಕಾಲ ವೆಂಕಯ್ಯ್ ನಾಯ್ಡು ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆ

ಭಾರತದ ನಿಯೋಜಿತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.

ಕೃಷಿಕ ಕುಟುಂಬದ ಹಿನ್ನೆಲೆ

ಕೃಷಿಕ ಕುಟುಂಬದ ಹಿನ್ನೆಲೆ

- ಆಂಧ್ರದ ನೆಲ್ಲೂರು ಜಿಲ್ಲೆಯ ಚಾವಟಪಾಲೆಂನಲ್ಲಿ 1949ರ ಜುಲೈ 1ರಂದು ಜನನ.
- ತಂದೆ ರಂಗಯ್ಯ ಮತ್ತು ತಾಯಿ ರಮಣಮ್ಮ ಕೃಷಿಕರು.
- ಶಾಲಾ ದಿನಗಳಲ್ಲೇ ಆರ್ ಎಸ್ ಎಸ್ ಮತ್ತು ಎಬಿವಿಪಿ ನಂಟು.

ಉಷಾ ಅವರೊಂದಿಗೆ ವಿವಾಹ

ಉಷಾ ಅವರೊಂದಿಗೆ ವಿವಾಹ

- ಆಂಧ್ರ ವಿಶ್ವವಿದ್ಯಾಲಯ ಕಾನೂನು ಕಾಲೇಜಿನಿಂದ ಅಂತಾರಾಷ್ಟ್ರೀಯ ಕಾನೂನಿನಲ್ಲಿ ಪದವಿ.
- ವಿದ್ಯಾರ್ಥಿಯಾದಾಗಿನಿಂದಲೂ ಉತ್ತಮ ವಾಗ್ಮಿ ಎಂಬ ಹೆಗ್ಗಳಿಕೆ.
- 1971 ಏಪ್ರಿಲ್ 14 ರಂದು ಎಂ.ಉಷಾ ಅವರೊಂದಿಗೆ ವಿವಾಹ.

ಎಂಎಲ್ಎ, ಸಂಸದ

ಎಂಎಲ್ಎ, ಸಂಸದ

- ಇಬ್ಬರು ಮಕ್ಕಳು (ಒಬ್ಬ ಮಗಳು, ಒಬ್ಬ ಮಗ)
- 1972 ರಲ್ಲಿ ಜೈ ಆಂಧ್ರ ಚಳವಳಿಯಲ್ಲಿ ಭಾಗಿ
- 1978 ಮತ್ತು 1983ರಲ್ಲಿ ನೆಲ್ಲೂರು ಜಿಲ್ಲೆಯ ಉದಯಗಿರಿ ಕ್ಷೇತ್ರದಿಂದ ಎರಡು ಬಾರಿ ವಿಧಾನಸಭೆಗೆ ಆಯ್ಕೆ
- 1998ರಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ

- ಅಲ್ಲಿಂದ ಬಿಜೆಪಿಯಲ್ಲಿ ಉನ್ನತ ಮಟ್ಟಕ್ಕೆ ಬೆಳೆದ ವೆಂಕಯ್ಯ ನಾಯ್ಡು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡರು.
- 2002ರಿಂದ 2004ರವರೆಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಕೆಲಸ ನಿರ್ವಹಣೆ.
- 2004 ಹಾಗೂ 2010ರಲ್ಲಿ ಕರ್ನಾಟಕದಿಂದಲೇ ರಾಜ್ಯಸಭೆಗೆ ಮರು ಆಯ್ಕೆ.

Ram Nath Kovind, 14th Indian President :Few Interesting Facts Said In The Video | Oneindia Kannada
ಉಪರಾಷ್ಟ್ರಪತಿಯಾಗಿ ಆಯ್ಕೆ

ಉಪರಾಷ್ಟ್ರಪತಿಯಾಗಿ ಆಯ್ಕೆ

-2014-2017 ರಲ್ಲಿ ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಣೆ
-2016-2017 ರಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ಕಾರ್ಯನಿರ್ವಹಣೆ
- 2017, ಜುಲೈ 17ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ.
- 2017 ಆಗಸ್ಟ್ 5 ಉಪರಾಷ್ಟ್ರಪತಿಯಾಗಿ ಆಯ್ಕೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Venkaiah Naidu, NDA candidate for India's vice president has elected as next vice president of India on August 5th. Here is his brief profile.
Please Wait while comments are loading...