Delhi Cold Wave: ದೆಹಲಿಯಲ್ಲಿ ಅತೀ ಕನಿಷ್ಠ ಉಷ್ಣಾಂಶ ದಾಖಲು: ಜ. 21ರವರೆಗೆ ಯೆಲ್ಲೋ ಅಲರ್ಟ್
ನವದೆಹಲಿ, ಜನವರಿ 16: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಳಿ ತೀವ್ರಗತಿಯಲ್ಲಿ ಹೆಚ್ಚಾಗಿದ್ದು, ಇದು ಮುಂದಿನ ಆರು ದಿನಗಳವರೆಗೆ ಮುಂದುವರಿಯಲಿದೆ. ಇಲ್ಲಿನ ಕನಿಷ್ಠ ತಾಪಮಾನ ಸೋಮವಾರ ಬೆಳಗ್ಗೆ 1 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಮುನ್ಸೂಚನಾ ವರದಿ ಪ್ರಕಾರ ಮುಂದಿನ ಆರು ದಿನ ದೆಹಲಿಯಲ್ಲಿ ಶೀತ ಅಲೆಗಳು ಸಕ್ರಿಯವಾಗಿರಲಿವೆ. ಈ ಪೈಕಿ ಮುಂದಿನ ಮೂರು ದಿನ ಮಾತ್ರ ಮೈ ಕೊರೆವ ಚಳಿ ಕಂಡು ಬರಲಿದೆ. ಈ ಕಾರಣಕ್ಕೆ IMD ದೆಹಲಿಗೆ ಸೋಮವಾರದಿಂದ ಮುಂದಿನ ಆರು ದಿನ (ಜ.21) ಹಳದಿ ಎಚ್ಚರಿಕೆ ನೀಡಿದೆ.
ತೀವ್ರ ಶೀತಗಾಳಿ ಹಿನ್ನಲೆಯಲ್ಲ ದೆಹಲಿ ಮುಂದಿನ 6 ದಿನ ಗಳ ಪೈಕಿ ಮೊದಲ ಮೂರು ದಿನ ಅಂದರೆ ಜನವರಿ 18ರವರೆಗೆ ದೆಹಲಿ ನಗರದಲ್ಲಿ ನಿರೀಕ್ಷೆಗಿಂತಲೂ ಶೀತ ಅಲೆಗಳು ತರಂಗವನ್ನು ಮೀರಿದೆ. ದಟ್ಟವಾದ ಮಂಜು ಬೀಳುವ ಸಾಧ್ಯತೆ ಇದೆ. ತಾಪಮಾನವು 2 ಡಿಗ್ರಿಗಳಿಗೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ. ದೆಹಲಿಯ ಜನರು ಮುಂದಿನ ಒಂದು ವಾರ ಮತ್ತೆ ಅತ್ಯಧಿಕ ಚಳಿ, ದಟ್ಟ ಮಂಜಿಗೆ ಸಾಕ್ಷಿಯಾಗಲಿದ್ದಾರೆ. ಇತ್ತ ವೈದ್ಯರು ಆರೋಗ್ಯ ಬಗ್ಗೆ ಕಾಳಜಿ ವಹಿಸಿ, ಚಳಿಗೆ ಮೈಯೊಡ್ಡದಂತೆ ಸಲಹೆ ನೀಡಿದ್ದಾರೆ.

ಬುಧವಾರದವರೆಗೆ ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಕೆಲವು ರಾಜ್ಯಗಳಲ್ಲಿ ತೀವ್ರ ಶೀತದ ಅಲೆಗಳು ಆವರಿಸುವ ಲಕ್ಷಣಗಳು ಇವೆ. ದೆಹಲಿಯಲ್ಲಿ ಮಂಗಳವಾರವು ಕನಿಷ್ಠ ತಾಪಮಾನ ತೀರಾ ಕಡಿಮೆ ಕಂಡು ಬರಲಿದೆ. ನಂತರ ತುಸು ಹೆಚ್ಚಾಗುವ ಸಾಧ್ಯತೆ ಇದೆ. ಡಿಸೆಂಬರ್ 22ರ ವೇಳೆಗೆ ಕನಿಷ್ಠ 5 -7ಡಿಗ್ರಿ ಸೆಲ್ಸಿಯಸ್ ಹೆಚ್ಚಾಬಹುದು ಎನ್ನಲಾಗಿದೆ. ಈ ವೇಳೆ ಗರಿಷ್ಠ ತಾಪಮನ 19-22 ಡಿಗ್ರಿ ಸೆಲ್ಸಿಯಸ್ ಆಗಿರಲಿದೆ.
ತೀವ್ರ ಚಳಿ: 13 ರೈಲಿನಲ್ಲಿ ಸಂಚಾರ ವಿಳಂಬ
ಈ ಕಾರಣದಿಂದ ದೆಹಲಿ ನಾಗರಿಕರು ಬುಧವಾರದಿಂದ ನಿಟ್ಟು ಬಿಡಬಹುದಾದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ.
ಸದ್ಯ ಸೋಮವಾರ ಬೆಳಗ್ಗೆ ನಗರಾದ್ಯಂತ ದಟ್ಟ ಮಂಜು ಆವರಿಸಿದೆ. ಕನಿಷ್ಠ ತಾಪಮಾನ 1 ಡಿಗ್ರಿ ಸೆಲ್ಸಿಯಸ್ ಗೆ ಇಲಾಖೆ ಆಗಿದ್ದು, ಇದು ಕಳೆದ ಹತ್ತು ವರ್ಷಗಳಲ್ಲೇ ಅತ್ಯಂತ ಕನಿಷ್ಠ ತಾಪಮಾನ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಸೋಮವಾರ ಬೆಳಗ್ಗೆ ದಟ್ಟ ಮಂಜಿನ ವಾತಾವರಣ ಕಂಡು ಬಂತು ಈ ಕಾರಣಕ್ಕಾಗಿ ಉತ್ತರ ರೈಲ್ವೆ ಪ್ರದೇಶದಲ್ಲಿ 13 ರೈಲುಗಳು ತಡವಾಗಿ ಓಡಲಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಧಾರಬಾಂಗ್- ನವದೆಹಲಿ (ರೈಲಿನ ಸಂಖ್ಯೆ- 02569), ಪುರಿ-ನವದೆಹಲಿ ಪುರಷೋತ್ತಮ್ ಎಕ್ಸಪ್ರೆಸ್ (ಸಂಖ್ಯೆ-12801), ಗಯಾ- ದೆಹಲಿ ಎಕ್ಸಪ್ರೆಸ್ (ಸಂಖ್ಯೆ- 12397), ದಿಬ್ರುಗರ್- ದೆಹಲಿ (ಸಂಖ್ಯೆ-12423), ಉದಮ್ ಪುರ್- ದೆಹಲಿ (ಸಂಖ್ಯೆ-22402) ಸೇರಿದಂತೆ ಒಟ್ಟು ಹದಿಮೂರು ರೈಲುಗಳು ನಿಗದಿತ ಸಮಯಕ್ಕೆ ತಡವಾಗಿ ಹೊರಡಲಿವೆ.












Click it and Unblock the Notifications